ತಾಲೂಕಾ ಕಸಾಪ ನೂತನ ಅಧ್ಯಕ್ಷರಾಗಿ ಕಾಮರಾಜ ಬಿರಾದಾರ ಆಯ್ಕೆ: ಸನ್ಮಾನ

ಮುದ್ದೇಬಿಹಾಳ 03: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕಾಮರಾಜ ಬಿರಾದಾರ ಅವರು ಪಟ್ಟಣದ ಪುರಸಭೆ ಅಧಿಕಾರಿಗಳಿಂದ ಹಾಗೂ ಸರ್ವ ಸದಸ್ಯರಿಂದ ಸೋಮವಾರ ಗೌರವ ಸನ್ಮಾನ ನೆರವೇರಿತು.  

ಈ ವೇಳೆ ಹಿರಿಯ ಮುಖಂಡ ವೈ ಎಚ್ ವಿಜಯಕರ ಹಾಗೂ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಅವರು ಮಾತನಾಡಿ ಯಾವೂದೇ ಹುದ್ದೇಯಾಗಲಿ ಅಥವಾ ಅಧಿಕಾರವಾಗಲಿ ಅದು ತನ್ನಿಂದ ತಾನೆ ಬರುವುದಿಲ್ಲ ಕಠಿಣ ಶ್ರಮ ಹಾಗೂ ನಮ್ಮ ಸಾಮಾಜಿಕ ಬದುಕಿನ ಚಿಂತನೆ ಗುರ್ತಿಸಿ ಇಂತಹ ಹುದ್ದೆರಳನ್ನು ಅಲಂಕರಿಸಲು ಸಾಧ್ಯ. ಸಧ್ಯ ಕಾಮರಾಜ ಬಿರಾದಾರ ಅವರು ತಮ್ಮ ಸಣ್ಣ ವಯಸ್ಸಿನಲ್ಲೇ ಈ ಮೊದಲು ಪುರಸಭೆ ಸದಸ್ಯರಾಗಿ ಮಾತ್ರವಲ್ಲದೇ ಮುದ್ದೇಬಿಹಾಳ ತಾಲೂಕಿನ ಪಟ್ಟಣದ ಒಬ್ಬ ಯುವ ನಾಯಕರಾಗಿ ಸಮಾಜಿ ಚಿಂತಕರಾಗಿ ಅನೇಕ ಕ್ರೀಡೆ, ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ.  

ಇದೇಲ್ಲವನ್ನೂ ಗುರ್ತಿಸಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಹಾಗೂ ಹಲವಾರು ಸಾಹಿತಿಗಳು, ಮುಖಂಡರು ಸೇರಿಕೊಂಡು ಕಾಮರಾಜ ಬೀರಾದಾರ ಅವರನ್ನೇ ಕಸಾಪ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ್ದು ನಿಜಕ್ಕೂ ಶ್ಲ್ಯಾಘನಿಯಾಗಿದೆ. ಕಳೆದ ಪಟ್ಟಣ ಸೇರಿದಂತೆ ತಾಲೂಕಿನೆಲ್ಲಡೆ ಹಲವು ವರ್ಷಗಳಿಂದ ಸಾಹಿತ್ಯಾತ್ಮಕ ಕಾರ್ಯಕ್ರಮಗಳ ಜರುಗದೇ ಕನ್ನಡ ಮನಸುಗಳಿಗೆ ಸ್ವಲ್ಪಬೇಸರದಲ್ಲಿದ್ದರು ಆದರೇ ಸಧ್ಯ ನೂತನ ಅಧ್ಯಕ್ಷರಾಗಿ ಕಾಮರಾಜ ಬಿರಾದಾರ ಅವರು ತಮ್ಮ ಅವಧಿಯಲ್ಲಿ ತಾಲೂಕಿನ ಹಿರಿಯ ಹಾಗೂ ಯುವ ಸಾಹಿತಿಗಳಿಗೆ ಸ್ಪೂತಿ ತುಂಬುವ ಕಾರ್ಯವಾಗಬೇಕಾಗಿದೆ. ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ  ಜೊತೆಗೆ ಹೆಚ್ಚೆಚ್ಚು ಕನ್ನಡದ ಹಬ್ಬಗಳು, ಕವಿ ಕುಮ್ಮಟಗಳು, ಪುಸ್ತಕ ಬಿಡುಗಡೆ ಸೇರಿದಂತೆ ಅನೇಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡಾಂಭೆಯ ತೇರು ಎಳೆಯುವಂತಾಗಲಿ. ಅದಕ್ಕೆ ಎಲ್ಲರ ಸಹಕಾರಕೂ ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತೆದೆ ಎಂದರು. 

ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಮಾತನಾಡಿ ಕಳೇದ ಎಲ್ಲ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಪುರಸಭೆ ಎಲ್ಲ ಅಧಿಕಾರಿಗಳು ಮತ್ತು ಸರ್ವ ಸದಸ್ಯರು ಒಗ್ಗಟ್ಟಾಗಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಕನ್ನಡದ ಸ್ವಾಭಿ ಮಾನ ಮೆರೆದಿದ್ದವೇ.  ನಮ್ಮವರೇ ಆದ ಕಾಮರಾಜ ಬಿರಾದಾರ ಅವರು ಕಸಾಪ ಅಧ್ಯಕ್ಷರಾಗಿರುವುದು ತುಂಬ ಹೆಮ್ಮೇಪಡಬೇಕಾಗಿದೆ ಈ ನಿಟ್ಟಿನಲ್ಲಿ ಅವರ ಮುಂದಿನ ಎಲ್ಲ ಕನ್ನಡ ಕಾರ್ಯಕ್ರಮಕ್ಕೆ ಪುರಸಭೆಯಿಂದ ಎಲ್ಲ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡುವುದು ಸೇರಿದಂತೆ ಯಶಸ್ವಿಗೊಳಿಸಲು ಕೈಜೊಡಿಸುತ್ತೇವೆ ಎಂದರು. 

ಪುರಸಭೆ ಸದಸ್ಯರಾದ ಶಾಹಾಜದಬಿ ಹುಣಸಗಿ, ಮೈಬೂಬ ಗೊಳಸಂಗಿ, ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ, ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಸಮೀರ ದ್ರಾಕ್ಷೀ, ರೀಯಾಜಹ್ಮದ ಢವಳಗಿ, ಯಲ್ಲಪ್ಪ ನಾಯಕಮಕ್ಕಳ, ಹೋಟಲ್ ಗಣ್ಯ ಉದ್ಯಮಿ ಸದಾಶಿವ ಮಠ, ಮುಖಂಡರಾದ ಹುಸೇನ ಮುಲ್ಲಾ, ಸಂಗಣ್ಣ ಮೇಲಿಮನಿ,ಅಶೋಕ ವನಹಳ್ಳಿ, ಶ್ರೀಶೈಲ ಪೂಜಾರಿ, ಮುನ್ನಾ ಮಕಾಂದಾರ ಸೇರಿದಂತೆ ಹಲವರು ಇದ್ದರು.