ಕಿತ್ತೂರು ರಾಣಿ ಚೆನ್ನಮ್ಮ ಬ್ಯಾಂಕ್ ಅವ್ಯವಹಾರ ಕ್ರಮಕ್ಕೆ ಒತ್ತಾಯ: ಆಡಳಿತ ಮಂಡಳಿ ಅಧ್ಯಕ್ಷರನ್ನು ಅನರ್ಹಗೊಳಿಸಲು ಆಗ್ರಹ

Kittoor Rani Chennamma bank embezzlement action: demand to disqualify board chairman

ಕಿತ್ತೂರು ರಾಣಿ ಚೆನ್ನಮ್ಮ ಬ್ಯಾಂಕ್ ಅವ್ಯವಹಾರ ಕ್ರಮಕ್ಕೆ ಒತ್ತಾಯ: ಆಡಳಿತ ಮಂಡಳಿ ಅಧ್ಯಕ್ಷರನ್ನು ಅನರ್ಹಗೊಳಿಸಲು ಆಗ್ರಹ

ಹೂವಿನಹಡಗಲಿ 01: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅವ್ಯವಹಾರಗಳು ಸಾಬೀತಾಗಿರುವುದರಿಂದ ಸಹಕಾರ ಸಂಘಗಳ ನಿಯಮ 29 (ಸಿ) ಅಡಿ ಆಡಳಿತ ಮಂಡಳಿ ಅಧ್ಯಕ್ಷರನ್ನು ಅನರ್ಹಗೊಳಿಸಬೇಕು ಎಂದು ಐಗೋಳ ಚಿದಾನಂದ ಆಗ್ರಹಿಸಿದರು.ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು,ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪನವರ ದೂರು ಅರ್ಜಿ ಆಧರಿಸಿ ಸಹಕಾರ ಸಂಘಗಳ ಉಪ ನಿಬಂಧಕರು ಈ ಸೊಸೈಟಿಯ ಪರೀವೀಕ್ಷಣೆ ನಡೆಸಿ ವರದಿ ನೀಡಿದ್ದಾರೆ. ಸಾಲ ವಿತರಣೆಯಲ್ಲಿ ಸಂಘದ ನಿಯಮ, ಉಪ ನಿಯಮ ಉಲ್ಲಂಘಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಆಧರಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.ಸಹಕಾರ ಸಂಘಗಳ ಲ್ಲಿ ರಾಜಕೀಯ ಸಲ್ಲದು ’ಪಟ್ಟಣದ ಪ್ರಾಥಮಿಕ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ನೇರ ರಾಜಕೀಯ ಚಟುವಟಿಕೆ ನಡೆಸಿರುವುದು ಒಳ್ಳೆಯದಲ್ಲ’ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ ಹೇಳಿದರು.ಸಹಕಾರ ಸಂಘಗಳ ಲ್ಲಿ ರಾಜಕೀಯ ಸಲ್ಲದುಸಹಕಾರ ಸಂಘಗಳಲ್ಲಿ ರಾಜಕೀಯ ನುಸುಳಿದರೆ ಸಹಕಾರ ಕ್ಷೇತ್ರ ಕಲುಷಿತಗೊಂಡು, ಸಂಘಗಳು ಅಧೋಗತಿಗೆ ಇಳಿಯುತ್ತವೆ.  

ಎರಡು ರಾಷ್ಟ್ರೀಯ ಪಕ್ಷಗಳೂ ಸಹಕಾರ ಚುನಾವಣೆಯನ್ನು ಸಾಮಾನ್ಯ ಚುನಾವಣೆ ರೀತಿಯಲ್ಲಿ ನಡೆಸಿರುವುದ- ನ್ನು ಖಂಡಿಸುತ್ತೇನೆ’ ಎಂದರು. ತಾಲ್ಲೂಕಿನ 19 ಸಹಕಾರಗಳು ಆರ್ಥಿಕವಾಗಿ ಅಶಕ್ತವಾಗಿವೆ. ಪ್ರತಿಷ್ಠೆ  ಯಿಂದ ಚುನಾವಣೆ ನಡೆಸುವುದರಿಂದ ಸಹಕಾರಗಳ ಮೇಲೆ ಆರ್ಥಿಕ ಹೊರೆ ಬೀಳಲಿದ್ದು, ಸದಸ್ಯರಿಗೆ ಲಾಭಾಂಶ ಹಂಚಿಕೆ, ಸವಲತ್ತು ನೀಡಲು ಸಾಧ್ಯವಾ- ಗುವುದಿಲ್ಲ’ ಎಂದು ತಿಳಿಸಿದರು.’ಪಿಕೆಪಿಎಸ್ನಿಂದ ಕಳೆದ ಅವಧಿಯಲ್ಲಿ ರೈತರಿಗೆ 70 ಕೋಟಿ ಕೃಷಿ ಸಾಲ, ವಾಣಿಜ್ಯ ಸಾಲ ನೀಡಲಾಗಿದೆ.ವಾಣಿಜ್ಯ ಸಂಕೀರ್ಣ ಗಳನ್ನು ನಿರ್ಮಿಸ ಲಾಗಿದೆ. ಎರಡು ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರಿಂದ ಈ ಐಗೋಳ ಬಾರಿಯೂ ಜನರು ಚಿದಾನಂದ ಅಭೂತಪೂರ್ವ ಬೆಂಬಲ ನೀಡಿದ್ದಾರೆ’ ಎಂದು ಹೇಳಿದರು.