ದಲಿತ ಕವಿ ಸಿದ್ಧಲಿಂಗಯ್ಯಗೆ ನುಡಿ ನಮನ

ವಿಜಯಪುರ 23: ಡಾ. ಸಿದ್ಧಲಿಂಗಯ್ಯ ಅವರು ಬಡ ದಲಿತ ಕುಟುಂಬದಂದ ಬಂದು ಸಾಹಿತ್ಯ ಲೋಕದಲ್ಲಿ ಅಪರವಾದ ಜನ ಮನ್ನಣೆಯನ್ನುಗಳಿಸಿದ್ದರು. ಇವರು ಕ್ರಾಂತಿಕಾರಿ ಗೀತೆಗಳು, ಸಾಹಿತ್ಯ, ಕೃತಿಗಳು, ಕವನಗಳು  ಮತ್ತು ಕ್ರಾಂತಿಕಾರಿ ಹೋರಾಟಗಳು ಮಾಡಿದ್ದಾರೆ. ಅವರನ್ನು ಕಳೆದುಕೊಂಡ ಕರುನಾಡು ಅನಾಥವಾಗಿದೆ ಎಂದು ಎಸ್‌.ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಗೋಪಾಲ ಘಟಕಾಂಬಳೆ ಹೇಳಿದರು. 

ದಲಿತ ಕವಿ ಸಿದ್ಧಲಿಂಗಯ್ಯ ಅವರ ನುಡಿ ನಮನ ಕಾರ್ಯಕ್ರಮವನ್ನು ಬಿಜೆಪಿ ಎಸ್‌.ಸಿ.ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. 

ಸಿದ್ಧಲಿಂಗಯ್ಯ ಅವರು ನಿಧನ ಹೊಂದಿದ ಸುದ್ದಿ ತಿಳಿದು ನಮ್ಮ ರಾಷ್ಟ್ರೀಯ ಸ್ವಯಂ ಸೇವಕ  ಸಂಘದ ಹಿರಿಯರು ಹಾಗೂ ಭಾರತೀಯ ಜನತಾ ಪಾರ್ಟಿ ನೇತೃತ್ವದ ಯಡಿಯೂರ​‍್ಪನವರ ಸರಕಾರ ದಿವಗಂತ ಡಾ. ಸಿದ್ದಲಿಂಗಯ್ಯಾ ಅಂತ್ಯಕ್ರಿಯೆಯನ್ನು  ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ವಿಶ್ವ ವಿದ್ಯಾಲಯದ ಕಲಾ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರಿಂದ ಭಾರತೀಯ ಜನತಾ ಪಾರ್ಟಿ ಎಸ್‌.ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಗೋಪಾಲ ಘಟಕಾಂಬಳೆ ಅವರು ಸಂಘದ ಪ್ರಮುಖರಿಗೆ ಹಿರಿಯರಿಗೆ ಹಾಗೂ  ಮುಖ್ಯಮಂತ್ರಿ ಯಡಿಯೂರ​‍್ಪನವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸಲಾಯಿತು. 

ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಲಕೋಟ ಹಾಗೂ ನಗರ ಮಂಡಲಿ ಅಧ್ಯಕ್ಷರಾದ ಮಳಗೌಡ ಪಾಟೀಲ ಮಾತನಾಡಿ ಚಂದ್ರಶೇಖರ ಕವಟಗಿ, ವಿವೇಕ ಡಬ್ಬಿ, ಗೀತಾ ಕುಗನೂರ, ವಿಠ್ಠಲ ನಡುವಿನಕೇರಿ, ಸದಾಶಿವ ಛಲವಾದಿ, ಉದಯ ಕನ್ನೊಳ್ಳಿ, ಪ್ರಲ್ಹಾದ ಕಾಂಬಳೆ, ರಮೇಶ ದೇವಕರ, ದುರ್ಗೆಶ ತಿಕೋಟಿಕರ, ಸಾಗರ ಶೇರಖಾನೆ, ಮಹೇಶ ಮೈಲಾರಿ, ಪಾಪುಸಿಂಗ ರಜಪೂತ, ಭರತಕೋಳಿ, ಎಸ್‌.ಸಿ.ಮೋರ್ಚಾದ ಜಿಲ್ಲಾ ಹಾಗೂ ನಗರದ ಪದಾಧಿಕಾರಿಗಳು ಹಾಜರಿದ್ದರು.