ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಪ್ರಶಾಂತ್ ಮುನ್ನೋಳಿ

ಸಂಬರಗಿ 05: ಅಥಣಿ ಪೊಲೀಸ್ ಉಪಾಧೀಕ್ಷಕರು ತಮ್ಮ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಿದ್ದು, ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಒಂದೇ ನೀತಿಯನ್ನು ಅನುಸರಿಸುವಮೂಲಕ ಅಪರಾಧಿಯನ್ನು ಬಿಡಲಾಗುವುದಿಲ್ಲ ಎಂದು ಅಥಣಿ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಮುನ್ನೋಳಿ ಹೇಳಿದರು. 

ಗಡಿ ಭಾಗದ ಹೋರಾಟಗಾರ ಅರಳಹಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಗವಾಡ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಸದಸ್ಯರು ಬಸನಗೌಡ ಪಾಟೀಲ್ ಹಾಗೂ ಇನ್ನಿತರರು ಸೇರಿ ಅಥಣಿ ಡಿವೈಎಸ್ಪಿ ಕಚೇರಿಯಲ್ಲಿ ಸತ್ಕರಿಸಿದ ನಂತರ ಮಾತನಾಡಿದ ಅವರು ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಹಲವು ಸಮಸ್ಯೆಗಳನ್ನು ವಿವರಿಸಿ ಯಾರಿಗಾದರೂ ಅನ್ಯಾಯವಾದರೆ ನೇರವಾಗಿ ನನ್ನನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.   

ಬಸಗೌಡ ಪಾಟೀಲ ಮಾತನಾಡಿ, ಗಡಿ ಭಾಗದ ಬೋಮನಾಳದಲ್ಲಿ ಉಪ ಪೊಲೀಸ್ ಠಾಣೆ ಸ್ಥಾಪಿಸುವಂತೆ ಅಂದಿನ ಗೃಹ ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಮಾಡಿದ್ದೆವು. ಆದರೆ ಅಂದಿನ ಗೃಹ ಇಲಾಖೆ ಮಂಜೂರು ಮಾಡಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ. ಅದನ್ನು ಮುಂದುವರಿಸಿ ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು. 

ಚಿನ್ನ ಮತ್ತು ಬೆಳ್ಳಿ ವ್ಯಾಪಾರಿ ಬಾಲಾಜಿ ಸಾಳುಂಖೆ, ಶಿವಪ್ರತಾಪ್ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಸಂತೋಷ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.