ಜನರ ಗಮನಕ್ಕೆ ತರದೇ ರಸ್ತೆ ಅಗಲೀಕರಣಕ್ಕೆ ಮುಂದಾದ ಗ್ರಾಪಂ : ಬಡ ಕುಟುಂಬ ಬೀದಿಗೆ : ರಸ್ತೆ ಅಗಲೀಕರಣಕ್ಕೆ ವಿರೋಧ
ಕಂಪ್ಲಿ 01 : ತಾಲೂಕಿನ ಎಮ್ಮಿಗನೂರು ಗ್ರಾಮದ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ದೌರ್ಜನ್ಯದಿಂದ ರಸ್ತೆ ಅಗಲೀಕರಣಕ್ಕೆ ಗ್ರಾಮ ಪಂಚಾಯತಿ ಆಡಳಿತ ಮುಂದಾಗಿದ್ದು, ಇದರಿಂದ ಬಡ ಕುಟುಂಬ ಬಡವರ ಬದುಕಿಗೆ ತಣ್ಣೀರು ಎರಚುವ ಕೆಲಸಕ್ಕೆ ಕೈಯಾಕಿದ್ದು, ಕೂಡಲೇ ಸಂಬಂಧಪಟ್ಟ ಸದಸ್ಯರು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿ, ಇಲ್ಲಿನ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇಲ್ಲಿನ ಸೊಸೈಟಿ ಬಳಿಯ ಕಟ್ಟೆಯಲ್ಲಿ ರಸ್ತೆ ಅಗಲೀಕರಣ ವಾಸವಿರುವ ಜಮಾಯಿಸಿದ ಜನರು ಶನಿವಾರ ಪತ್ರಕರ್ತರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು. ನಂತರ ಮುಖಂಡರಾದ ಬಿ.ಶೇಕಣ್ಣ ಮತ್ತು ಪಿ.ಯಂಕಾರೆಡ್ಡಿ ಮಾತನಾಡಿ, ಎಮ್ಮಿಗನೂರು ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಸುಮಾರು ವರ್ಷಗಳಿಂದ 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ., ಈಗ ಗ್ರಾಪಂಯವರು ಜನರ ಅಭಿಪ್ರಾಯ ಸಂಗ್ರಹಿಸದೇ, ಅವರ ಗಮನಕ್ಕೆ ತರದೇ, ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದು ವಿಪರ್ಯಾಸವಾಗಿದೆ. ಗ್ರಾಮದ ಕಂಪ್ಲಿ ರಸ್ತೆಯ ಹಳ್ಳದಿಂದ ಕುರುಗೋಡು ರಸ್ತೆಯ ಇಂಡಿಯಾನ್ ಪೆಟ್ರೋಲ್ ಬಂಕ್ ಬಳಿಯವರೆಗೆ ಸುಮಾರು ಒಂದುವರೆ ಕಿ.ಮೀ.ವರೆಗೆ ರಸ್ತೆ ಅಗಲೀಕರಣ ಮಾಡಲು ಮುಂದಾಗಿದ್ದಾರೆ. ಇಲ್ಲಿನ ಮನೆಯವರಿಗೆ ನೋಟೀಸ್ ನೀಡದೇ, ಈಗಾಗಲೇ ಮಾರ್ಕ್ ಹಾಕಲಾಗಿದೆ. ಇಲ್ಲಿನ ರಸ್ತೆ ಮಧ್ಯದಿಂದ ಮೊದಲಿಗೆ 35: 35 ಅಡಿ ಅಗಲೀಕರಣಕ್ಕೆ ಚಿಹ್ನೆ ಗುರುತಿಸಿ, ಎರಡನೇ ಬಾರಿಗೆ 30:30 ಅಡಿಯಷ್ಟು ಗುರುತಿಸಲಾಗಿದೆ. 35 ಅಡಿ ಹೊಡೆದರೆ, ಮನೆಗಳು ಉಳಿಯುವದಿಲ್ಲ. ಅಭಿವೃದ್ಧಿಗೆ ಸಹಕಾರವಿದೆ. ಆದರೆ, ಅಭಿವೃದ್ಧಿ ಹೆಸರಲ್ಲಿ ಇಲ್ಲಿನ ಕುಟುಂಬಗಳನ್ನು ಬೀದಿಗೆ ತರಲು ಹೊರಟಿದ್ದಾರೆ. ಶಾಸಕ, ಗ್ರಾಪಂ ಆಡಳಿತ, ಅಧಿಕಾರಿ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ರಸ್ತೆ ಅಗಲೀಕರಣಕ್ಕೆ ದಾಖಲಾತಿ ಕೇಳಿದರೆ, ನಿಮಗೇಕೆ ಕೊಡಬೇಕೆಂದು ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ವಾರ್ಡಿನ ಸದಸ್ಯರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್‌ಆದ್ದರಿಂದ ಇಲ್ಲಿನ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದರು.ಮುಖಂಡರಾದ ಸಾಹಿಬಣ್ಣ, ಸಾದಕ್ ಅಲಿಸಾಬ್, ಕಾಸಿಂಸಾಬ್, ವಿಜಯಕುಮಾರ, ಶೇಖಮ್ಮ, ಸಾಸಾವಲಿ, ದೊಡ್ಡಪೀರಸಾಬ್, ಯಲ್ಲಪ್ಪ, ನಾಯಕರ ಜಡೆಪ್ಪ, ಮೌಲಪ್ಪ, ಬಸವರಾಜ, ಕೆ.ಬಸಪ್ಪ, ಪೀರಸಾಬ್, ಇಮಾಮ್‌ಸಾಬ್, ಈರಣ್ಣ, ಮೌಲಾಸಾಬ್ ಸೇರಿದಂತೆ ಇತರರು ಇದ್ದರು.
ಮಾ001ಎಮ್ಮಿಗನೂರು ಗ್ರಾಮದ ಇಲ್ಲಿನ ಸೊಸೈಟಿ ಬಳಿಯ ಕಟ್ಟೆಯಲ್ಲಿ ರಸ್ತೆ ಅಗಲೀಕರಣ ವಾಸವಿರುವ ಜಮಾಯಿಸಿದ ಜನರು ಶನಿವಾರ ಪತ್ರಕರ್ತರೊಂದಿಗೆ ತಮ್ಮ ನೋವು ತೋಡಿಕೊಂಡರು.