ಮೋಟೆಬೆನ್ನೂರ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ
ಬ್ಯಾಡಗಿ 1: ಮೋಟೆಬೆನ್ನೂರ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಈಡಿ ಕಾರು ಸುಟ್ಟು ಸಂಪೂರ್ಣ ಭಸ್ಮವಾದ ಘಟನೆ ಸೋಮವಾರ ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬ್ರಿಜ್ ಕೆಳ ದಾರಿಯ ಅರಬಗೊಂಡ ಕ್ರಾಸ್ ಹತ್ತಿರ ಈ ಘಟನೆ ಸಂಭವಿಸಿದೆ. ಗೋವಾದಿಂದ ಬೆಂಗಳೂರ ಕಡೆ ಕಾರು ತೆರಳುತ್ತಲಿತ್ತೆಂದು ಹೇಳಲಾಗಿದೆ. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಿಡಿ ಕಾಣಿಸಿಕೊಂಡ ತಕ್ಷಣವೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಕೆಳಗಿಳಿದು ಪ್ರಾಣರಕ್ಷಣೆ ಮಾಡಿಕೊಂಡಿದ್ದು, ಯಾರಿಗೂ ಯಾವುದೇ ತೆರನಾದ ಅವಘಡ ಸಂಭವಿಸಿಲ್ಲವೆಂದು ಹೇಳಲಾಗಿದೆ.ಒಟ್ಟು ಕಾರಿನಲ್ಲಿ ನಾಲ್ಕು ಜನರು ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು, ಆದರೆ ಆಗಲೇ ಕಾರು ಬಹುತೇಕ ಭಸ್ಮವಾಗಿತ್ತು’ ಎಂದು ತಿಳಿದು ಬಂದಿದೆ.