ನವೋದಯ ಶಾಲೆಗೆ ಸೃಜನ ರೋಡಗಿ ಆಯ್ಕೆ

Srujan Rodagi selected for Navodaya School

ನವೋದಯ ಶಾಲೆಗೆ ಸೃಜನ ರೋಡಗಿ ಆಯ್ಕೆ

ದೇವರ ಹಿಪ್ಪರಗಿ 25: ತಾಲೂಕಿನ ಹರನಾಳ ಗ್ರಾಮದ ಹೇಮರೆಡ್ಡಿ ವಸ್ತಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸೃಜನ ಶ್ರೀಶೈಲ ರೋಡಗಿಯು ಆರನೇ ತರಗತಿಯ ಜವಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಆಲಮಟ್ಟಿಯ ಜವಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆ ಆಗಿರುತ್ತಾನೆ.ವಿದ್ಯಾರ್ಥಿಯ ಅಮೋಘ ಸಾಧನೆಗೆ ಶಾಲೆಯ ಮುಖ್ಯಗುರುಗಳು,ಸಹಶಿಕ್ಷಕರು,ತಂದೆ ಹಾಗೂ ಮುಳಸಾವಳಗಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ಮ ರೋಡಗಿ,ತಾಯಿ ಹಾಗೂ ಶಿಕ್ಷಕಿ ಶೋಭಾ   ರೋಡಗಿ ಸೇರಿದಂತೆ,ಶಿಕ್ಷಕರು, ಗ್ರಾಮಸ್ಥರು ಹಾಗೂ ಅನೇಕರು ಸಂತಸವನ್ನು ವ್ಯಕ್ತಪಡಿಸಿರುತ್ತಾರೆ