ಸುನಂದಾ ವಾಲಿಕಾರ ಮಕ್ಕಳೊಂದಿಗೆ ಹೊಸ ವರ್ಷ ಆಚರಣೆ

Sunanda Valikara New Year celebration with children

ಸುನಂದಾ ವಾಲಿಕಾರ ಮಕ್ಕಳೊಂದಿಗೆ ಹೊಸ ವರ್ಷ ಆಚರಣೆ  

ಇಂಡಿ 01: ತಾಲ್ಲಕಿನಾದ್ಯಂತ ಹೊಸ ವರ್ಷ ಸಂಭ್ರಮ ಸಡಗರ ಜೋರಾಗಿತ್ತು. ಅದರಂತೆ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಅವರು ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷದ ಸಂಭ್ರಮ ಆಚರಣೆ ಮಾಡಿದರು.ನಂತರ ಮಾತನಾಡಿದ ಅವರು ಹಿಂದಿನ ವರ್ಷದಲ್ಲಿ ಆದ ನೋವುಗಳು, ಎದುರಾದ ಸಂಕಷ್ಟಗಳನ್ನು ಮರೆತು, ಮಾಡಿದ ತಪ್ಪುಗಳಿಂದ ಒಳ್ಳೆಯ ಪಾಠಗಳನ್ನು ಕಲಿತು ಜೀವನದಲ್ಲಿ ಹೊಸ ಹುರುಪು, ಉತ್ಸಾಹದೊಂದಿಗೆ ಮುಂದಡಿ ಇಡಲು ಇದು ಉತ್ತಮ ಕ್ಷಣವೂ ಹೌದು. ಇದೇ ಕಾರಣದಿಂದ ಹೊಸ ವರ್ಷ ಎಂದರೆ ಬರೀ ಕ್ಯಾಲೆಂಡರ್ ತಿರುವಿ ಹಾಕುವ ದಿನವಲ್ಲ, ಇಲ್ಲಿಂದ ನಮ್ಮ ಬದುಕನ್ನೂ ಉತ್ತಮವಾದ ದಿಕ್ಕಿನತ್ತ ಕೊಂಡೊಯ್ಯುವ ಅವಕಾಶ ನಮ್ಮ ಕೈಯಲ್ಲೇ ಇದೆ. ಅದರ ಸದುಪಯೋಗ ಬಲು ಮುಖ್ಯ ಎಂದು ಹೇಳಿದರು.ಶಿಕ್ಷಕಿಯರಾದ ಎನ್ ಎನ್ ಕವಟಿಗಿ ಮಾತನಾಡಿ ಹೊಸ ವರ್ಷದಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವ ಕ್ಷಣವೂ ಅದ್ಭುತ. ಪ್ರೀತಿಯ ಮಕ್ಕಳಿಗೆ ಶುಭವನ್ನು ಕೋರುತ್ತಾ ಸರ್ವರಿಗೂ ಒಳಿತನ್ನು ಬಯಸುತ್ತಾ ನಾವೆಲ್ಲರೂ ಹೆಜ್ಜೆ ಇಡೋಣ ಎಂದು ಹೇಳಿದರು.ಮುಖ್ಯಗುರುಗಳಾದ ಅನೀತಾ ರಾಠೋಡ, ಜಿ ಡಿ ಭಜಂತ್ರಿ,ಮಾನಂದ ಡಂಗಿ, ಶಿಲ್ಪಾ ಬೆಳವಡಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.