ಮೂಲಭೂತ ಸೌಕರ್ಯ ವಂಚಿತ 20 ವರ್ಷ ಗತಿಸಿದರು ರಸ್ತೆ ಕೆಸರು ಗದ್ದೆಯಂತಿದೆ : ರೊಚ್ಚಿಗೆದ್ದ ನಾಗರಿಕರು

ಗದಗ:04: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ 22 ನೇ ವಾರ್ಡಿನ ಗಂಗಿಮಡಿ ಭಾಗದಲ್ಲಿ ಮುಗಿಯದ ರಸ್ತೆ ಅಲ್ಲಿಯ ನಿವಾಸಿಗಳು ರೊಸಿ ಹೋಗಿದ್ದಾರೆ. ಹೌದು  ಗಂಗಿ ಮಡಿ ನಿರ್ಮಾಣವಾಗಿ 20 ವರ್ಷ  ಗತಿಸಿ ಹೋದರು, ರೇಲ್ವೆ ಟ್ರ್ಯಕ್ ಹತ್ತಿರದ ಒಂದು ಮೂಲೆಯಲ್ಲಿ ತ್ರಿಕೋನ್ ಆಕಾರದ ರಸ್ತೆ ಮಾಡದೆ ಹಾಗೆಯೇ ಬಿಟ್ಟಿದ್ದಾರೆ.  ಮಳೆ ಬಂದರೆ ಇಲ್ಲಿಯ ನಿವಾಸಿಗಳಿಗೆ ತಲೆನೋವು ತಂದಿದೆ. ಏಕೆಂದರೆ ಸಣ್ಣ ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು, ಮೇಲಾಗಿ ಗರ್ಭಿಣಿಯರು ಅಲ್ಲಿಂದಲೇ ಜೀವ ಗಟ್ಟಿಯಾಗಿ ಹಿಡಿದುಕೊಂಡು ನಡೆದಾಡುವ ಪ್ರಸಂಗ  ಬಂದಿದೆ. ಇದು ರಸ್ತೆಯೋ ಅಥವಾ  ಯಮಲೋಕಕ್ಕೆ ಕರೆದೋಯ್ಯೊ ದಾರಿಯೋ?  ಎಂದು ಸಾರ್ವಜನಿಕರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.    

ನಗರ ಸಭೆಯ ಸದಸ್ಯ  ರವಿ ಕಮತರ ರವರು  ಚುನಾವಣೆಯ ಸಂದರ್ಭದಲ್ಲಿ ಬಂದವರು ಮರಳಿ ಈ ಭಾಗದ ನಿವಾಸಿಗಳು ಗೋಳು ಕೇಳಿಲ್ಲ.ಇವರನ್ನ ಯಾರು ನೋಡಿಲ್ಲ.ಇತ್ತಕಡೆ  ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಕಂಡು ಕಾಣದಂತೆ ಇದ್ದಾರೆ.ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು  ಕೇವಲ ಕಾರಿನಲ್ಲಿ ಸಂಚರಿಸುವುದು ಅಲ್ಲ, ನಗರದ 22ನೇ ವಾರ್ಡಿನ ಗಂಗಿಮಡಿಯ ಈ ಭಾಗದಲ್ಲಿ ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸಬೇಕಿದೆ.    

ಈ ಮೊದಲು ಹಲವಾರು ಅವಘಡಗಳು ಸಂಭವಿಸಿದ್ದರು,  ನಗರಸಭೆಯ ಚುನಾಯಿತ ಪ್ರತಿನಿಧಿಗಳು ಚುನಾವಣೆಗೆ ಬಂದಾಗ ಮಾತ್ರ ಬಂದು ಹೋಗುತ್ತಾರೆ. ಮತ್ತೆ ಈ ವಾರ್ಡಿನ ಸಮಸ್ಯೆಯ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಹಿರಿಯ ನಾಗರೀಕರಿಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮಹಿಳೆಯರಿಗೆ ಅದರಲ್ಲಿಯೂ ಗರ್ಭಿಣಿ ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅನಾಹುತಗಳಿಗೆ  ಆಹ್ವಾನಿಸುತ್ತಿರುವ ಹಾಗಾಗಿದೆ. ಈ ಮೊದಲು ಸಾಕಷ್ಟು ಬಾರಿ ನಗರಸಭೆಗೆ ಸ್ಥಳೀಯರು ತಿಳಿಸಿದ್ದು ಆಯಿತು ಹೇಳಿದ್ದು ಆಯಿತು. ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳಿಗೆ ಇಲ್ಲಿಯ ನಿವಾಸಿಗಳು ಸೇರಿ ಚರ್ಚಿಸಿ ಈ ತೀರ್ಮಾನ ತೆಗೆದು ಕೊಳ್ಳಲಾಗಿ ಮುಂದೊಂದು ದಿನ ನಗರಸಭೆಗೆ ಮುತ್ತಿಗೆ ಹಾಕುತ್ತೇವೆಂದು ಎಚ್ಚರಿಕೆ ನೀಡಿರುತ್ತಾರೆ.  

"ಬಾಕ್ಸ ನಮ್ಮ ವಾರ್ಡಿನ ಅಭಿವೃದ್ಧಿ  ಕೆಲಸಗಳು ಮಾಡಲು ಆಗುತ್ತಿಲ್ವೆ? ಅಥವಾ ನಾವು ನಗರಸಭೆಗೆ ತೆರಿಗೆ,ಕರ ಕಟ್ಟುವುದಿಲ್ಲವೇ? ಈ ಭಾಗಕ್ಕೆ ಬೀದಿ ದೀಪಗಳು ಗಂಗಿಮಡಿ ಆದಾಗಿನಿಂದ ಇವತ್ತಿನ ವರೆಗೆ ಮರಳಿ ಬೀದಿ ದೀಪಗಳ ಸೆಟ್ ಹಾಕಿರುವುದಿಲ್ಲ.ಅಲ್ಲಲ್ಲಿ  ಹಾಕಿದ ಬೀದಿ ದೀಪಗಳು ಅಲ್ಲಿಯೇ  ತುಕ್ಕು ಹಿಡಿದಿರುವುದು ಕಾಣಬಹುದು.ಈ ಭಾಗದ ರಸ್ತೆ,ಬೀದಿ ದೀಪ,ಚರಂಡಿ ನಿರ್ಮಿಸಿ ಕೊಡಿ ಇಲ್ಲವೇ ಮುಂದೊಂದು ದಿನ ಬಿದಿಗಿಳಿದು ಪ್ರತಿಭಟನೆ ಮಾಡಬೇಕಾದೀತು ಎಂದು ಅಧಿಕಾರಿಗಳಿಗೆ ಎಚ್ಚಿರಿಕೆ ನೀಡಿದ್ದಾರೆ.