ದಾನ ಧರ್ಮ ಸೇವಾ ಮನೋಭಾವ ಜೀವನದಲ್ಲಿ ಅಳವಡಿಸಿ: ಸುಭಾಸ್‌ಚಂದ್ರ ಹಾವೇರಿ

ರಾಣಿಬೆನ್ನೂರ 03: ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸಮಾಜಕ್ಕೆ ನಾವು ಕೊಡುಗೆ ಕೊಟ್ಟಾಗ ಈ ಪುಣ್ಯ ಭೂಮಿಯಲ್ಲಿ ನಾವು ಜನಿಸಿದ್ದಕ್ಕೂ ಸಾರ್ಥಕವಾಗುತ್ತದೆ ಈ ನಿಟ್ಟಿನಲ್ಲಿ ಸರ್ವರೂ ದಾನ ಧರ್ಮದಂತಹ ಸೇವಾ ಮನೋಭಾವನೆ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಅಂತವರ ಬದುಕು ಬಂಗಾರವಾಗುತ್ತದೆ ಎಂದು ಹೊಳಲು ಗ್ರಾಮದ ಸಾಹಿತಿ ಹಾಗೂ ಸಮಾಜ ಸೇವಕ ಸುಭಾಸ್‌ಚಂದ್ರ ಹಾವೇರಿ ಹೇಳಿದರು. 

ಸೋಮವಾರ  ನಗರದ ಸ್ನೇಹದೀಪ ಅಂಧರ ಸಂಸ್ಥೆಯ ವಸತಿ ಶಾಲೆಯಲ್ಲಿ ತಮ್ಮ 50ನೇ ಜನ್ಮದಿನದ ಪ್ರಯುಕ್ತ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿ ದಾನ ಮಾಡುವಂತಹ ಪ್ರವೃತ್ತಿ ರೂಢಿಸಿಕೊಳ್ಳಬೇಕು ಸಮಾಜದಲ್ಲಿ ಅನೇಕ ಬಡಮಕ್ಕಳು ಇದ್ದಾರೆ ಅಂತವರನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಹಾಗೂ ಅವರ ಏಳ್ಗೆಗೆ ಶ್ರಮಿಸಬೇಕು ಎಂದರು. 

ಲಯನ್ಸ್‌ ಕ್ಲಬ್ ಅಧ್ಯಕ್ಷ ಪ್ರಭಲಿಂಗಪ್ಪ ಹಲಗೇರಿ ಮಾತನಾಡಿ, ಸುಭಾಸ್‌ಚಂದ್ರ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಅನೇಕ ಬಡ ಬಗ್ಗರಿಗೆ ತಮ್ಮ ಕೈಲಾದಷ್ಟು ಸೇವೆಯನ್ನು ಮಾಡಿದ್ದಾರೆ ಇದೀಗ ತಮ್ಮ 50ನೇ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ನೀಡಿದ್ದು ನಿಜಕ್ಕೂ ಅವರ ಕಾರ್ಯ ಶ್ಲ್ಯಾಘನೀಯ ಎಂದರು. 

ಮುಖ್ಯೋಪಾಧ್ಯಾಯ ನೀಲಪ್ಪ ಗೋಡಿ, ಸಂಜಯಕುಮಾರ, ಆಶಾ ಪಾಟೀಲ, ರುಬಿಯಾ, ಜೆಸಿಐ ಅಧ್ಯಕ್ಷ ಶಿವಶಂಕರ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಪ್ರಕಾಶ ಬನ್ನಿಕೋಡ, ಶೋಭಾ ಹಾವೇರಿ, ಸುರೇಶ ದೇವಳೆ, ಮಂಜುನಾಥ ಪಟಗಿ, ಕುಮಾರ ಕನಕಮ್ಮನವರ, ಪಕ್ಕಿರಶೆಟ್ಟಿ ಯಲಗಚ್ಚಿನ, ಶಿವಯೋಗಿ ಬೆಳಗಾವಿ, ಸ್ನೇಹದೀಪ ಅಂಧರ ಸಂಸ್ಥೆಯ ಸಿಬ್ಬಂಧಿಯವರು ಹಾಗೂ ಮಕ್ಕಳು ಸೇರಿದಂತೆ ಅನೇಕರು ಇದ್ದರು.