ಕಾರವಾರ 27 : ಜೊಯಿಡಾ ತಾಲೂಕಿನ ಬಾಡಗುಂದ ಗ್ರಾಮದ ವಿಸ್ಲಿಂಗ್ ವುಡ್ ರೆಸಾರ್ಟನ ಭೂ ಪರಿವರ್ತನಾ ಜಾಗದ ಶರತ್ತುಗಳ ಉಲ್ಲಂಘನೆ ಕುರಿತಂತೆ ತನಿಖೆ ನಡೆಸಿ ವಿವರವಾದ ಮಾಹಿತಿಯನ್ನು ನೀಡುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಪರ ಜಿಲ್ಲಾಧಿಕಾರಿಗಳು ಕಾರವಾರ ಸಹಾಯಕ ಕಮಿಷನರ್‌ಅವರಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಪತ್ರದಲ್ಲಿ ಜೋಯಿಡಾ ತಾಲೂಕಿನ ಸೂಪಾ ಹೋಬಳಿಯ ಬಾಡಗುಂದ ಗ್ರಾಮದ ಸರ್ವೆ ನಂ. 12 ಅ/1 ಕ್ಷೇತ್ರ 4 ಎಕರೆ 36 ಗುಂಟೆ ವಿಸ್ತೀರ್ಣದ ವ್ಯವಸಾಯ ಜಮೀನನ್ನು ವ್ಯವಸಾಯೇತರ ಕೈಗಾರಿಕೆ ಉದ್ದೇಶಕ್ಕಾಗಿ ಭೂ ಪರಿವರ್ತನಾ ಷರತ್ತುಗಳನ್ನು ಹಾಗೂ ಕೈಗಾರಿಕಾ ಉದ್ದೇಶಕ್ಕೆಂದು ಸರ್ಕಾರಕ್ಕೆ ತಿಳಿಸಿ , ರೆಸಾರ್ಟ ನಿರ್ಮಿಸಲಾಗಿದೆ ಹಾಗೂ ಕಾಳಿ ನದಿಯಲ್ಲೇ ಪಿಲ್ಲರ್ ಹಾಕಿ ಪೋರ್ಟಿಕೊ ನಿರ್ಮಿಸಲಾಗಿದೆ. ನದಿ ಅತಿಕ್ರಮಣ ಮಾಡಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರವದರಿಂದ ಅವರ ಭೂ ಪರಿವರ್ತನಾ ಆದೇಶ ರದ್ದು ಪಡಿಸುವ ಕುರಿತು ವಿನಯ್ ಪಾಟೀಲ್ ಎಂಬುವವರಿಂದ ದೂರು ಬಂದಿದೆ.
ಈ ಕುರಿತು ಭೂ ಪರಿವರ್ತನಾ ಆದೇಶದಲ್ಲಿನ ಷರತ್ತುಗಳನ್ನು ಹಾಗೂ ಸಿ.ಆರ್.ಜೆಡ್. ವ್ಯಾಪ್ತಿ ಉಲ್ಲಂಘಿಸಿರುವ ಮತ್ತು ಸರ್ಕಾರಿ ಜಮೀನು ಕಾಳಿ ನದಿಯನ್ನು ಅತಿಕ್ರಮಿಸಿರುವ ಕುರಿತು ಪರೀಶೀಲಿಸಿ ಸ್ಪಷ್ಟವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ......