ಲಂಚ: ಅಧೀಕ್ಷಕರು ಲೋಕಾಯುಕ್ತ ಪೊಲೀಸ್ ಬಲೆಗೆ

Bribery: Superintendent caught in Lokayukta police trap

ಲಂಚ: ಅಧೀಕ್ಷಕರು ಲೋಕಾಯುಕ್ತ ಪೊಲೀಸ್ ಬಲೆಗೆ 

ಬೆಳಗಾವಿ 25: ಸಂಘದ ನೊಂದಣಿಗಾಗಿ ರೂ.50,000 ಗಳ ಲಂಚಕ್ಕೆ ಬೇಡಿಕೆ ಇಟ್ಟು ಬೆಳಗಾವಿಯ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಅಧೀಕ್ಷಕರು ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಸಂಕೇಶ್ವರ ಪಟ್ಟಣದ ನಿವಾಸಿ ಪ್ರಶಾಂತ ಆತ್ಮರಾಮ ಕೆಳಗಡೆ, ಇವರು ತಮ್ಮ ಯುನೈಟೆಡ್ ಸೊಶಿಯಲ್ ್ಘ ಸ್ಪೋರ್ಟ್ಸ ಕ್ಲಬ್ ಹೆಸರಿನ ಸಂಘವನ್ನು ನಿಯಮಗಳ ಪ್ರಕಾರ ಸಹಕಾರ ಸಂಘಗಳ, ಉಪನಿಬಂಧಕರ ಕಛೇರಿ, ಬೆಳಗಾವಿಯಲ್ಲಿ ನೊಂದಣಿಗಾಗಿ ಅರ್ಜಿ ಸಲ್ಲಿಸಿದ್ದರು.  ಈ ವೇಳೆ ಸದರಿ ಕಛೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಭರತೇಶ ಶೇಬನ್ನವರ ಅವರು ಸಂಘದ ನೊಂದಣಿಗಾಗಿ ಮೇಲಾಧಿಕಾರಿಗಳ ಹೆಸರಿನಲ್ಲಿ ರೂ.50,000 ಗಳ ಲಂಚಕ್ಕೆ ಬೇಡಿಯನ್ನು ಇಟ್ಟು ಸುಮಾರು 20 ದಿನಗಳಿಂದ ಪ್ರಶಾಂತ ರವರ ಕೆಲಸವನ್ನು ಮಾಡಿ ಕೊಡದೇ ಇದ್ದಾಗ ಅವರು ಅಧಿಕಾರಿಯ ವಿರುದ್ಧ ಲಂಚದ ಬೇಡಿಯ ಸಂಬಂಧಪಟ್ಟಂತೆ ದಿ. 24ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ದೂರಿನ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಪೊಲೀಸ್ ಇನ್ಸಪೆಕ್ಟರ್‌ರ ನಿರಂಜನ ಪಾಟೀಲ ಅವರು  ಲಂಚ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ಅಧೀಕ್ಷಕ ಹನುಮಂತರಾಯ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿಎಸ್‌ಪಿ ಬಿ. ಎಸ್‌. ಪಾಟೀಲ, ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ಗಳಾದ ನಿರಂಜನ ಪಾಟೀಲ, ರವಿಕುಮಾರ ಧರ್ಮಟ್ಟಿ, ಸಿಬ್ಬಂದಿಗಳಾದ ರವಿ ಮಾವರಕರ ಸಿಎಚ್‌ಸಿ, ರಾಜು ಪಾಟೀಲ ಸಿಎಚ್‌ಸಿ, ಮಂಜುನಾಥ ಕಾನಪೇಠ ಸಿಎಚ್‌ಸಿ, ಗೀರೀಶ ಪಾಟೀಲ ಸಿಪಿಸಿ ಮತ್ತು ಅಭಿಜಿತ ಜಮಖಂಡಿ ಸಿಪಿಸಿ ಮೊದಲಾದ ತಂಡದವರು ದಾಳಿ ಮಾಡಿ ಆಪಾದಿತ ಅಧಿಕಾರಿಯನ್ನು ಲಂಚ ಪಡೆಯುವ ವೇಳೆ ಲಂಚದ ಸಮೇತ ಬಂಧಿಸಿದ್ದಾರೆ.