ಟೈಪಿಂಗ್ ಪರೀಕ್ಷೆಯಲ್ಲಿ ಸಾಧನೆ

ಲೋಕದರ್ಶನ ವರದಿ

ಧಾರವಾಡ 18: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2023ರ ಜನವರಿಯಲ್ಲಿ ನಡೆಸಿದ ಟೈಪಿಂಗ್ ಪರೀಕ್ಷೆಯಲ್ಲಿ ನವನಗರದ ಅನ್ನಪೂರ್ಣ ಟೈಪಿಂಗ್ ಮತ್ತು ಶಾರ್ಟಹ್ಯಾಂಡ್ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ.

ಕು. ಚೇತನಾ ಶಿರಗಾವಿ ಕನ್ನಡ ಹಾಗೂ ಇಂಗ್ಲೀಷ್ ಟೈಪಿಂಗ್ ಪ್ರಥಮ ದರ್ಜೆಯ ಪರೀಕ್ಷೆಯಲ್ಲಿ ಕ್ರಮವಾಗಿ ಶೇ. 96 ಮತ್ತು 94 ಅಂಕಗಳನ್ನು ಸಂಪಾದಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕು. ಸೃಷ್ಟಿ ಅಂಗಡಿ ಕನ್ನಡ ಟೈಪಿಂಗ್ ಪ್ರಥಮ ದರ್ಜೆಯ ಪರೀಕ್ಷೆಯಲ್ಲಿ ಶೇಕಡಾ 93 ಅಂಕಗಳನ್ನು ಸಂಪಾದಿಸಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆಂದು ಸಂಸ್ಥೆಯ ಪ್ರಿನ್ಸಿಪಾಲ್ ಅನಿಲಕುಮಾರ ಉಳ್ಳಾಗಡ್ಡಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ