ವಿರಕ್ಥಮಠದಲ್ಲಿ ಮಾ.3 ರಿಂದ 11 ರವರೆಗೆ ಪ್ರವಚನ, ಧರ್ಮಸಭೆ
ಶಿಗ್ಗಾವಿ 01 : ಪಟ್ಟಣದ ಶ್ರೀ ವಿರಕ್ತಮಠದಲ್ಲಿ 32 ನೇ ಶರಣ ಸಂಸ್ಕೃತಿ ಉತ್ಸವ ಪರಮ ಪೂಜ್ಯ ಲಿಂ. ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳವರ ಹಾಗೂ ಲಿಂ. ಶ್ರೀ ಮ.ನಿ.ಪ್ರ ಬಸವಲಿಂಗ ಸ್ವಾಮಿಗಳ ಪುಣ್ಯಾರಾಧನೆಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿದೆ. ಪುಣ್ಯಾರಾಧನೆ ಅಂಗವಾಗಿ ಮಾ.3 ರಿಂದ 11 ರವರೆಗೆ ಪ್ರತಿದಿನ ಸಂಜೆ 7 ಕ್ಕೆ ಪ್ರವಚನ ಜೊತೆಗೆ ಧರ್ಮ ಸಮಾರಂಭ ಜರುಗುತ್ತವೆ. ಶ್ರೀ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ಪ್ರವಚನ ನಡೆಸಿ ಕೂಡುವುದು. ಗದಿಗಯ್ಯ ಗವಾಯಿಗಳು ಹಿರೇಮಠ ಸಂಗೀತದೊಂದಿಗೆ ಬಸವರಾಜ ಹೂಗಾರ ತಬಲಾ ಸಾಥ್ ನಡೆಸುವರು. ಧರ್ಮ ಸಮಾರಂಭದಲ್ಲಿ ನಾಡಿನ ವಿವಿಧ ಹರ ಗುರು ಚರಮೂರ್ತಿಗಳು ಮತ್ತು ವಿವಿಧ ರಾಜಕೀಯ ಹಾಗೂ ವಿವಿಧ ಸಮಾಜದ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆಗೆ ಕೋರಿದ್ದಾರೆ.್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ್ಷ