ರಾಜ್ಯ ಮಟ್ಟದ ಅಂಬೆಗಾಲು - 6 ಕಿರು ಚಿತ್ರ ಸ್ಪರ್ಧೆ

ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ ಆಯೋಜನೆ 

* ಮೊದಲ ಬಹುಮಾನ 50,000 ನಗದು, ಆಕರ್ಷಕ ಸ್ಮರಣಿಕೆ, ಹತ್ತು ವೈಯಕ್ತಿಕ ಬಹುಮಾನಗಳು 

ಶಿವಮೊಗ್ಗ 02: ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ ಇದೀಗ  ರಾಜ್ಯ ಮಟ್ಟದ ಅಂಬೆಗಾಲು - 6 ಕಿರು ಚಿತ್ರ (ಶಾರ್ಟ್‌ ಫಿಲಂ) ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಬೆಳ್ಳಿಮಂಡಲದ ಕಾರ್ಯಧ್ಯಕ್ಷರು ಹಾಗೂ  ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕರೂ ಅದ ಡಿ. ಎಸ್‌. ಅರುಣ್ ತಿಳಿಸಿದರು. 

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅಂಬೆಗಾಲು - 6 ಕಿರುಚಿತ್ರ ಸ್ಪರ್ಧೆಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ  ನಾಲ್ಕು ವರ್ಷಗಳಲ್ಲಿ ನಡೆದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಗಳಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಕ್ರಿಯಾಶೀಲ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ. ಈ ಸ್ಪರ್ಧೆಗಳಲ್ಲಿ  ಪ್ರಶಸ್ತಿ ಪುರಸ್ಕೃತರಾದ ಫನ್ಮಂಡ್ರಿ ಕ್ರಾಸ್, ಹೆಕ್ಕೆಮನೆ, ಚೌಕಿ, ಅನಲಾ, ಕುರ್ಲಿ, ದಾಳಿ, ಭ್ರಾಂತು, ಖೇಜ್, ಕಲಾಂ ಹಿಂದೂಸ್ಥಾನಿ, ಬ್ಲೌಸ್,  ನೊಂದವರ ಯುವಕರು ಸಂಘ, ದೂರದರ್ಶನ, ಸೌಮ್ಯ..  ಮೊದಲಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆಯಲ್ಲದೇ,  ಅನೇಕ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಆರನೇ ವರ್ಷದಲ್ಲಿ ಈ ರಾಜ್ಯಮಟ್ಟದ ಅಂಬೆಗಾಲು - 6 ಕಿರು ಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ರಾಜ್ಯದೆಲ್ಲೆಡೆಯಿಂದ ಶ್ರೇಷ್ಟ ಗುಣಮಟ್ಟದ ಕಿರು ಚಿತ್ರಗಳನ್ನು ನೀರೀಕ್ಷಿಸಲಾಗಿದೆ ಎಂದರು. 

ಯುವಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೊತ್ಸಾಹಿಸುವ ದೃಷ್ಟಿಯಿಂದ ಈ ಕಿರುಚಿತ್ರ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು,  ಶೀರ್ಷಿಕೆ ಹಾಗೂ ಟೈಟಲ್ ಕಾರ್ಡ್‌ ಸೇರಿ 05 ರಿಂದ 07 ನಿಮಿಷಗಳ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು ಎಂದ ಅವರು, ಮೊಬೈಲ್ ಸೇರಿದಂತೆ ಯಾವುದೇ ಕ್ಯಾಮರಾವನ್ನು ಬಳಸಿ ಚಿತ್ರೀಕರಿಸಬಹುದಾಗಿದ್ದು, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಯಾವುದೇ ಮಾಧ್ಯಮಗಳಿಗಿಂದ ದೃಶ್ಯಗಳನ್ನು ಕಟ್ ಅಂಡ್ ಪೇಸ್ಟ್‌ ಆಗಲೀ, ಸಾಕ್ಷ-್ಯಚಿತ್ರವನ್ನಾಗಲೀ ಅಥವಾ ಸಂಪೂರ್ಣ ಎನಿಮೇಷನ್ ಚಿತ್ರಗಳನ್ನಾಗಲೀ ಸ್ಪರ್ಧೆಗೆ ಕಳಿಸುವಂತಿಲ್ಲ. ಸಂಪೂರ್ಣವಾಗಿ ಸ್ವಂತಿಕೆಯ ನಿರ್ದೇಶನದ ಯಾವುದೇ ವಿಷಯವನ್ನು ಕುರಿತು ಕಿರು ಚಿತ್ರ ನಿರ್ಮಿಸಬಹುದು. ಹಾಸ್ಯ ಕಥಾನಕವುಳ್ಳ ಕಿರುಚಿತ್ರಗಳಿಗೆ ವಿಶೇಷ ಆದ್ಯತೆಯಿದೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ  ಡಾ. ನಾಗಭೂಷಣ, ಜಿ. ವಿಜಯಕುಮಾರ್, ಕೆ. ಎಸ್‌. ಚೇತನ್, ಚೇತನ್ (ಶ್ರೀನಿಚಿ), ಆನಂದ, ಚಂದ್ರಶೇಖರ್, ಶಿವಾನಂದ್, ಸುಕುಮಾರ್, ಸಂತೋಷ್, ಮಂಜುನಾಥ್, ಶಿವು, ಎನ್‌. ಬಿ. ರವೀಶ, ಮೊದಲಾದವರು ಉಪಸ್ಥಿತರಿದ್ದರು. 

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು, ಕಲಾವಿದರು  ತೀರ​‍್ುಗಾರರಾಗಿ ಪಾಲ್ಗೊಳ್ಳಲಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ. 50,000 ರೂಗಳ ಪ್ರಥಮ ಬಹುಮಾನ, ರೂ. 30,000.00 ರೂ.ಗಳ ದ್ವಿತೀಯ ಬಹುಮಾನ ಜೊತೆಗೆ ಶ್ರೇಷ್ಟ ನಟ, ಶ್ರೇಷ್ಟ ನಟಿ, ಶ್ರೇಷ್ಟ ನಿರ್ದೇಶಕ, ಶ್ರೇಷ್ಟ ಕಥೆ-ಚಿತ್ರಕಥೆ, ಶ್ರೇಷ್ಟ ಛಾಯಾಗ್ರಹಣ, ಶ್ರೇಷ್ಟ ಸಂಗೀತ, ಶ್ರೇಷ್ಟ ಸಂಗೀತ ವಿಭಾಗಗಳಲ್ಲಿ ಹತ್ತು ಮಂದಿಗೆ ತಲಾ 5,000 ನಗದು ಆಕರ್ಷಣೀಯ ಸ್ಮರಣಿಕೆಗಳಿವೆ. ಪ್ರಶಸ್ತಿ ಪುರಸ್ಕೃತರಿಗೆ ಅಕ್ಟೋಬರ್ ಮಾಸಾಂತ್ಯದಲ್ಲಿ,  ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. 

*  ಡಿ. ಎಸ್‌. ಅರುಣ್ 

ಕಿರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 1,000.00 ರೂ.ಗಳ  ಪ್ರವೇಶ ಶುಲ್ಕವಿದ್ದು, ಅರ್ಜಿಗಳನ್ನು ಬಿ.ಹೆಚ್‌. ರಸ್ತೆಯ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು,  ಭರ್ತಿ ಮಾಡಿ  ಜುಲೈ 31ರ ಒಳಗಾಗಿ ಸಲ್ಲಿಸಬಹುದು. ಕಿರು ಚಿತ್ರಗಳನ್ನು   ನಾಲ್ಕು ಹೆಚ್‌ಡಿ ಶ್ರೇಣಿಯ ಡಿವಿಡಿ ಸಹಿತ  ಆಗಸ್ಟ್‌  30, 2024 ಒಳಗಾಗಿ ಸಲ್ಲಿಸಬಹುದು. ಸ್ಪರ್ಧೆಯ ವಿವರಗಳಿಗೆ ವೈದ್ಯ ಸಂಚಾಲಕರು (98444 56505, 83106 79925), ಡಾ. ನಾಗಭೂಷಣ (94492 84495) ಮಂಜುನಾಥ್ (96865 59950)ರವರನ್ನು ಸಂಪರ್ಕಿಸಬಹುದು. 

* ಡಿ. ಎಸ್‌. ಅರುಣ್ 

ಬರುವ ಅಕ್ಟೋಬರ್ ತಿಂಗಳಲ್ಲಿ ದಸರಾ ಚಲನಚಿತ್ರೋತ್ಸವ, ದಸರಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರ, ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಗೀರೀಶ್ ಕಾಸರವಳ್ಳಿಯವರ ಬಿಂಬ ಬಿಂಬನ ಕೃತಿ ಬಿಡುಗಡೆ, ಚಲನಚಿತ್ರ ಪ್ರದರ್ಶನ - ಸಂವಾದ ಆಯೋಜಿಸಲಾಗುತ್ತಿದೆ. 

* ವೈದ್ಯ