ವಿವಿ ಗಳನ್ನು ಮುಚ್ಚಿದರೆ ದೇವಾಲಯ ಮುಚ್ಚಿದಂತೆ : ಮ್ಯಾಗೇರಿ
ಶಿಗ್ಗಾವಿ 01 :ವಿಶ್ವವಿದ್ಯಾಲಯಗಳೆಂದರೆ ಜ್ಞಾನದ ದೇವಾಲಯಗಳು ಇವುಗಳನ್ನು ಮುಚ್ಚಲು ಹೊರಟರೆ ದೇವಸ್ಥಾನಗಳನ್ನು ಮುಚ್ಚಿದಂತೆ ಎಂದು ಶಿಗ್ಗಾವಿ ತಾಲೂಕ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷರಾದ ಶಿವಾನಂದ ಮ್ಯಾಗೇರಿ ಹೇಳಿದರು. ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಭವ್ಯ ಭಾರತ ಭವಿಷ್ಯ ರೂಪಿಸುವ ಶಕ್ತಿಗಳನ್ನು ಹುಟ್ಟು ಹಾಕುವ ದಿವ್ಯ ಜ್ಞಾನ ಕೇಂದ್ರಗಳೆಂದರೆ ಅವು ವಿಶ್ವವಿದ್ಯಾಲಯ ಜಿಲ್ಲೆಯಲ್ಲಿ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡಲು ಮತ್ತು ತಮ್ಮ ತಮ್ಮ ಗುರಿ ಹಾಗೂ ಭವಿಷ್ಯ ರೂಪಿಸಿಕೊಳ್ಳುತ್ತಿರುವವರಿಗೆ ವಿವಿ ಮುಚ್ಚುವ ಶಬ್ದ ಕೇಳಿ ಬರ ಸಿಡಿಲು ಬಡಿದಂತಾಗಿದೆ ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಚಿವುಟುವಂತಾಗುತ್ತದೆ. ಎಲ್ಲ ರಂಗದಲ್ಲೂ ಶಿಕ್ಷಣ ಬಹಳ ಮುಖ್ಯ ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ರಾಜ್ಯ ಅಭಿವೃದ್ಧಿಯಲ್ಲಿ ಮುಂದು ಬರಲು ಸಾಧ್ಯವಿದೆ ಕಾರಣ ಸರಕಾರ ಎಚ್ಚೆತ್ತುಕೊಂಡು ಕೂಡಲೇ ವಿಶ್ವವಿದ್ಯಾಲಯ ಮುಚ್ಚುವ ವಿಚಾರ ಕೈಬಿಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.