ಉಚಿತವಾಗಿ ಹೇರಿಗೆಗಳಿಗೆ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕನಿಗೆ ಸನ್ಮಾನ
ಯಮಕನಮರಡಿ, 01 : ಸ್ಥಳೀಯ ರಹವಾಸಿ ಹಾಗೂ ಉಚಿತವಾಗಿ ಹೇರಿಗೆಗಳಿಗೆ ಸೇವೆ ಸಲ್ಲಿಸುತ್ತೀರುವ ಗ್ರಾಮದ ಆಟೋ ಚಾಲಕ ಹಾಗೂ ಹವ್ಯಾಸಿ ಕಲಾವಿದರರು ಮಲ್ಲಯ್ಯಾ ಸ್ವಾಮಿ ಹಿರೇಮಠ ಇವರು ಸುಮಾರು ವರ್ಷಗಳಿಂದ ಬಡವರಿಗಾಗಿ ಉಚಿತವಾಗಿ ಹೇರಿಗೆಗೆ ಆಟೋ ಸೆವೆ ಸಲ್ಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇವರು ಇಲ್ಲಿಯವರೆಗೆ 350 ಹೇರಿಗೆಗಳಿಗೆ ಉಚಿತವಾಗಿ ತನ್ನದೆ ಆದ ಆಟೋದಲ್ಲಿ ಕರೆದುಕೊಂಡು ಹೋಗಿ ಸೇವೆ ಸಲ್ಲಿಸುತ್ತಿರುವುದು ಅಪರೂಪವಾಗಿದೆ.
ಇವರು ರಾತ್ರಿ ಹೊತ್ತಿನಲ್ಲಿಯೂ ಸಹ ಪೋನ ಮುಖಾಂತರ ಕರೆ ಮಾಡಿದರು ಸಹಿತ ಬಂದು ಸೇವೆ ಸಲ್ಲಿಸುತ್ತಿರುವ ಮಲ್ಲಯ್ಯಾ ಸ್ವಾಮಿಗಳು ನನ್ನದು ಜನಸೇವೆಯೇ ಜನಾರ್ದನ ಸೇವೆ ಅಂತಾ ಹೆಳುತ್ತಾರೆ. ಹಿಂತವರೂ ಆಧುನಿಕ ಯುಗದಲ್ಲಿ ಉಚಿತವಾಗಿ ಸೇವೆ ಮಾಡುವವರು ಅಪರೂಪ ಎಂದು ಹೆಳಿದರೂ ತಪ್ಪಾಗಲಾರದು. ಇವರು ದಿ 25 ರಂದು ಹಿಡಕಲ್ ಡ್ಯಾಂ ನ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕವಿಗೊಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಇವರನ್ನು ಪ್ರಮಾಣ ಪತ್ರ ನಿಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಅಧಿಕಾರಿಗಳು ಮಕ್ಕಳ ಸಾಹಿತ್ಯ ವೇದಿಕೆ ಹುಕ್ಕೇರಿ ಪ್ರಕಾಶ ಹೋಸಮನಿ, ಹಿರಿಯ ಸಾಹಿತಿಗಳಾದ ಎಸ್ ಎಮ್ ಶಿರೂರ, ಹಾಗೂ ಸಂಸ್ಥೆಯ ಮಹಿಳಾ ಪ್ರತಿನಿಧಿಗಳು ಆತ್ಮಿಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬಯಲಾಟ ಕಲಾವಿದರು ಪತ್ರಕರ್ತರು ಆದ ಗೋಪಾಲ ಚಪಣಿ ಹಾಗೂ ಸಾಹಿತ್ಯ ಬಳಗ ಉಪಸ್ಥಿತರಿದ್ದರು.