ವಿಧಾನಸಭೆ, ಲೋಕಸಭೆ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭ

ತಿದ್ದುಪಡಿ ನಿಯಮಗಳಡಿ ಪ್ರಕ್ರಿಯೆ:ಗುರುದತ್ತ ಹೆಗಡೆ 

ಧಾರವಾಡ :  1950ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 14(ಬಿ) ಮತ್ತು ಸೆಕ್ಷನ್ 23 ರಲ್ಲಿನ ಕಾನೂನು ತಿದ್ದುಪಡಿಗಳು ಮತ್ತು ಮತದಾರರ ನೋಂದಣಿ ನಿಯಮಗಳು 1960 ರಲ್ಲಿನ ಮಾರ​‍್ಾಡುಗಳ ಅನುಸಾರ ಭಾರತದ ಚುನಾವಣಾ ಆಯೋಗವು ವಿಧಾನಸಭೆ, ಲೋಕಸಭೆ ಮತಕ್ಷೇತ್ರದ ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಅಗಸ್ಟ್‌ 1 ರಿಂದ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. 

ಚುನಾವಣಾ ಸುಧಾರಣೆಗಳ ಪ್ರಮುಖ ಮುಖ್ಯಾಂಶಗಳು:  ಮತದಾರರ ಪಟ್ಟಿಯ ಭಾಗವಾಗಲು ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ನೋಂದಣಿಗೆ ಪ್ರತಿ ವರ್ಷ ನಾಲ್ಕು ಬಾರಿ ಅವಕಾಶಗಳಿವೆ. 17ವರ್ಷ ಪೂರ್ಣಗೊಂಡ ಯುವಕ, ಯುವತಿಯರು ಮುಂಗಡ ಅರ್ಜಿ  ಸಲ್ಲಿಸಬಹುದು. 2022 ರ ಅಗಸ್ಟ್‌ 1 ರಿಂದ ಮತದಾರರ ನೋಂದಣೆಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆಗಳನ್ನು ಆಯೋಗ ಒದಗಿಸಿದೆ. ಮತದಾರರ ಪಟ್ಟಿಗೆ ಸ್ವಯಂಪ್ರೇರಿತ ಆಧಾರ್ ಜೋಡಣೆ ಮಾಡಿಕೊಳ್ಳಬಹುದು. ಒಂದೇ ತರಹದ ಹೆಸರು, ಫೋಟೋ ನಮೂದುಗಳನ್ನು ಹೊಂದಿರುವ ಮತದಾರರ ಪರೀಶೀಲನೆಗೆ ಆದ್ಯತೆ ನೀಡಲಾಗುವದು. ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆಯು ಪ್ರಾರಂಭವಾಗಿದೆ.  

ಹೆಸರು ಸೇರೆ​‍್ಡಗೆ ವರ್ಷದಲ್ಲಿ ನಾಲ್ಕು ಬಾರಿ ಅವಕಾಶ: ಜನತಾ ಪ್ರಾತಿನಿಧ್ಯ ಕಾಯಿದೆ 1950 ರ ಪ್ರಕರಣ 14(ಬಿ) ಮತ್ತು ಮತದಾರರ ನೋಂದಣಿ ನಿಯಮಗಳು 1960 ರಲ್ಲಿ ಸೂಕ್ತ ತಿದ್ದುಪಡಿ ಮಾಡಿ, ಪ್ರಸ್ತುತ ಜಾರಿಯಲ್ಲಿರುವ ಜನವರಿ, 01 ರ ಅರ್ಹತಾ ದಿನಾಂಕದ ಜೊತೆಗೆ 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ ರಂದು ಹೆಸರು ಸೇರೆ​‍್ಡಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮುಂದೆ ಮತದಾರರ ಪಟ್ಟಿಯನ್ನು ಪ್ರತಿ ತ್ರೈಮಾಸಿಕವಾಗಿ ಕಾಲೋಚಿತಗೊಳಿಸಲಾಗುವುದು.  ಮತದಾರರ ಪಟ್ಟಿಯಲ್ಲಿ ಸೇರೆ​‍್ಡ ಮಾಡುವ ಜೊತೆ ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ಸಹ ವಿತರಿಸಲಾಗುವುದು.  

ಪ್ರಸಕ್ತ 2023ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ 2023 ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದ 18 ವರ್ಷಗಳನ್ನು ಪೂರೈಸಿದ ಯುವಕ, ಯುವತಿಯರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯಬೇಕಾಗಿಲ್ಲ. ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ. 

ನಮೂನೆ-6; ಈ ಮೊದಲು ಮತದಾರರ ಪಟ್ಟಿಗೆ ಹೆಸರು ಸೇರೆ​‍್ಡ ಮತ್ತು ಒಂದು ವಿಧಾನ ಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನ ಸಭಾ ಕ್ಷೇತ್ರಕ್ಕೆ ಮತದಾರರ ವರ್ಗಾವಣೆಗಾಗಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದನ್ನು ಪರಿಷ್ಕರಿಸಿ, ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರೆ​‍್ಡ ಮಾಡುವ ಕುರಿತು ಅರ್ಜಿ ಸಲ್ಲಿಸಲು ಮಾತ್ರ ನಮೂನೆ-6 ಅರ್ಜಿಯನ್ನು ಸೀಮಿತಗೊಳಿಸಲಾಗಿದೆ. 

ನಮೂನೆ-7; ಮತದಾರರ ಪಟ್ಟಿಯಲ್ಲಿ ಹೆಸರಿನ ಸೇರೆ​‍್ಡಗೆ ಆಕ್ಷೇಪಣೆ ಮತ್ತು ಹೆಸರು ತೆಗೆದು ಹಾಕಲು ಚಾಲ್ತಿಯಲ್ಲಿರುವ ನಮೂನೆ-7 ಅನ್ನು ಪರಿಷ್ಕರಿಸಲಾಗಿದೆ. ಇದರಿಂದ ಮರಣ, 18 ವರ್ಷ ಆಗದಿರುವ, ಈಗಾಗಲೇ ಬೇರೆ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತ್ತು ಭಾರತದ ಪ್ರಜೆಯಲ್ಲದವರು ಮತದಾರರ ಪಟ್ಟಿಯಲ್ಲಿ ಸೇರೆ​‍್ಡಗೊಂಡಿದ್ದರೆ ತೆಗೆಯಲು ನಮೂನೆ-7ರಲ್ಲಿ ಅವಕಾಶ ಕಲ್ಪಿಸಿ ಪರಿಷ್ಕರಿಸಲಾಗಿದೆ. ಇದರ ಜೊತೆಗೆ ಮರಣ ಪ್ರಮಾಣಪತ್ರ ಲಗತ್ತಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  

ನಮೂನೆ-8; ಈ ಮೊದಲು ನಮೂನೆ-8ರಲ್ಲಿ ಮತದಾರರ ಪಟ್ಟಿಯಲ್ಲಿನ ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ಅವಕಾಶವಿತ್ತು, ಪ್ರಸ್ತುತ ಪರಿಷ್ಕೃತ ನಮೂನೆ-8 ರನ್ವಯ ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಜೊತೆಗೆ ಒಂದು ವಿಧಾನಸಭಾ ಕ್ಷೇತ್ರದಿಂದ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ, ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾವಣೆ, ಹೊಸ ಮತದಾರರ ಗುರುತಿನ ಚೀಟಿಗಾಗಿ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರು ತಮ್ಮ ಅಂಗವೈಕಲ್ಯ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. 

ಈ ಮೊದಲು ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8ಎ ರದ್ದುಪಡಿಸಲಾಗಿದೆ. ನಮೂನೆ-8ಎ ರಲ್ಲಿದ್ದ ಸೌಲಭ್ಯವನ್ನು ಪರಿಷ್ಕರಿಸಿದ ನಮೂನೆ-8 ರಲ್ಲ್ಲಿ ಸೇರಿಸಲಾಗಿದೆ. ಈ ಮೊದಲು ಹೊಸ ಮತದಾರರ ಗುರುತಿನ ಚೀಟಿಗಾಗಿ ನಮೂನೆ-001ರಲ್ಲಿ ಅರ್ಜಿ  ಸಲ್ಲಿಸಲು ಇದ್ದ ಆವಕಾಶವನ್ನು ರದ್ದುಪಡಿಸಿ, ಈ ಅವಕಾಶವನ್ನು ಪರಿಷ್ಕರಿಸಿದ ನಮೂನೆ-8ರಲ್ಲಿ ವೀಲೀನಗೊಳಿಸಲಾಗಿದೆ. 

ನಮೂನೆ-6ಬಿ; ಮತದಾರರ ಪಟ್ಟಿಯಲ್ಲಿನ ಮತದಾರರನ್ನು ದೃಢೀಕರಿಸಲು ಹೊಸದಾಗಿ ನಮೂನೆ-6ಬಿ ಜಾರಿಗೆ ತರಲಾಗಿದೆ. ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ನೀಡಲಾಗಿದೆ. ಇದು ಮತದಾರರಿಗೆ ಸ್ವಯಂಪ್ರೇರಿತ ಅವಕಾಶವಾಗಿದೆ. ಅಕಸ್ಮಾತ್ ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದರೆ, ಆಯೋಗ ನಿಗದಿ ಪಡಿಸಿದ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು 2023ರ ಮಾರ್ಚ್‌ 31ರೊಳಗೆ ಒದಗಿಸಬಹುದು.  

ನಮೂನೆ-6ಬಿಯಲ್ಲಿ ಮಾಹಿತಿ ದೃಢೀಕರಿಸಲು ವಿಧಗಳು; ನಮೂನೆ- 6ಬಿಯಲ್ಲಿ ಮಾಹಿತಿ ದೃಢೀಕರಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅವಕಾಶವಿದೆ. ಆನಲೈನ್ ವ್ಯವಸ್ಥೆಯಡಿ ಎನ್‌ವಿಎಸ್‌ಪಿ (ಓಗಿಖಕ) ಮತ್ತು ವೋಟರ್ ಹೆಲ್ಪ್‌ಲೈನ್ ಆ್ಯಪ್ (ಗಿಊಂ)ನಲ್ಲಿ ಮತದಾರರು ಮಾಹಿತಿಯನ್ನು ದೃಢೀಕರಿಸಲು ಅವಕಾಶವಿದೆ. ಆಧಾರ್ ಸ್ವಯಂ ದೃಢೀಕರಣಕ್ಕೆ ಆಧಾರ್ ಜೋಡಣೆಯಾಗಿರುವ ಮೊಬೈಲ್‌ಗೆ ಸ್ವೀಕೃತವಾಗುವ ಒಟಿಪಿ(ಓಖಿಕ) ಸೌಲಭ್ಯವನ್ನು ಒದಗಿಸಿದೆ. ಅಕಸ್ಮಾತ್ ಒಟಿಪಿ ಸಹಿತ ದೃಢೀಕರಣ ಸಾಧ್ಯವಾಗದಿದ್ದರೆ, ಮತದಾರರು ಆಧಾರ್ ಅನ್ನು ಆ್ಯಪ್‌ಗಳಲ್ಲಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಸಂಬಂಧಪಟ್ಟ ಬೂತ್ ಲೆವಲ್ ಅಧಿಕಾರಿಗೆ ನಮೂನೆ-6ಬಿ ಯಲ್ಲಿ ಹಾರ್ಡ್‌ ಪ್ರತಿಯಲ್ಲಿ ಅರ್ಜಿ  ಸಲ್ಲಿಸಬಹುದು. ಅರ್ಜಿಯನ್ನು ಮತದಾರರ ಅನುಕೂಲ ಕೇಂದ್ರಗಳು, ಇ-ಸೇವಾ ಕೇಂದ್ರಗಳು ಮತ್ತು ನಾಗರೀಕ ಸೇವಾ ಕೇಂದ್ರಗಳು ಹಾಗೂ ಮತದಾರರ ನೋಂದಣಿ ಅಧಿಕಾರಿ/ಸಹಾಯಕ ಮತದಾರರ ನೋಂದಣಿ ಅಧಿಕಾರಿ ಕಚೇರಿಯಲ್ಲೂ ಸಲ್ಲಿಸಬಹುದು. 

ಮತದಾರರ ಪಟ್ಟಿ ವಾರ್ಷಿಕ ಸಂಕ್ಷಿಪ್ತ ಪರಿಷ್ಕರಣೆ; ಭಾರತ ಚುನಾವಣಾ ಆಯೋಗವು 2023ರ ಜನವರಿ 1 ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿಯ ಪರಿಷ್ಕರಣೆ ಕೈಗೊಳ್ಳಲು ಆದೇಶಿಸಿದೆ. ಈ ಪ್ರಕ್ರಿಯೆಯಡಿ ಅಗಸ್ಟ 04 ರಿಂದ ಅಕ್ಟೋಬರ್ 24 ರ ಅವಧಿಯಲ್ಲಿ ಪೂರ್ವ ಪರಿಷ್ಕರಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಒಂದು ಮತಗಟ್ಟೆಯಲ್ಲಿ 1500 ಕ್ಕಿಂತ ಹೆಚ್ಚು ಮತದಾರರಿದ್ದರೆ. ಅಂತಹ ಮತಗಟ್ಟೆಯನ್ನು ವಿಭಜಿಸಿ, ಹೊಸ ಮತಗಟ್ಟೆ ಸ್ಥಾಪನೆ ಮಾಡಲಾಗುವುದು. ಒಂದು ಮತಗಟ್ಟೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿನ ಸೆಕ್ಷನ್‌ಗಳನ್ನು ಬದಲಾವಣೆ ಅವಶ್ಯವಿದ್ದರೆ ವಿಭಾಗಗಳನ್ನು ಸರಿಪಡಿಸಲಾಗುವುದು. ಇದರಲ್ಲಿ ಒಂದು ಕುಟುಂಬದ ಎಲ್ಲಾ ಸದಸ್ಯರು ಮತ್ತು ನೆರೆಹೊರೆಯವರು ಒಂದೇ ವಿಭಾಗದಲ್ಲಿರುವಂತೆ ಖಾತರಿಪಡಿಸಲಾಗುವುದು. ಒಬ್ಬರೇ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಸೇರೆ​‍್ಡಗೊಂಡಿದ್ದರೆ ಆ ಹೆಸರು ತೆಗೆಯಲಾಗುವುದು. ಮತದಾರರ ಭಾವಚಿತ್ರ ಅಸ್ಪಷ್ಟವಾಗಿದ್ದರೆ. ಸ್ಪಷ್ಟ ಭಾವಚಿತ್ರಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಕಾಲೋಚಿತಗೊಳಿಸುವ ಮೂಲಕ ಮತದಾರರ ಪಟ್ಟಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು. ನವೆಂಬರ್ 09 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.  

ನವೆಂಬರ್ 09 ರಿಂದ ಡಿಸೆಂಬರ್ 08ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರೆ​‍್ಡಗೆ ಮತ್ತು ಹೆಸರು ತೆಗೆದು ಹಾಕಲು ತಕರಾರು ಸಲ್ಲಿಸಲು ಅವಕಾಶವಿದೆ. ಈ ಅವಧಿಯಲ್ಲಿ ಮತದಾರರ ನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಹಕ್ಕು ಮತ್ತು ತಕರಾರು ಸಲ್ಲಿಸಲು ಅನುವಾಗುವಂತೆ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸುತ್ತಾರೆ. ಸ್ವೀಕೃತಗೊಂಡ ಹಕ್ಕು ಮತ್ತು ತಕರಾರುಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಡಿಸೆಂಬರ್ 26ರ ಒಳಗಾಗಿ ಇತ್ಯರ್ಥಪಡಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ 2023ರ ಜನೆವರಿ 5 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತದಾರರ ಪಟ್ಟಿಯ ಗುಣಮಟ್ಟವನ್ನು ಜಿಲ್ಲಾ ಚುನಾವಣಾಧಿಕಾರಿಗಳು, ಆಯೋಗ ನೇಮಿಸುವ ಮತದಾರರ ಪಟ್ಟಿ ವೀಕ್ಷಕರು(ಖಠಟ ಓಜಡಿತಜಢಿ), ಮುಖ್ಯ ಚುನಾವಣಾಧಿಕಾರಿಗಳು ಮೇಲುಸ್ತುವಾರಿ ಮತ್ತು ಪರೀಶೀಲನೆ ಕಾರ್ಯ ಕೈಗೊಳ್ಳುವರು. 

ಈಗಾಗಲೇ ರಾಜಕೀಯ ಪಕ್ಷಗಳು ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಬೂತ್ ಲೆವೆಲ್ ಏಜೆಂಟ್‌ರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಬೂತ್ ಲೆವೆಲ್ ಏಜೆಂಟ್‌ರು ಒಂದು ದಿನಕ್ಕೆ ಸಂಬಂಧಪಟ್ಟ ಬೂತ್ ಲೆವೆಲ್ ಅಧಿಕಾರಿ (ಬಿಎಲ್‌ಓ) ಗೆ 10 ಅರ್ಜಿ ನಮೂನೆಗಳನ್ನು ಸಲ್ಲಿಸಲು ಅವಕಾಶವಿದೆ. ಒಬ್ಬ ಬೂತ್ ಲೆವೆಲ್ ಏಜೆಂಟ್ 30 ಕ್ಕಿಂತ ಹೆಚ್ಚು ನಮೂನೆಗಳನ್ನು ಸಲ್ಲಿಸಿದರೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ/ಸಹಾಯಕ ಮತದಾರರ ನೋಂದಣಾಧಿಕಾರಿ ಸ್ವತ: ಈ ಹಕ್ಕು ಮತ್ತು ತಕರಾರರು ಅರ್ಜಿಗಳನ್ನು ಪರೀಶೀಲನೆ ಮಾಡಬೇಕು. ಜೊತೆಗೆ ಬೂತ್ ಲೆವಲ್ ಏಜೆಂಟ್‌ರವರು ನಮೂನೆಗಳ ಅರ್ಜಿಗಳನ್ನು ಸ್ವತ: ಪರೀಶೀಲನೆ ಮಾಡಿರುವುದಾಗಿ ದೃಢೀಕರಣ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.