ವೀರಶೈವ ಸಂಘಟನೆ ಬಲಪಡಿಸುವ ಅಗತ್ಯ: ಡಾ.ಬಿದರಿ

Need to strengthen Veerashaiva organization: Dr. Bidari

ವೀರಶೈವ ಸಂಘಟನೆ ಬಲಪಡಿಸುವ ಅಗತ್ಯ: ಡಾ.ಬಿದರಿ   

ತಾಳಿಕೋಟಿ 23 : ವೀರಶೈವ ಸಮಾಜ ಬಂಧುಗಳ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯು ಕೆಲಸ ಮಾಡುತ್ತಿದೆ ಇದನ್ನು ಇನ್ನಷ್ಟು ಸದೃಢ ಗೊಳಿಸಲು ಸಂಘಟನೆಯನ್ನು ಬಲಪಡಿಸುವ ಅಗತ್ಯ ಇದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯಾಧ್ಯಕ್ಷ ಡಾ. ಶಂಕರ ಬಿದರಿ ಹೇಳಿದರು. ಭಾನುವಾರ ಪಟ್ಟಣದ ಅಡತ್ ಮರ್ಚೆಂಟ್ ಅಸೋಸಿಯೇಷನ್ ಸಭಾ ಭವನದಲ್ಲಿ ವೀರಶೈವ ಲಿಂಗಾಯತ ಮಹಾಸಭೆ ತಾಳಿಕೋಟಿ ಘಟಕ ರಚನೆಗಾಗಿ ಹಮ್ಮಿಕೊಂಡ ಸಮಾಜ ಬಾಂಧವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶ ಹಾಗೂ ರಾಜ್ಯದಲ್ಲಿರುವ ಸಣ್ಣ ಸಣ್ಣ ಸಮಾಜಗಳು ಸಂಘಟಿತರಾಗಿ ಹೋರಾಡಿ ತಮ್ಮ ಹಕ್ಕುಗಳನ್ನು ಸರ್ಕಾರದ ಮಟ್ಟದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಆದರೆ ದೊಡ್ಡ ಸಂಖ್ಯೆಯಲ್ಲಿರುವ ನಮ್ಮ ಸಮಾಜವು ಬಹಳಷ್ಟು ಹಿಂದೆ ಉಳಿದಿದೆ ಇದಕ್ಕೆ ಕಾರಣ ನಮ್ಮ ಸಂಘಟನೆ ಕೊರತೆ ಆದ್ದರಿಂದ ಇಡೀ ರಾಜ್ಯದಲ್ಲಿ ಹಾಗೂ ವಿಶೇಷವಾಗಿ ಇತ್ತೀಚಿಗೆ ನೂತನವಾಗಿ ರಚನೆಗೊಂಡ ತಾಲೂಕುಗಳಲ್ಲಿ ಸಂಘಟನೆಯ ಘಟಕಗಳನ್ನು ಸ್ಥಾಪಿಸಲು ನಿರ್ಣಯ ತೆಗೆದುಕೊಂಡಿದ್ದು ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಏಪ್ರಿಲ್ ಅಂತ್ಯದೊಳಗೆ ತಾಳಿಕೋಟಿ ಘಟಕದ ರಚನೆಯನ್ನು ಮಾಡಿ ಇದಕ್ಕೆ ನಮ್ಮ ಜಿಲ್ಲಾಧ್ಯಕ್ಷರು ನಿಮಗೆ ಮಾರ್ಗದರ್ಶನ ಮಾಡುತ್ತಾರೆ ಎಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಪ್ರಸ್ತಾವಿಕವಾಗಿ ಮಾತನಾಡಿ ಮಹಾಸಭಾದ ಸ್ಥಾಪನೆ ಉದ್ದೇಶ ಕಾರ್ಯವಿಧಾನ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಡಾ.ಶಂಕರ ಬಿದರಿ ಇವರನ್ನು ಹಲವಾರು ಸಂಘ ಸಂಸ್ಥೆಗಳ ಮುಖ್ಯಸ್ಥರು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ವಿ.ವಿ.ಸಂಘದ ಅಧ್ಯಕ್ಷ ವೀರಪಾಕ್ಷಯ್ಯ ಹಿರೇಮಠ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಡಾ.ವಿ.ಎಸ್‌. ಕಾರ್ಚಿ ಎಂ.ಎಸ್‌. ಸರಶೆಟ್ಟಿ ಕಾಶಿನಾಥ ಮುರಾಳ ಎಚ್‌.ಎಸ್‌. ಪಾಟೀಲ ಕಾಶಿನಾಥ್ ಸಜ್ಜನ ಎಂ.ಕೆ. ಪಟ್ಟಣಶೆಟ್ಟಿ ಆರ್‌.ಎಲ್‌.ಕೊಪ್ಪದ ಪರಶುರಾಮ್ ತಂಗಡಗಿ ಮಹದೇವಪ್ಪ ಕುಂಬಾರ ಚಿಂತಪ್ಪ ಗೌಡ ಯಾಳಗಿ ರಾಮನಗೌಡ ಬಾಗೇವಾಡಿ ಬಿ.ಎಸ್‌. ಇಸಾಂಪೂರ ಡಿಕೆ ಪಾಟೀಲ ಮತ್ತಿತರರು ಇದ್ದರು.