ಡಾ. ಸಚೀನ ಬಕರೆಗೆ ರಾಜ್ಯ ಶ್ರೇಷ್ಠ ವೈದ್ಯ ಪ್ರಶಸ್ತಿ

ರಬಕವಿ-ಬನಹಟ್ಟಿ 02: ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ರಾಜ್ಯ ಶ್ರೆೇಷ್ಠ ವೈದ್ಯ ಪ್ರಶಸ್ತಿಯನ್ನು ಬನಹಟ್ಟಿ ನಗರದ ನಾಮದೇವ ಸಿಂಪಿ ಸಮಾಜದ ವೈದ್ಯ ಡಾ. ಸಚೀನ ವಿಠ್ಠಲ ಬಕರೆ ಪಡೆದುಕೊಂಡಿದ್ದಾರೆ. 

ರಾಷ್ಟೀ್ರಯ ವೈದ್ಯ ದಿನಾಚರಣೆ ನಿಮಿತ್ಯ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಆರೋಗ್ಯ ಕೇಂದ್ರದಲ್ಲಿ ಅರ್ಥೋಪೆಡಿಕ್ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸಾಧನೆಯನ್ನು ಗುರುತಿಸಿ ಬಕರೆಯವರಿಗೆ ಪ್ರಶಸ್ತಿಗೆ ದೊರಕಿದೆ.  

ಸಚಿವ ದಿನೇಶ ಗುಂಡುರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತ ಡಿ. ರಂದೀಪ ಉಪಸ್ಥಿತರಿದ್ದರು. ಪ್ರಶಸ್ತಿ ವಿಜೇತ ಡಾ. ಸಚೀನ ಬಕರೆಯವರನ್ನು ನಾಮದೇವ ಸಿಂಪಿ ಸಮಾಜದ ಹಿರಿಯರಾದ ಪ್ರಭು ಭಾ. ಕೋಪರ್ಡೆ, ನಾಗಪ್ಪ ಬಕರೆ, ವಿಜಯ ಕೋಪರ್ಡೆ, ಆತ್ಮಾರಾಮ ಮ. ಬಕರೆ, ವಿವೇಕಾನಂದ ಕ. ಭಸ್ಮೆ, ಮೇಘರಾಜ ಮಾಳವದೆ, ಶ್ಯಾಮ ಭಸ್ಮೆ, ದೀಪಕ ಬಕರೆ, ಸತ್ಯವಾನ ಬಕರೆ, ಮಾಧವಾನಂದ ಕೋಪರ್ಡೆ, ಡಾ. ಶ್ರೀನಾಥ ಖಮಿತ್ಕರ, ಕುಮಾರ ಪೋರೆ, ಮಹಾದೇವ ಭಸ್ಮೆ, ರಾಜೇಶ ಸರ್ವದೆ, ಪ್ರಕಾಶ ಸುಡಾಳ ಸೇರಿದಂತೆ ರಬಕವಿ-ಬನಹಟ್ಟಿ ತಾಲೂಕಾ ಸಮಸ್ತ ನಾಮದೇವ ಸಿಂಪಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.