ಘಟಪ್ರಭಾ ನದಿಗೆ ಉರುಳಿ ಬಿದ್ದ ಕಾರು : ಕಾರಿನಲ್ಲಿ ಸಿಲುಕಿಕೊಂಡ ವ್ಯಕ್ತಿ ಸಾವು

Car fell into Ghataprabha river: Person stuck in car died

ಬೆಳಗಾವಿ : ಸಂಚರಿಸುತ್ತಿದ್ದ ಕಾರೊಂದು ಘಟಪ್ರಭಾ ನದಿ ನೀರಿಗೆ ಉರಳಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ಬೆನಕೊಳಿ ಗ್ರಾಮದ ಬಳಿ ನಡೆದಿದೆ. 

   ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಕಿರಣ ಎನ್ನುವ ವ್ಯಕ್ತಿಯು ಈ ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯಾಗಿದ್ದಾರೆ. ಈತ ತನ್ನ ಮಾರುತಿ ಇಕ್ಕೊ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕಾರು ಘಟಪ್ರಭಾ ನದಿಗೆ ಉರುಳಿಬಿದ್ದಿದೆ. 

  ಯಮಕನಮರಡಿ ಕಡೆಯಿಂದ ಬೆಳಗಾವಿ ಕಡೆಗೆ ಕಾರು ಸಂಚರಿಸುತ್ತಿದ್ದಾಗ ಕಾರು ನದಿ ನೀರಿಗೆ ಬಿದ್ದಿದೆ.  ಕಾರಿನಲ್ಲಿಯೇ ಕಿರಣ ಈತ ಸಿಲುಕಿಕೊಂಡು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕಾರು ಮಂಗಳವಾರ ಸಂಜೆ ಅಥವಾ ರಾತ್ರಿ ಬಿದ್ದಿರಬಹುದು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.