ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಜಾತಿಯ ಜಾನುವಾರುಗಳನ್ನು ರೈತರು ಸಂಗೋಪಣೆ
ಸಂಬರಗಿ 28: ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಜಾತಿಯ ಜಾನುವಾರುಗಳನ್ನು ರೈತರು ಸಂಗೋಪಣೆ ಮಾಡುತ್ತಾರೆ. ಒಳ್ಳೆಯ ಜಾನುವಾರುಗಳನ್ನು ಆಯ್ಕೆ ಮಾಡಿ ಅವರಿಗೆ ಬಹುಮಾನ ನೀಡಿ ಪ್ರೊತ್ಸಾಹ ನೀಡುತ್ತಿದ್ದೆವೆ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಜ್ಞಾನೇಶ್ವರ ಕಾಂಬಳೆ ಹೇಳಿದರು.
ಜಂಬಗಿ ಗ್ರಾಮದಲ್ಲಿ ತಾಲೂಕಾ ಮಟ್ಟದ ಆರೋಗ್ಯವಂತ ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ರೈತರಿಗೆ ಪ್ರೊತ್ಸಾಹ ನೀಡಿದರು. ಪ್ರತಿ ವರ್ಷ ಸರ್ಕಾರದ ಆದೇಶದ ಪ್ರಕಾರ ಗ್ರಾಮೀಣ ಭಾಗದಲ್ಲಿ ತಾಲೂಕಿನ ವಿವಿಧ ಜಾತಿಯ ಜಾನುವಾರುಗಳ ಪ್ರದರ್ಶನ ಏರಿ್ಡಸಿ, ಒಳ್ಳೆಯ ಜಾತಿಯ ಜಾನುವಾರುಗಳ ಆಯ್ಕೆ ಮಾಡಿ ಅವರಿಗೆ ಬಹುಮಾನ ನೀಡುತ್ತೇವೆ. ಆ ಕಾರಣ ತಾಲೂಕಿನಲ್ಲಿ ಜಾನುವಾರುಗಳ ಸಂಖ್ಯೆ ದಿನ ದಿನಕ್ಕೆ ಹೆಚ್ಚುತ್ತಿದೆ. ಪಶು ಸಂಗೋಪಣೆ ಇಲಾಖೆಯಿಂದ ಸರ್ಕಾರವು ಜಾನುವಾರುಗಳ ಸಾಕಾಣಿಕೆ ಮಾಡಲು ಸರ್ಕಾರದಿಂದ ವಿವಿಧ ಯೋಜನೆ ಜಾರಿಗೆ ಬಂದಿದ್ದಾವೆ. ಅವುಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ರವಿ ವಾಘಮೋರೆ, ಉಪಾಧ್ಯಕ್ಷರಾದ ಬಾಬು ದೇವಖಾತೆ, ಡಾ. ಎಮ್.ಎಸ್. ಹುಂಡೆಕರ, ಡಾ. ಅವಿನಾಶ ಹಳ್ಳೋಳ್ಳಿ, ಸುನಿಲ ಪಾಟೀಲ, ಶ್ರೀಮತಿ ಮಂಗಲಾ ಕುರಣೆ, ಲಕ್ಷ್ಮಣ ಹಾದಿಮನಿ, ದತ್ತಾ ಜಾಧವ, ರಾಜು ಭೋಸಲೆ, ಸಾಗರ ಧರೆಕರ, ವಿಜಯ ಅಡಹಳ್ಳಿ, ಮೋಹನ ರಣದೇವಿ ಸೇರಿದಂತಹ ನೂರಾರು ರೈತರು ಪಾಲ್ಗೊಂಡಿದ್ದರು.
ಫೋಟೋ ಶಿರ್ಷಿಕೆ:
ಜಂಬಗಿ ಗ್ರಾಮದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರು ಡಾ. ಜ್ಞಾನೇಶ್ವರ ಕಾಂಬಳೆ, ವಿಸ್ತೀಣಾಧಿಕಾರಿ ಎಮ್.ಎಸ್. ಹುಂಡೆಕರ, ಮಂಗಲ ಕುರಣೆ ಸೇರಿ ಜಾನುವಾರುಗಳ ಪರೀಶೀಲಣೆ ಮಾಡಿದ ದೃಶ್ಯ. (28 ಸಂಬರಗಿ 1)
ಬಾಕ್ಸ್:
ಜಾನುವಾರುಗಳ ಆಯ್ಕೆ ಮಾಡಿದ ವಿವರ. ಎಚ್.ಎಫ್ ಆಕಳು,
1) ಪ್ರಥಮ ಸ್ಥಾನ ಅರುಣ ರಾಜಾರಾಮ ಸೂರ್ಯವಂಶಿ (ಜಂಬಗಿ)
2) ದ್ವಿತಿಯ ಸ್ಥಾನ ನಿಂಗಪ್ಪ ಬೆವನೂರ (ಶಿವನೂರ)
3) ತೃತಿಯ ಸ್ಥಾನ ಪರಮಾನಂದ ನಿವಲಗಿ (ಮದಭಾವಿ)
ಖಿಲಾರಿ (ದೇಶಿ) ಜಾನುವಾರು:- ಪ್ರಥಮ ಸ್ಥಾನ: ಶಿವಪ್ಪ ಆಜೂರ (ಶಿವನೂರ), ದ್ವಿತಿಯ: ಪ್ರಶಾಂತ ಮಾಳಿ (ಜಂಬಗಿ), ತೃತಿಯ: ಮುರಿಗೇಪ್ಪಾ ನಿವಲಗಿ (ಮದಭಾವಿ)
ಎಮ್ಮೆ :- ಪ್ರಥಮ ಸ್ಥಾನ: ಅಂಕುಶ ಬಾಂಡೋಲಿ, ದ್ವೀತಿಯ: ಸಾಗರ ಭೋಸಲೆ, ತೃತಿಯ ಹಣಮಂತ ವಾಘಮಾರೆ.
ಲೋಕದರ್ಶನ ವರದಿ