ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಸಿಸಿ ರಸ್ತೆ, ವಿವಿಧ ಕಾಮಗಾರಿಗೆ ಭೂಮಿಪೂಜೆ

CC road in minority colonies, Bhoomipuja for various works

ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಸಿಸಿ ರಸ್ತೆ, ವಿವಿಧ ಕಾಮಗಾರಿಗೆ ಭೂಮಿಪೂಜೆ

ದೇವರಹಿಪ್ಪರಗಿ 01: ಪಟ್ಟಣದ ಅಲ್ಪಸಂಖ್ಯಾತ ವರ್ಗದವರು ಹೆಚ್ಚಾಗಿರುವ ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 1ಕೋಟಿ ಹಾಗೂ 5ಮಸೀದಿಗಳಿಗೆ ತಲಾ 20 ಲಕ್ಷದಂತೆ ಒಟ್ಟು ? 2 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಶಾಸಕರಿಗೆ ಶಸ್ತ್ರ ಚಿಕಿತ್ಸೆ ಆದಕಾರಣ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಆಗಬಾರದು ಎಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತಿಳಿಸಿದ್ದಾರೆ ಎಂದು ಅವರ ಸಹೋದರರಾದ ಸಚಿನಗೌಡ ಪಾಟೀಲ ಕುದುರಿಸಾಲವಾಡಗಿ ತಿಳಿಸಿದರು.ಪಟ್ಟಣದಲ್ಲಿ ಬುಧವಾರದಂದು ಸನ್ 2024-25ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಯೋಜನೆ ಅಡಿಯಲ್ಲಿ ಸುಮಾರು 2ಕೋಟಿ ರೂ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮುಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ತಾರತಮ್ಯ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಮಾಡುವುದಿಲ್ಲ, ಚುನಾವಣೆ ಬೇರೆ, ಅಭಿವೃದ್ಧಿ ಬೇರೆ, ಪಟ್ಟಣ ಸೇರಿದಂತೆ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕರು ತಮ್ಮದೇ ಆದ ಕನಸಿನ ಯೋಜನೆಗಳನ್ನು ರೂಪಿಸಿದ್ದಾರೆ. ಬರುವಂತ ದಿನಗಳಲ್ಲಿ ಅನುದಾನದ ಕೊರತೆಯಿಂದ ಹಂತ ಹಂತವಾಗಿ ನೆರವೇರಿಸಲಿದ್ದಾರೆ. ಅಲ್ಪಸಂಖ್ಯಾತರು ಬಹುಸಂಖ್ಯಾತರು ಎನ್ನುವ ಭೇದ ಭಾವ ಮಾಡದೆ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಂಗವಿಕಲರ ಕ್ಷೇಮಾಭಿವೃದ್ಧಿಗಾಗಿ ತಾ.ಪಂ ಅನುದಾನದಲ್ಲಿ ಸುಮಾರು 10 ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು, ಲ್ಯಾಂಡ್ ಆರ್ಮಿ ಇಲಾಖೆ ವತಿಯಿಂದ 1ಕೋಟಿ ರೂ ವೆಚ್ಚದ ಸಿ.ಸಿ. ರಸ್ತೆ, 5ಮಸೀದಿ ಗಳಿಗೆ ತಲಾ 20 ಲಕ್ಷದಂತೆ ಮಂಜೂರಿಸಿದ ಕಾಮಗಾರಿಗಳ ನಿರ್ಮಾಣಕ್ಕೆ ಶಾಸಕರ ಮಾರ್ಗದರ್ಶನದಲ್ಲಿ ಹಾಗೂ ಸಾರ್ವಜನಿಕರ ಒತ್ತಾಯದಿಂದ ಚಾಲನೆ ನೀಡಲಾಗಿದೆ ಎಂದು ಹೇಳಿದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ರೀಯಾಜ ಯಲಿಗಾರ ಹಾಗೂ ಗಣ್ಯ ವ್ಯಾಪಾರಸ್ಥರಾದ ಜಬ್ಬರ ಅಹ್ಮದ್ ಮೋಮಿನ ಅವರು ಮಾತನಾಡಿ, ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ಆಗಿದ್ದರು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗಬಾರದು ಎನ್ನುವ ದೃಷ್ಟಿಯಿಂದ ಹಾಗೂ  ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದ ಅನುದಾನದ ಕೊರತೆ ಇದ್ದರು ಸತತ ಪ್ರಯತ್ನ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಶಾಸಕರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ, ಇ.ಒ. ಭಾರತಿ ಚೆಲುವಯ್ಯ,ಸಂಗನಗೌಡ ಬಿರಾದಾರ, ಗುರುರಾಜ ಆಕಳವಾಡಿ,ಲ್ಯಾಂಡ್ ಆರ್ಮಿ ಎಇಇ ರಾಜಶೇಖರ್, ಮುಖಂಡರುಗಳಾದ ಎ.ಡಿ. ಮುಲ್ಲಾ, ವೀರೇಶ ಕುದುರಿ, ತಾ.ಪಂ ಎಡಿ ಶಿವಾನಂದ ಮೂಲಿಮನಿ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಪಟ್ಟಣ ಪಂಚಾಯ್ತಿಯ ಸರ್ವ ಸದಸ್ಯರು, ಸಮುದಾಯದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು. 

ಫೋಟೋ 1ಡಿಎಚಪಿ1ಫೋಟೋ ಕ್ಯಾಪ್ಶನ್ 1ಡಿಎಚಪಿ1ಬತಾ.ಪ ಆವರಣದಲ್ಲಿ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಲಾಯಿತು. ಸಂದರ್ಭದಲ್ಲಿ ಮುಖಂಡರು, ಫಲಾನುಭವಿಗಳು ಹಾಗೂ ಅಧಿಕಾರಿಗಳು ಇದ್ದರು.