ಸಂಕೇಶ್ವರ ಮಠದಲ್ಲಿ ಕೋಟಿಲಿಂಗಾರ್ಚನೆ

ಸಂಕೇಶ್ವರ,05: ಪುರಾತನ ಕಾಲದಿಂದ ಪ್ರಸಿದ್ಧವಾದ ಶಂಕಲಿಂಗ ಮಠದ ಶ್ರೀಗಳಾದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಕಳೆದ ಒಂದು ತಿಂಗಳಿನಿಂದ ಶ್ರಾವಣ ಮಾಸದಲ್ಲಿ ವಿಶ್ವ ಕಲ್ಯಾಣಗೋಸ್ಕರ ಬೇರೆ ಬೇರೆ ಮಠದ ಶ್ರೀಗಳನ್ನು ಆಹ್ವಾನಿಸಿ ಯಜ್ಞ ಹೋಮಗಳು ಪರಮಾತ್ಮನಾದ ಶಿವ-ಪಾರ್ವತಿ ಇವರ ಆಶೀರ್ವಚನ ಅವರ ಮದುವೆಗಳನ್ನು ನೋಡಿ ಇಲ್ಲಿಯ ಭಕ್ತಾದಿಗಳು ಕಣ್ಣು ತುಂಬಿಕೊಂಡರು. 

ಶ್ರಾವಣ ಮಾಸದ ಕೊನೆಯಲ್ಲಿ ಮಣ್ಣಿನ ಲಿಂಗವನ್ನು ತಯಾರಿಸಿ ಕೋಟಿ ಲಿಂಗಾರ್ಚನೆ ಹಾಗೂ ಭಗವಂತನ ಜಪಗಳನ್ನು ಮಾಡಿ ಮಹಾರಾಷ್ಟ್ರದ ದರೂರದ ಶಂಕರಲಿಂಗ ಮಠದ ಶ್ರೀಗಳು ಹರಿಹರಾನಂದ ಮತ್ತು ಗಂಗಾಖೇಡದ ಭಾರತಿ ಶ್ರೀಗಳು ಈ ಕೋಟಿ ಲಿಂಗಾರ್ಚನೆಯಲ್ಲಿ ಜಪಗಳನ್ನು ಮಾಡಿ ಪರಮಾತ್ಮನ ಮಣ್ಣಿನ ಲಿಂಗವನ್ನು ಹಿರಣ್ಯಕೇಶಿದೇವಿ ನದಿಯಲ್ಲಿ ವಿಸರ್ಜನೆ ಮಾಡಿದರು ಶ್ರಾವಣ ಮಾಸದ ಅಮವಾಸ್ಯೆ ನಿಮಿತ್ಯ ಅನ್ನದಾಸೋಹವನ್ನು ಏರಿ​‍್ಡಸಲಾಗಿತ್ತು ಸುಮಾರು 8-10 ಸಾವಿರ ಭಕ್ತರು ಅನ್ನದಾಸೋಹದ ಪ್ರಸಾದವನ್ನು ಸ್ವಿಕರಿಸಿ ಭಗವಂತನ ದರ್ಶನ ಪಡೆದುಕೊಂಡು ಪುನೀತರಾದರು.