ಗದಗ 25: ವಿದ್ಯಾರ್ಥಿಗಳು ಪುಸ್ತಕ ಜ್ಞಾನಕ್ಕೆ ಸೀಮಿತಗೊಳ್ಳದೇ ಸ್ವಚ್ಛತೆ ಜೀವನ ಶೈಲಿ, ಸಮಯ ಪ್ರಜ್ಞೆ, ಮತ್ತು ಪ್ರಾಮಾಣಿಕತೆ ಬೆಳಸಿಕೊಳ್ಳಬೇಕು. ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ ಚವ್ಹಾಣ ನುಡಿದರು.
ಗದಗ ಜಿಲ್ಲಾ ಪಂಚಾಯತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ ಮೀಷನ್, ಸ್ವಚ್ಚಮೇವ ಜಯತೇ ಹಾಗೂ ಜಲಾಮೃತ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿಂದು ಸ್ವಚ್ಛತಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶ ಅಭಿವೃದ್ಧಿ ಪಟ್ಟಿಯಲ್ಲಿರಲು ಸ್ವಚ್ಛತೆ ಮೂಲ ಕಾರಣವಾಗಿದೆ. ಪಾಲಕರು ಹಾಗೂ ಶಿಕ್ಷಕರಿಂದ ಸಮಾಜ ಸುಧಾರಿಸಲು ಸಾಧ್ಯ. ಪ್ರತಿಯೊಬ್ಬರು ಶೌಚಾಲಯವನ್ನು ಬಳಸುವುದರ ಜೊತೆಗೆ ಎಲ್ಲರನ್ನೂ ಪ್ರೇರೆಪಿಸಬೇಕು. ಒಳ್ಳೆಯ ಸಮಾಜ ರಾಷ್ಟ್ರ, ಜಿಲ್ಲೆಯನ್ನು ನಿರ್ಮಿಸುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮಂಜುನಾಥ ಚವ್ಹಾಣ ಮನವಿ ಮಾಡಿದರು.
ಜಿ.ಪಂ ಉಪಕಾರ್ಯದರ್ಶಿ ಪ್ರಾಣೇಶರಾವ್ ಮಾತನಾಡಿ ಗಾಮೀಣ ಪ್ರದೇಶದಲ್ಲಿ ಪ್ಲಾಸ್ಟಿಕ ಬಳಕೆ ನಿಷೇಧಿಸಬೇಕು. ಪರಿಸರ ಸ್ವಚ್ಛತೆ ಇದ್ದರೆ ನಾವು ಆರೋಗ್ಯವಂತರಾಗಲು ಸಾದ್ಯ. ಹೆಚ್ಚು ಗಿಡಗಳನ್ನು ಬೆಳೆಸುವ ಅಭ್ಯಾಸವನ್ನು ರೂಢಿಸಕೊಳ್ಳಬೇಕು. ಸ್ವಚ್ಛತೆ ಎನ್ನುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಗ್ರಾಮ, ಮನೆ, ಶಾಲೆ ಹಂತಹಂತವಾಗಿ ಸ್ವಚ್ಛತೆಯಿಂದ ಇದ್ದರೆ ಮಾತ್ರ ಸಮಾಜ ಸುದಾರಿಸಲು ಸಾಧ್ಯ ಎಂದರು.
ಜಿ.ಪಂ ಯೋಜನಾ ನಿರ್ದೇಶಕ ಟಿ.ದಿನೇಶ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್ ನಾಗೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿದರ್ೇಶಕ ಎಚ್.ಬಿ ಅಸೂಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್.ಎ.ರಡ್ಡೆರ,ಎಸ್.ಎಸ್.ಕೆಳದಿಮಠ, ಸ್ವಚ್ಛತಾ ರಸಪ್ರಶ್ನೆ ಕಾರ್ಯಕ್ರಮದ ಸಂಯೋಜಕಿ ಅನುಷಾ, ಶಾಲಾ ಕಾಲೇಜು ಶಿಕ್ಷಕರು ಎಸ್.ಐ ಬಡಿಗೇರ ನಿರೂಪಿಸಿದರು. ಸ್ವಚ್ಛತಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಒಂದು ಸಾವಿರ ವಿದ್ಯಾಥರ್ಿಗಳು ಭಾಗವಹಿಸಿದ್ದರು.