ಲೈಸೆನ್ಸ್‌ ಪಡಿಯದ ಖಾಸಗಿ ಆಸ್ಪತ್ರೆ ಮುಚ್ಚಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು

Health Department officials close unlicensed private hospital

ಮುಂಡಗೋಡ 22: ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷಮೆಂಟ ಕೆಪಿಎಂಇ  ಲೈಸೆನ್ಸ್‌ ಪಡಿಯದೇ  ನಡಿಸುತ್ತಿದ್ದ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಖಾಸಗಿ ಆಸ್ಪತ್ರೆಗಳನ್ನು ಬೀಗ್ ಹಾಕಿಸಿದ ಘಟನೆ ಗುರುವಾರ ನಡೆದಿದೆ.    

ಇಲ್ಲಿಯ ಹುಬ್ಬಳ್ಳಿ ರಸ್ತೆಯಲ್ಲಿ ಇರುವ ಕಿರಣ್  ಮಕ್ಕಳ ಚಿಕಿತ್ಸಾಲಯಗೆ  ಭೇಟಿ ನೀಡಿ ವೈದ್ಯಾಧಿಕಾರಿಗಳು ದಾಖಲೆ ಪರೀಶೀಲಿಸಿದಾಗ  ಲೈಸೆನ್ಸ್‌ ಪಡೆಯದೇ ಇರುವುದು ಕಂಡು ಬಂತು.  ಕ್ಲಿನಿಕ್ ನಲ್ಲಿಯೇ ವೈದ್ಯರಿಗೆ ಸ್ಥಳದಲ್ಲಿಯೇ ನೋಟಿಸ್ ನೀಡಿ, ಸೂಕ್ತ ಹಾಗೂ ಅಗತ್ಯ ದಾಖಲೆಗಳನ್ನು ಪಡೆದ ನಂತರವೇ ಕ್ಲಿನಿಕ್ ಅರಂಭಿಸಬೇಕು. ಅಲ್ಲಿವರಿಗೆ ಬಿಗ್ ಹಾಕುವಂತೆ ಸೂಚಿಸಿದ್ದರು ನಂತರ ಪಾಂಡುರಂಗ ಲಾಡ್ಜ್‌ ಬಳಿ ಇರುವ ಮತ್ತೊಂದು ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ಮಾಡುವ ಮುನ್ನವೇ ಕ್ಲಿನಿಕಗೆ ಬೀಗ ಹಾಕಲಾಗಿತ್ತು. ಹಾಗೂ ಮೂರು ನಾಲ್ಕು ಖಾಸಗಿ ಆಸ್ಪತ್ರೆಗೆ ಬೀಗ್ ಹಾಕಿಸಿದ್ದರು. 

ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್, ಅವರು ಪತ್ರಕರ್ತರೊಂದಿಗೆ ಮಾತನಾಡುತ್ತ ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗದೇ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯಅಧಿಕಾರಿಗಳು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದೆ ರೀತಿ ಪಟ್ಟಣದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಕೆಪಿಎಂಇ ನೋಂದಣಿ ಇಲ್ಲದೇ ಸಾಕಷ್ಟು ಕ್ಲಿನಿಕ್ ಗಳಿರುವ ಬಗ್ಗೆ ಮಾಹಿತಿ ಇದ್ದು, ಅವುಗಳ ಮೇಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಈ ವೇಳೆಗೆ ಅಶ್ವಿನಿ ಬೋರ್ಕರ್ (ಪ್ರಭಾರ) ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಸಂಜೀವ ಗಲಗಲಿ ಆಯುಷ ವೈದ್ಯಾಧಿಕಾರಿಗಳು. ಡಾ. ಸ್ವರೂಪರಾಣಿ ಪಾಟೀಲ್ ತಾಲೂಕ ಆಸ್ಪತ್ರೆ ವೈದ್ಯಾಧಿಕಾರಿಗಳು, ಭರತ್ ಡಿಟಿ ವೈದ್ಯರು. ಹಾಗೂ ಮುಂಡಗೋಡ ಪೊಲೀಸರು ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು.