ಬೊಲೆರೋ ವಾಹನ ಉರುಳಿ ಇಬ್ಬರ ಸಾವು
ಬಳ್ಳಾರಿ 29: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ರಸ್ತೆಯ ಪಕ್ಕ ಮಗುಚಿಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುರುಗೋಡು ತಾಲ್ಲೂಕಿನ ಮದಿರೆ ಕ್ರಾಸ್ ಬಳಿ ಶನಿವಾರ ಜರುಗಿದೆ. ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದ ರಂಗಪ್ಪ (35) ಮತ್ತು ಕಲ್ಲುಕಂಭ ಗ್ರಾಮದ ಪರಮೇಶ (32) ಘಟನೆಯಲ್ಲಿ ಮೃತಪಟ್ಟವರು. ವಾಹನದಲ್ಲಿ ಪ್ರಯಾಣಿಸುತ್ತಿದ್ದ ತಿಪ್ಪೇಸ್ವಾಮಿ ಮತ್ತು ಗಣೇಶ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಳೂರು ಕ್ರಾಸ್‌ನಿಂದ ಕುರುಗೋಡು ಕಡೆಗೆ ಬರುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ಪ್ರಸಾದ್ ಗೋಖಲೆ, ಪಿಸಿಐ ವಿಶ್ವನಾಥ ಹಿರೇಗೌಡರ್ ಮತ್ತು ಪಿಎಸ್‌ಐ ಸುಪ್ರಿತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಚಾಲಕನ ಅಜಾಗರೂಕತೆಯ ಚಾಲನೆ ಘಟನೆಗೆ ಕಾರಣ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.