ಭಕ್ತಯಿಂದ ಮನಃ ಪೂರ್ವಕವಾಗಿ ಮಾಡುವ ಎಲ್ಲ ಕಾರ್ಯವೂ ಶ್ರೇಷ್ಠವಾಗಲಿವ: ಷ.ಬ್ರ.ಘನಬಸವ ಅಮರೇಶ್ವರ ಶಿವಾಚಾರ್ಯ

All work done by a devotee with the heart will be great: Sha.Br.Ghanabasava Amareswara Shivacharya

ಭಕ್ತಯಿಂದ ಮನಃ ಪೂರ್ವಕವಾಗಿ ಮಾಡುವ ಎಲ್ಲ ಕಾರ್ಯವೂ ಶ್ರೇಷ್ಠವಾಗಲಿವ: ಷ.ಬ್ರ.ಘನಬಸವ ಅಮರೇಶ್ವರ ಶಿವಾಚಾರ್ಯ  

ಹಾವೇರಿ 1: ಉತ್ತಮ ಸಂಸ್ಕಾರ ಪಡೆಯಲು ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು, ಭಕ್ತಯಿಂದ ಮನಃ ಪೂರ್ವಕವಾಗಿ ಮಾಡುವ ಎಲ್ಲ ಕಾರ್ಯವೂ ಶ್ರೇಷ್ಠವಾಗಲಿವೆ ಎಂದು ಜಡೆ ವ ಹಿರೇಮುಗದೂರ ಹಿರೇಮಠ ಷ.ಬ್ರ.ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

     ಜಿಲ್ಲೆಯ ಹಿರೇಮುಗದೂರ ಗ್ರಾಮದ ಶ್ರೀ ಸಾಲಿದುರಗಮ್ಮ ಹಾಗೂ ಶ್ರೀ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನಿಧ್ಯವಹಿಸಿ ಶ್ರೀಗಳು ಆರ್ಶಿವಚನ ನೀಡಿದರು.ಈ ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಸ್ವಭಾವದವರಾಗಿದ್ದು,ಊರಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ.ದೇವತೆಗಳ ಜಾತ್ರೆಯು ಎಲ್ಲ ಬಂಧು ಬಳಗದವರನ್ನು ಒಂದುಗೂಡಿಸುವ ಪ್ರಯತ್ನವಾಗಲಿದೆ.ಮೌಲ್ಯಯುತ ಜೀವನಕ್ಕೆ ಎಲ್ಲರೂ ಬದ್ಧತೆಯಿಂದ ಮುಂದಾಬೇಕು ಎಂದು ಶ್ರೀಗಳು ಶುಭ ಕೋರಿ ಆರ್ಶಿವಚನ ನೀಡಿದರು. 

      ಉಪಸಭಾಧ್ಯಕ್ಷರು ಹಾಗೂ ಶಾಸಕರಾದ ರುದ್ರ​‍್ಪ ಲಮಾಣಿ  ಅವರು ಕಾರ್ಯಕ್ರಮ ಉದ್ಘಾಟನೆ ನೇರವೆರಿಸಿ ಮಾತನಾಡಿ ಮೇಘಾಲಯದಲ್ಲಿ ಒಂದು  ಮಾದರಿ ಹಳ್ಳಿ ಇದ್ದು ಅದರಂತೆ ಈ ಗ್ರಾಮವನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ.ಎಲ್ಲರ ಸಹಕಾರದಿಂದ ಈ ಗ್ರಾಮವನ್ನು ಅಭಿವೃದ್ಧಿಗೊಳಿಸೋಣ ಎಂದರು. 

   ಹತ್ತಿಮತ್ತೂರ ವಿರಕ್ತಮಠದ ಶ್ರೀ ಮ.ನಿ.ಪ್ರ.ನಿಜಗುಣ ಮಹಾಸ್ವಾಮಿಗಳು ಹಾಗೂ ಹಿರೇಮುಗದೂರ ವ ನೆಗಳೂರ ಹಿರೇಮಠದ ಶ್ರೀ.ಷ.ಬ್ರ.ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಈ ಗ್ರಾಮದ ಎಲ್ಲ ಜನರು ಉತ್ತಮ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕಾರ ನೀಡುವವರಾಗಿದ್ದಾರೆ. ಈ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಮಾಡುತ್ತಿದ್ದು,ಶ್ರೀಗಳ ಬಗ್ಗೆ ಅಪಾರ ಭಕ್ತಿ ಇದೆ.ತಾವೆಲ್ಲರೂ ಒಗ್ಗಟ್ಟಿನಿಂದ ಎಲ್ಲ ಕಾರ್ಯಕ್ರಮ ಮಾಡುವ ತಮ್ಮ ಚಿಂತನೆ ಉತ್ತಮವಾಗಿದೆ ಎಂದು ಉಭಯ ಶ್ರೀಗಳು ಆರ್ಶಿವಚನ ನೀಡಿದರು. 

  ಲಿಡ್ಕರ್ ನಿಗಮದ ಮಾಜಿಉಪಾಧ್ಯಕ್ಷರಾದ ಡಿ.ಎಸ್ ಮಾಳಗಿ ಮಾತನಾಡಿ ಶ್ರೀ ಸಾಲಿದುರಗಮ್ಮ ಹಾಗೂ ಶ್ರೀ ಮಾತಂಗೆಮ್ಮ ದೇವತೆಗಳ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ತಿಳಿಸಿದರು.ಊರಿನ ಹಿರಿಯರಾದ ಬಸಪ್ಪ ಕಡ್ಲೇಪ್ಪನವರ ಮಾತನಾಡಿ ಊರಿನ ಅಭಿವೃದ್ಧಿಗೆ ಇನ್ನೂ ಹೆಚ್ಚು ಅನುದಾನ ನೀಡವಂತೆ ಶಾಸಕರಿಗೆ ಒತ್ತಾಯಿಸಿದರು. 

ಜಿಪಂ ಮಾಜಿ ಅಧ್ಯಕ್ಷರಾದ ಪರಮೇಶಪ್ಪ ಮೇಗಲಮನಿ ಅವರು  ಊರಿನ ಹಾಗೂ ಧಾರ್ಮಿಕ  ಕಾರ್ಯಕ್ರಮದ ಕುರಿತು ಮಾತನಾಡಿದರು.ಇದೇ ಅವಧಿಯಲ್ಲಿ ಶ್ರೀಗಳನ್ನು,ಶಾಸಕರನ್ನು, ಹಿರಿಯರನ್ನು,ಗಣ್ಯರನ್ನು ಹಾಗೂ ಮುಖಂಡರನ್ನು ಗೌರವಿಸಿ ಸನ್ಮಾನಿಸಲಾಯಿತು. 

      ಈ ಸಂದರ್ಭದಲ್ಲಿ ಶಾಸ್ತ್ರೀಗಳಾದ ಪರಮಯ್ಯ ಹಿರೇಮಠ ಮುಖಂಡರಾದ ಬಸವರಾಜ ಹೆಡಿಗೊಂಡ,ಎಸ್,ಜಿ ಹೊನ್ನಪ್ಪನವರ,ಉಡಚಪ್ಪ ಮಾಳಗಿ,ಅಶೋಕ ಮರೆಣ್ಣನವರ,ಪರಶುರಾಮ ಹರ್ಲಾಪುರ,ನಾಗರಾಜ ಮಾಳಗಿ,ಬಿ ಡಿ ಕೋಳೂರ,ಮಂಜುನಾಥ ಮಾಲಿ,ಗುರುಬಸಯ್ಯ ಚಪ್ಪರದಹಳ್ಳಿಮಠ,ರೈತ ಮುಖಂಡರಾದ ಹನುಮಂತಪ್ಪ ದಿವಿಗಿಹಳ್ಳಿ,ಫಕ್ಕೀರಗೌಡ ಗಾಜೀಗೌಡ್ರ,ಸಂಜೀವಕುಮಾರ ಸಂಜೀವಣ್ಣನವರ,ಮಲ್ಲಪ್ಪ ತಳವಾರ, ರಾಜಶೇಖರ ಮಾದರ,ಮರಿಯಪ್ಪ ನಡುವಿನಮನಿ,ಫಕ್ಕಿರಯ್ಯ ಕೆಂಭಾವಿಮಠ,ಗಂಗಪ್ಪ ಅರಳಿ,ಕೃಷ್ಣಪ್ಪ ಗೌಡ್ರ,ನಿಂಗಪ್ಪ ಆರೇರ,ಯಲ್ಲಪ್ಪ ಹೊಸಮನಿ,ಫಕ್ಕಿರೇಶ ಕಾಳಿ,ಅಶೋಕ ಅಳ್ಳಳ್ಳಿ,ನೀಲಪ್ಪ ಕಾಳಿ,ಬಸವರಾಜ ಕಾಳಿ,ಫಕ್ಕಿರೇಶ ಹೆಬ್ಬಾಳ,ಗುಡ್ಡಪ್ಪ ನಡುವಿನಮನಿ,ಮಂಜಪ್ಪ ಕಾಳಿ,ಹನುಮಂತಪ್ಪ ನಡುವಿನಮನಿ,ಗುಡ್ಡಪ್ಪ ಅಳ್ಳಳ್ಳಿ,ಮಾಲತೇಶ ಹೊಸಮನಿ,ಮಂಜಪ್ಪ ನಡುವಿನಮನಿ,ಕಾಂತೇಶ ನಡುವಿನಮನಿ  ಸೇರಿದಂತೆ ಊರಿನ ಗಣ್ಯರು,ಮಹಿಳೆಯರು, ಮುಖಂಡರು,ಸಮಾಜದವರು ಹಾಗೂ ಭಕ್ತರು ಪಾಲ್ಗೊಂಡಿದ್ದರು.