24000 ಸಾವಿರ ರೂ. ಬೆಲೆಯ ಸೌಂಡ ಸಿಸ್ಟಿಮ್ ಶಾಲೆಗೆ ದೇಣಿಗೆ

ಯರಗಟ್ಟಿ 03: ಸಮೀಪದ ಕುರಬಗಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಗೆ ಯಲ್ಲಪ್ಪ ಕೆಂಚಪ್ಪ ಗಸ್ತಿ ಅವರು ಬುಧವಾರ ದಿ.3 ರಂದು 24000 ಸಾವಿರ ರೂ. ಮೌಲ್ಯದ ಸೌಂಡ ಸಿಸ್ಟಿಮ್ ಅನ್ನು ಶಾಲೆಗೆ ದೇಣಿಗೆ ನೀಡಿದ್ದಾರೆ.      

ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವರ್ಗ ಎಸ್ ಡಿ ಎಮ್ ಸಿ ಅಧ್ಯಕ್ಷ ಮುತ್ತೆಪ್ಪ ಸನ್ನಿಂಗನವರ, ಎಮ್ ಎಮ್ ಮಲಕನ್ನವರ, ಪ್ರದಾನ ಗುರು ಎಸ್ ವ್ಹಿ ಸೊನ್ನದ, ಎಸ್ ಎಪ್ ಮುದಗುರಿ, ಆನಂದ ಹಿರೇಬೆಳ, ಎಸ್ ಎಮ್ ರಜಪೂತ, ಎನ್ ಎಮ್ ನಧಾಪ್, ಪಿ ಎನ್ ನಂದಿ, ತುಕಾರಾಂ ಪೂಜೆರ, ಶಿವಾನಂದ ಗತ್ತನಟ್ಟಿ, ಹಣಮಂತ ಪೂಜೆರ ಇದ್ದರು.