ವೈದ್ಯರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಸಾಲದು: ದೀಪಾ ದೇಸಾಯಿ

ಮುದ್ದೇಬಿಹಾಳ 03:  ವೈದ್ಯರು ಎಂದರೆ ಪ್ರತ್ಯಕ್ಷ ದೇವರಿದ್ದಂತೆ. ಸಂಕಷ್ಟದ ಸಮಯದಲ್ಲಿ ತಕ್ಷಣ ನೆನಪಾಗುವವರಲ್ಲಿ ವೈದ್ಯರು ಅಗ್ರಗಣ್ಯರು. ವೈದ್ಯರು ಇಲ್ಲದ ಲೋಕವನ್ನು ಖಂಡಿತಾ ಊಹಿಸುವುದಕ್ಕೂ ಸಾಧ್ಯವಿಲ್ಲ. ಇಂತಹ ವೈದ್ಯರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಸಾಲದು. ಹೀಗಾಗಿ, ಕಣ್ಣಿಗೆ ಕಾಣುವ ದೇವರಿಗೆ ಧನ್ಯವಾದ ಹೇಳಲು ಮೀಸಲಾಗಿರುವ ದಿನವೇ ಇವತ್ತು. ಇವತ್ತು ರಾಷ್ಟ್ರೀಯ ವೈದ್ಯರ ದಿನ. ವೈದ್ಯರನ್ನ ದೇವರಿಗೆ ಹೊಲಿಸಲಾಗುತ್ತದೆ. ರೋಗಕ್ಕೆ ತುತ್ತಾದ ಪ್ರತಿಯೊಬ್ಬರನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ವೈದ್ಯರ ಕಾಯಕವಾದರೆ, ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂದು  ಪಟ್ಟಣದ ಲಯನ್ಸ್‌ ಕ್ಲಬ್ ಸಂಸ್ಥೆಯ ಅಧ್ಯಕ್ಷೆ ದೀಪಾ ದೇಸಾಯಿ ಹೇಳಿದರು. 

ಪಟ್ಟಣದ ಹಡಲಗೇರಿ ರಸ್ತೆ ಮಾರ್ಗದಲ್ಲಿರುವ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಸರಕಾರಿ ವೈದ್ಯರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಸೋಮವಾರ ಸಿಹಿ ತಿನಿಸಿ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು. 

ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ವೈದ್ಯೋ ನಾರಾಯಣೋ ಹರಿಃ ಎಂದು ಭಾವಿಸಲಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಹಾಗೂ ಆರೋಗ್ಯ ರಕ್ಷಣೆ ಮಾಡುವವರು ವೈದ್ಯರು ಎಂದರು. ಕರೋನಾ ಸಂದರ್ಭದಲ್ಲಿ, ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ ಸೇವೆಯನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ತಮ್ಮ ಜೀವದ ಹಂಗನ್ನು ತೊರೆದು ವೈದ್ಯರು ದುಡಿದಿದ್ದಾರೆ  ಅವರ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.  

ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನಿಲಕುಮಾರ್ ಶೇಗುಣಶಿ ತಜ್ಞ ವೈದ್ಯರಾದ ಡಾ. ಮಹಮ್ಮದಅಸ್ಪಕ್ ಡಾ. ಹಸನ್ ಬೀಳಗಿ ಡಾ. ಬಸವರಾಜ್ ಅಲಗೂರ್ ದಂತ ವೈದ್ಯರಾದ ರಿಪತಕೌಸರ್ ಇನಾಮಧಾರ್  ಹಾಜರಿದ್ದರು ಎಲ್ಲರನ್ನು ಗೌರವಿಸಿ ಸನ್ಮಾನಿಸಲಾಯಿತು.  

ಜೆ ಓ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಆನಂದಗೌಡ ಏನ್ ಬಿರಾದಾರ ಅವರು ಮಾತನಾಡಿ ಶ್ರೇಷ್ಠ ವೈದ್ಯ ಬಿ.ಸಿ.ರಾಯ್ ಅವರ ವೈದ್ಯಕೀಯ ಸೇವೆಗೆ ನೀಡಿದ ಅವರ ಸ್ಮರಣಾರ್ಥ ಹಾಗೂ ಅವರ ಅಪಾರ ಕೊಡುಗೆ ಸ್ಮರಣಿಸಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಆಚರಿಸಲಾಗುತ್ತದೆ ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸರ್ವಕಾಲಿಕ ಮಾತು ವೈದ್ಯೋ ನಾರಾಯಾಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದೆ.ಅದಕ್ಕಾಗಿ ವೈದ್ಯರನ್ನು ದೇವರಿಗೆ ಹೊಲಿಸಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ. ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪುನರ್ಜನ್ಮ ನೀಡುವ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನ ಆಚರಿಸಲಾಗುತ್ತದೆ ಎಂದರು.  

ಗಣ್ಯರಾದ ವೆಂಕನಗೌಡ ಪಾಟೀಲ, ಆರೋಗ್ಯ ಇಲಾಖೆಯ ಟಿ ಎಚ್ ಲಮಾಣಿ, ಬಸಮ್ಮ ಸಾರವಾಡ, ಎಂ ಎಸ್ ಗೌಡರ, ಸಂಜಯ ಬೋಸ್ಲೆ, ಎಂ ಬಿ ಭಾಗವಾನ, ಸಚಿನ್ ರಾಠೋಡ್, ವ್ಹಿ ವ್ಹಿ ಪವಾಡಶೆಟ್ಟಿ, ಯಲಗುರೇಶ್ ತೋನಶ್ಯಾಳ, ಚೇತನ್ ಕಲ್ಲುಡಿ, ವಿರೇಶ್ ಎಸ್ ಬಿ, ಎಸ್ ಎಸ್ ಸಜ್ಜನ, ರಾಜೇಶ್ವರಿ ಅಳಗುಂಡಿ, ರಾಜೇಶ್ವರಿ ಹೊಕ್ರಾಣಿ, ಎಫ್ ಡಿ ಕೊಡಗನೂರ್, ಎಸ್ ಡಿ ಸಗರಿ, ಮಂಜುಳಾ ಪಾಟೀಲ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.