ರಾಜಧನಕ್ಕೆ ಕನ್ನ ಹಾಕಿರುವ ಇಲಾಖೆಗಳ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹ ‘ಲೋಕಾಯುಕ್ತ ತನಿಖೆಗೆ’ ಒತ್ತಾಯ

Demand for disciplinary action against the officials of the departments who have embezzled the capi

ರಾಜಧನಕ್ಕೆ ಕನ್ನ ಹಾಕಿರುವ ಇಲಾಖೆಗಳ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹ  ‘ಲೋಕಾಯುಕ್ತ ತನಿಖೆಗೆ’ ಒತ್ತಾಯ  

ರಾಣೇಬೆನ್ನೂರು 01: ಜಿಲ್ಲೆಯಲ್ಲಿ ಕೃಷಿಕರಿಗೆ ಪ್ರಮುಖ ನೀರಾವರಿ ಆಧಾರ ಮೂಲಗಳಲ್ಲೊಂದಾದ ಅಪ್ಪಾರತುಂಗಾ ಯೋಜನೆಯ ಮುಖ್ಯ ಕಾಲುವೆಯ ಮೇಲ್ಭಾಗದಲ್ಲಿರುವ ಮಣ್ಣನ್ನು ದಂದೆಕೋರರು ಎಗ್ಗಿಲ್ಲದೆ ಸಾಗಾಟ ಮಾಡುತ್ತಿದ್ದು ದಂದೆಕೋರರೊಂದಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೈ ಜೋಡಿಸಿದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ಕೋಟಿ ಕೋಟಿ ರಾಜಧನಕ್ಕೆ ನಷ್ಟ ಉಂಟಾಗಿದ್ದು ಕೂಡಲೇ ಸಂಬಂಧಿಸಿದ ಹಿರಿಯ ಇಲಾಖೆಗಳ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕಾನೂನುಕ್ರಮ ಜರುಗಿಸಬೇಕು ಮತ್ತು ಸಮಗ್ರ ವರದಿಗೆ ಲೋಕಾಯುಕ್ತ ತನಿಖೆ ನಡೆಸಬೇಕೆಂದು ರೈತ ಮುಖಂಡರ ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯಿಸಿದ್ದಾರೆ.  

     ರಾಣೇಬೆನ್ನೂರು ಹೊರವಲಯದ ಬೈಪಾಸ್ ರಸ್ತೆಯ ಕೂನಬೇವು ಸಮಿಪ ಗದಗ-ಹೊನ್ನಾಳಿ ರಸ್ತೆಯ ಹತ್ತಿರ ಇರುವ ಅಪ್ಪರತುಂಗಾ ಮುಖ್ಯ ಕಾಲುವೆಯ ಮೇಲ್ಭಾಗದಲ್ಲಿರುವ ಮಣ್ಣನ್ನು ದಿನನಿತ್ಯ ಪ್ರತಿರಾತ್ರಿ ಮಣ್ಣು ಕಳ್ಳದಂದೆಕೋರರರು ಏಕಕಾಲದಲ್ಲಿ 30-40 ಟಿಪ್ಪರ ಲಾರಿಗಳಲ್ಲಿ ಜೆಸಿಬಿ ಮುಖಾಂತರ ಸುಮಾರು 15 ಕಿ.ಮೀ. ಅಂತರದಲ್ಲಿ ಬಹುದಿನಗಳಿಂದ ಮಣ್ಣ್ಣು ಸಾಗಾಟ ಮಾಡುತ್ತಿದ್ದು ನಿಯಂತ್ರಿಸಬೇಕಾದ ಸಂಬಂಧಿಸಿದ ಇಲಾಖೆಯವರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಕೂಡ ಕಳ್ಳ ದಂದೆಕೋರರೊಂದಿಗೆ ಅಧಿಕಾರಿಗಳು ಕೈ ಜೋಡಿಸಿದ್ದರಿಂದ ರಾಯಲ್ಟಿ ರೂಪದಲ್ಲಿ ಸರಕಾರಕ್ಕೆ ಸಂದಾಯವಾಗಬೇಕಿದ್ದ ಕೋಟಿ. ಕೋಟಿ ಹಣ ನಷ್ಟವಾಗಿದೆ. ನಿನ್ನೆ ಹೊಸ ವರ್ಷದ ಆಚರಣೆ ಗದ್ದಲದ ಮಧ್ಯೆ ಸಂಜೆಯಿಂದಲೆ ದಂದೆಕೋರರು ಮಣ್ಣು ಸಾಗಾಟಕ್ಕೆ ‘40’ ಟಿಪ್ಪರಗಳನ್ನು ತಂದು ಮಣ್ಣು ಹೇರುತ್ತಿದ್ದಾಗ ಈ ದಂದೆಕೋರರ ದೊಡ್ಡ ದೊಡ್ಡ ಲಾರಿಗಳ ಹಾವಳಿ ಪಕ್ಕದ ಹೊಲಗಳಿಗೆ ಆಗುತ್ತಿರುವ ದಿನನಿತ್ಯದ ತೊಂದರೆಯಿಂದ ರೋಸಿ ಹೋಗಿದ್ದ ರೈತರು ರೈತ ಮುಖಂಡ ರಾಜು ಎಂ. ಮಾದಮ್ಮನವರ ನೇತೃತ್ವದಲ್ಲಿ ಲಾರಿಗಳಿಗೆ, ಟಿಪ್ಪರಗಳಿಗೆ ಅಡ್ಡನಿಂತು ಸಂಬಂಧಿಸಿದ ತಹಶಿಲ್ದಾರರಿಂದ ಹಿಡಿದು ಅಪ್ಪರ್ ತುಂಗಾ ಯೋಜನೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಪೋನ್ ಮಾಡಿದರು. ಯಾವ ಅಧಿಕಾರಿಗಳು ಸ್ಪಂದನೆ ಮಾಡದೆ ಇದ್ದಾಗ ಲಾರಿ ಮತ್ತು ಟಿಪ್ಪರಗಳ ಡ್ರೈವರ್ ಮತ್ತು ಮಾಲಕರು ಸೇರಿ ಮಧ್ಯರಾತ್ರಿ ಇವರ ಮೇಲೆ ಹಲ್ಲ್ಲೆಗೆ ಯತ್ನಿಸಿದಾಗ ಭಯಗೊಂಡ ರೈತರು 112 ಪೊಲೀಸ್ ವಾಹನಕ್ಕೆ ಕರೆ ಮಾಡಿ ಪ್ರಾಣಾಪಾಯದಿಂದ ಪಾರಾಗಿದ್ದು ಕೂಡಲೇ ರೈತರು ಲಾರಿ ಮತ್ತು ಟಿಪ್ಪರಗಳನ್ನು ಬಿಟ್ಟು ಜೀವಭಯದಿಂದ ಓಡಿ ಬಂದಿದ್ದು ಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳು ಸಂಬಂಧಿಸಿದವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕು ಮಣ್ಣು ಮಾರಾಟ ನಿಲ್ಲಬೇಕು. ಕಾಲುವೆಗಳ ಸುರಕ್ಷತೆಗೆ ಮೇಲ್ಭಾಗದ ಮಣ್ಣು ಇದ್ದರೆನೆ ಕಾಲುವೆಗೆ ಸುರಕ್ಷತೆ ರಾತ್ರಿ ವೇಳೆ ಪೋಟೋ, ವಿಡಿಯೋ ಮಾಡಲಿಕ್ಕೆ ರೈತರಿಗೆ ಬಿಡದೆ ಬಂಡತನ ಪ್ರದರ್ಶಿಸಿರುವ ಲಾರಿ ಮತ್ತು ಟಿಪ್ಪರಗಳ ಡ್ರೈವರ್ ಮತ್ತು ಮಾಲಕರನ್ನು ಪತ್ತೆಹಚ್ಚಿ ಗುಂಡಾ ಲಿಸ್ಟಿನಲ್ಲಿ ಸೇರಿಸಬೇಕು. ಮಣ್ಣ್ಣು ಮಾರಾಟದ ಒಂದು ದೊಡ್ಡ ಮಾಫಿಯಾವೇ ಇದ್ದು ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಹಗಲು ದರೋಡೆಗೆ ನಿಂತಿದೆ ಕಾನೂನು ಪ್ರಕಾರ ಬೀದಿಗೆ ಇಳಿದ ಅಧಿಕಾರಿಗಳನ್ನು ಹೆದರಿಸಿ ಜೀವ ಭಯ ಹುಟ್ಟಿಸುವ ಇಂತವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಕತ್ತಲಲ್ಲಿ ತೆಗೆದ ಪೋಟದಲ್ಲಿ ಕೆಲವು ಲಾರಿಗಳ ನಂಬರ್ ಮೂಡಿದ್ದು ಪೊಲೀಸರು ತನಿಖೆ ನಡೆಸಬೇಕು. ಈ ಪ್ರಕರಣ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ಮತ್ತು ಘಟನಾ ಸ್ಥಳದಲ್ಲಿದ್ದ ರೈತರಾದ ಬಸವರಾಜ ಮೈದೂರು, ಬಾಬುಸಾಬ ದೊಡಮನಿ, ಬಸಪ್ಪ ಗೋಣಿಬಸಮ್ಮನವರ, ತಿರಕಪ್ಪ ಮುದಕಮ್ಮನವರ ಸರಕಾರ ಮತ್ತು ಜಿಲ್ಲಾಡಳಿತ, ತಾಲೂಕಾಡಳಿತಕ್ಕೆ ಕೋರಿದ್ದಾರೆ.