ಜಮಖಂಡಿ 26: ತಾಲ್ಲೂಕಿನ ಆಲಗೂರ ಗ್ರಾಮದ ಗೌಡ್ರ ಗಡ್ಡೆ ಹತ್ತಿರ ಚಲಿಸುತ್ತಿರುವ ಟ್ರ್ಯಕ್ಟರ್ ನಿಂದ ಕೆಳಗೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.
ಜಮಖಂಡಿಯಿಂದ ವಿಜಯಪೂರ ಕಡೆಗೆ ಚಲಿಸುತ್ತಿರುವ ಟ್ರ್ಯಕ್ಟರ್ ಚಾಲಕನ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ವಿಜಯಪೂರ ಜಿಲ್ಲೆಯ ಚಡಚಣ ತಾಲ್ಲೂಕಿನ ಚೇನೆಗಾಂವ ಗ್ರಾಮದ ಮಂಜು ಶರಣಪ್ಪ ಕಾಂಬಳೆ ಟ್ರ್ಯಕ್ಟರ್ ನಿಂದ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ದೈವಿ.
ಜಮಖಂಡಿಯಿಂದ ವಿಜಯಪೂರ ಮಾರ್ಗವಾಗಿ ಹೋಗುವ ಟ್ರ್ಯಕ್ಟರ್ ಹಿಂಬಯಿಂದ ಬರುತ್ತಿರುವ ಸಾರಿಗೆ ವಾಹನಕ್ಕೆ ದಾರಿಯನ್ನು ಕೊಡಲು ಹೋಗಿ ಚಿಕ್ಕದಾದ ಬ್ಯಾರೇಜ್ ತಡೆ ಗೋಡೆಯ ಮೇಲೆ ಹಾಯ್ದ ಪರಿಣಾಮ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆೆ.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ. ಎ.ಎಸ್.ಐ ಕೆ.ಪಿ.ಸವದತ್ತಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಶವವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.