ಗ್ಯಾಸ್ ಸಿಲಿಂಡರ್ ಸ್ಪೋಟ: ಪ್ರಾಣಹಾನಿ ವರದಿಯಾಗಿಲ್ಲ

Gas cylinder explosion: No casualties reported

ಜಮಖಂಡಿ 25: ಬನಹಟ್ಟಿ ಪೋಲಿಸ್ ವಸತಿ ಗೃಹದಲ್ಲಿ ಅಡುಗೆ ಮನೆಯೊಂದರಲ್ಲಿ ಬೆಳಗಿನ ಜಾವದಲ್ಲಿ ಗ್ಯಾಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ಜರುಗಿದೆ. 

ಪಕ್ಕದಲ್ಲಿ ಪೋಲಿಸ್ ಠಾಣಿಯು ಇದ್ದು. ಪೋಲಿಸರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಎರಡನೇ ಮಹಡಿಯಲ್ಲಿ ವಾಸವಾಗಿದ ಪೋಲಿಸ್ ಕುಟುಂಬ ಮುಖ್ಯ ಪೇದೆ ಎಸ್,ಆರ್,ದಳವಾಯಿ ಮನೆಯಲ್ಲಿ ಬಿಸಿ ನೀರು ಕಾಯಿಸಲು ಸಣ್ಣ ಒಲೆಯನ್ನು ಉರಿಸುವ ಸಮಯದಲ್ಲಿ ಕೊಂಚ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ನಂದಿಸುವ ಸಮಯದಲ್ಲಿ ಪೋಲಿಸ್ ಪೇದೆಗೆ ಬೆಂಕಿ ತಾಕಿದ್ದು. ಅದನ್ನು ಕಂಡು ದೂರ ಸರಿದ ಕೆಲವೇ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಉರಿಹೊತ್ತಿಕೊಂಡಿದೆ.  

ಬೆಂಕಿಯ ಕೆನ್ನಾಲಿಗೆಗೆ  ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ. ಬೆಂಕಿಯನ್ನು ನಂದಿಸಿದ್ದಾರೆ. ಪೋಲಿಸ್ ವಸತಿ ಗೃಹದಲ್ಲಿ ಒಟ್ಟು 12 ಕುಟುಂಬಗಳು ವಾಸವಾಗಿದ್ದು. ಸ್ಪೋಟಗೊಂಡ ಶಬ್ದಕ್ಕೆ ಅಲ್ಲಿರುವ ಜನ ಭಯಭೀತಗೊಂಡಿರುವ ಘಟನೆ ನಡೆದಿದೆ.