ನಾರಾಯಣ ರಾವ್ ದಂಪತಿಗಳಿಗೆ ಕತಾರ್ ನಿಂದ ಬೀಳ್ಕೊಡುಗೆ

Farewell from Qatar to Narayana Rao couple

ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) ವತಿಯಿಂದ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ)ದಲ್ಲಿ, ಸುಮಾರು 28 ವರ್ಷಗಳ ವಾಸದ ನಂತರ ಭಾರತದಲ್ಲಿ ನೆಲೆಸಲು ಕತಾರಿ​‍್ನಂದ ನಿರ್ಗಮಿಸುತ್ತಿರುವ ನಾರಾಯಣ ರಾವ್ ಮತ್ತು ಶೋಭಾ ರಾವ್ ದಂಪತಿಗಳಿಗೆ ಭಾವನಾತ್ಮಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. 

ಕತಾರ್ ವಿದ್ಯುತ್ ಮತ್ತು ನೀರು ಕಂಪನಿಯಲ್ಲಿ  (Qatar Electricity & Water Co.) ಕಾರ್ಯನಿರ್ವಹಿಸುತ್ತಿದ್ದ ನಾರಾಯಣ ರಾವ್, ಲೆಕ್ಕಪರಿಶೋಧನೆ ಮತ್ತು ಹಣಕಾಸು ಮಂಡನೆಗಳ ತಯಾರಿಕೆಯಲ್ಲಿ ತಮ್ಮ ಪರಿಣತಿಯನ್ನು ಬಳಸಿಕೊಂಡು, ಐಸಿಸಿ ಮತ್ತು ಭಾರತೀಯ ರಾಯಭಾರಿ ಕಚೇರಿಯ ಅಧೀನದಲ್ಲಿರುವ ಕೆಎಸ್‌ಕ್ಯೂ ಮತ್ತು ಇತರ ಅನೇಕ ಸಂಘಗಳಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ.ಸಮಾರಂಭವು ಪ್ರಧಾನ ಕಾರ್ಯದರ್ಶಿ ಕುಮಾರ್ ಸ್ವಾಮಿ ಅವರ ಆರಂಭಿಕ ನುಡಿಗಳೊಂದಿಗೆ  ಪ್ರಾರಂಭವಾಯಿತು, ನಂತರ ಪರಿಸರ ಮತ್ತು ಲಾಜಿಸ್ಟಿಕ್ಸ್‌ ಕಾರ್ಯದರ್ಶಿ ಶಶಿದರ ಎಚ್‌ಬಿ ಅವರು ಕಾರ್ಯಕ್ರಮವನ್ನು ಮುನ್ನಡೆಸಿದರು. ಸಾಂಕೇತಿಕವಾಗಿ ದೀಪವನ್ನು ಬೆಳಗಿಸುವ ವಿಧ್ಯುಕ್ತ ಸಮಾರಂಭದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಭಾವಪೂರ್ಣ ನಮನಗಳು ಮತ್ತು ಸನ್ಮಾನಕೆಎಸ್‌ಕ್ಯೂ ಅಧ್ಯಕ್ಷ ರವಿ ಶೆಟ್ಟಿ ಅವರು ಕೆಎಸ್‌ಕ್ಯೂ ಮತ್ತು ಇತರ ಸಂಸ್ಥೆಗಳ ಪರವಾಗಿ ನಾರಾಯಣ ರಾವ್ ಅವರ ಸಮರ​‍್ಿತ ಸೇವೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಮಾಜಿ ಅಧ್ಯಕ್ಷ ಮಧು ಎಚ್‌ಕೆ ಅವರು ಸಾಮಾಜಿಕ, ಆಧ್ಯಾತ್ಮಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಶ್ರೀ ರಾವ್ ಅವರ ಕೊಡುಗೆಗಳನ್ನು ಹಾಗು ಶೋಭಾ ರಾವ್ ಅವರ ಬೆಂಬಲ ಮತ್ತು ಅವರ ಮಕ್ಕಳ ಶೈಕ್ಷಣಿಕ ಉತ್ಕೃಷ್ಟತೆಯನ್ನು ಶ್ಲಾಘಿಸಿದರು.  

ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಸಲಹೆಗಾರರು ನಾರಾಯಣ ರಾವ್ ಮತ್ತು ಶೋಭಾ ರಾವ್ ಅವರನ್ನು ಕೃತಜ್ಞತಾ ಸಂಕೇತದ ವಿದಾಯ ಸ್ಮರಣಿಕೆಯೊಂದಿಗೆ ಸನ್ಮಾನಿಸಿದರು. ತಮ್ಮ ಭಾಷಣದಲ್ಲಿ, ನಾರಾಯಣ ರಾವ್ ಅವರು ಕರ್ನಾಟಕ ಸಂಘ ಕತಾರ್‌ಗೆ ತಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಿದರು ಮತ್ತು ಶಾಂತಿಯುತ ಮತ್ತು ತೃಪ್ತಿಕರ ಜೀವನವನ್ನು ನಡೆಸುವ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು. ಶೋಭಾ ರಾವ್ ಅವರು ಕೆಎಸ್‌ಕ್ಯೂ ಮತ್ತು ಹಿತೈಷಿಗಳೊಂದಿಗಿನ ತಮ್ಮ ಫಲಪ್ರದ ಒಡನಾಟವನ್ನು ನೆನಪಿಸಿಕೊಂಡರು. 

ಸಲಹೆಗಾರರಾದ ಅರುಣ್ ಕುಮಾರ್, ವಿ ಎಸ್ ಮನ್ನಂಗಿ ಮತ್ತು ಸುಬ್ರಹ್ಮಣ್ಯ ಹೆಬ್ಬಾಗಿಲು, ಭಾರತೀಯ ಕ್ರೀಡಾ ಕೇಂದ್ರದ ಸಲಹಾ ಸಮಿತಿಯ ಸದಸ್ಯರು ತಮ್ಮ ಮೆಚ್ಚುಗೆಯ ಮಾತುಗಳಲ್ಲಿ ನಾರಾಯಣ ರಾವ್ ಅವರ ನಿರ್ಗಮನವು ಕತಾರ್‌ನಲ್ಲಿನ ಸಮುದಾಯಕ್ಕೆ ದೊಡ್ಡ ನಷ್ಟವೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.ಕಾರ್ಯಕ್ರಮದ ಮುಖ್ಯಾಂಶಗಳು? ದೀಪ ಬೆಳಗಿಸುವ ಸಮಾರಂಭ, ಸನ್ಮಾನ ಮತ್ತು ಸ್ಮರಣಿಕೆ ಪ್ರಸ್ತುತಿ, ನಾರಾಯಣ ರಾವ್ ಮತ್ತು ಶೋಭಾ ರಾವ್ ಅವರಿಂದ ಪ್ರೇರಣಾದಾಯಕ ಭಾಷಣ ಸಲಹೆಗಾರರು ಮತ್ತು ಕೆಎಸ್‌ಕ್ಯೂ ನಾಯಕರಿಂದ ಕೃತಜ್ಞತೆಯ ಸಂದೇಶಗಳು. 

 ಈ ಸಂದರ್ಭದಲ್ಲಿ ಸಂದೀಪ್ ರೆಡ್ಡಿ (ಐಸಿಸಿ ಐಟಿ ಮತ್ತು ಮಾಧ್ಯಮದ ಮುಖ್ಯಸ್ಥರು) ಮತ್ತು ಕರ್ನಾಟಕ ಸಂಘ ಕತಾರ್‌ನ ಅನೇಕ ಗೌರವಾನ್ವಿತ ಹಿತೈಷಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ರಮೇಶ ಕೆಎಸ್ ಅವರ ವಂದನಾರೆ​‍್ಣಯ ಜೊತೆಗೆ ಲಘು ಉಪಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.