ಶಿಗ್ಗಾವಿ ತಾಲೂಕನ್ನು ಮಾದರಿ ತಾಲೂಕ ಮಾಡುವ ಸಂಕಲ್ಪ : ರವಿ ತಿರ್ಲಾಪೂರ

Determination to make Shiggavi taluk a model taluk: Ravi Tirlapura

ಶಿಗ್ಗಾವಿ ತಾಲೂಕನ್ನು ಮಾದರಿ ತಾಲೂಕ ಮಾಡುವ ಸಂಕಲ್ಪ : ರವಿ ತಿರ್ಲಾಪೂರ

ಶಿಗ್ಗಾವಿ 01  : ಶಿಗ್ಗಾವಿ ತಾಲೂಕನ್ನು ಮಾದರಿ ತಾಲೂಕ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ಶಿಗ್ಗಾವಿ ನೋಡಲ್ ಅಧಿಕಾರಿ ರವಿ ತಿರ್ಲಾಪೂರ ಹೇಳಿದರು.  ಪಟ್ಟಣದ ಅಂಬೇಡ್ಕರ್ ಆಡಳಿತ ಭವನದಲ್ಲಿ ನಡೆದ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸುವುದು, ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಅಂತರ ವಿಭಾಗಗಳ ನಡುವೆ ಸಾಮರಸ್ಯ ತರುವುದು, ಗ್ಯಾರಂಟಿ ಯೋಜನೆಗಳನ್ನು ಸಮರ​‍್ಕವಾಗಿ ಅನುಷ್ಠಾನಕ್ಕೆ ತರುವುದು, ಸಂಪನ್ಮೂಲಗಳ ಕ್ರೋಡೀಕರಿಸುವುದು,ಬರುವ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಗ್ರಾಮ ಮತ್ತು ಪಟ್ಟಣಗಳಲ್ಲಿ ಕುಡಿಯುವ ನೀರು ಮೇವು ಸಂಗ್ರಹಣೆಯನ್ನು ಗಮನಿಸಿ ಅಗತ್ಯಬಿದ್ದಲ್ಲಿ ಸಮಸ್ಯೆಗೆ ತುರ್ತು ಕ್ರಮಕೈಗೊಳ್ಳಬೇಕು, ಎಸ್‌.ಎಸ್‌.ಎಲ್‌.ಸಿ ಮಕ್ಕಳ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಚಿಸಿದರು. ಪ್ರತಿ ತಿಂಗಳಿಗೊಮ್ಮೆ ಸಭೆಯನ್ನು ಮಾಡುವದು ಹಾಗೂ ಕಾರ್ಯ ಕ್ಷೇತ್ರಕ್ಕೆ ಬೇಟಿ ನೀಡಿ ಸಮಸ್ಯೆಗಳನ್ನು ಆಲಿಸುವುದು ಎಂದರು.   ಈ ಸಂದರ್ಭದಲ್ಲಿ ತಹಶೀಲ್ದಾರ ರವಿ ಕೊರವರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಮಣ್ಣವಡ್ಡರ, ಇಂಧುದರ ಮುತ್ತಳ್ಳಿ, ಹರ್ಲಾಪೂರ, ಚನ್ನಬಸವೇಶ ಜಿನಗಾ, ನಿಂಬಣ್ಣಾ ಹೊಸಮನಿ, ಪ್ರಕಾಶ ಓಂಧಕರ, ಬ್ರೂಪತಿ ಭೂಸರೆಡ್ಡಿ ಅಧಿಕಾರಿಗಳು ಉಪಸ್ಥಿತರಿದ್ದರು.