ಇಫ್ತಿಹಾರ್ ಕೂಟದಲ್ಲಿ ಸಚಿವ ಎಂ.ಬಿ ಪಾಟೀಲ ಭಾಗಿ

Minister M.B. Patil attends Iftihar party

ವಿಜಯಪುರ 24: ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ರವಿವಾರ ಮುಸ್ಸಂಜೆ ನಗರದ ಕಿತ್ತೂರು ಚೆನ್ನಮ್ಮ ಮಾರುಕಟ್ಟೆಯಲ್ಲಿ ಪವಿತ್ರ ರಂಜಾನ್ ಮಾಸಾಚರಣೆ ಅಂಗವಾಗಿ ಭಾರತ  ರೆಡಿಮೇಡ್ ಅಸೋಸಿಯೇಶನ ಗ್ರುಪ್ ಆಯೋಜಿಸಿದ್ದ ಇಫ್ತಿಹಾರ್ ಕೂಟದಲ್ಲಿ ಪಾಲ್ಗೋಂಡು ಶುಭ ಕೋರಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಪಿಂ ಬಾಂಧವರು ಶ್ರದ್ಧೆ ಮತ್ತು ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಮಾಡುತ್ತ, ಉಪವಾಸ ಕೈಗೊಳ್ಳುತ್ತಾರೆ.  ಈ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ದಾನ ಮಾಡುವ ಮೂಲಕ ಮನಸ್ಸು ಮತ್ತು ದೇಹ ಪರಿಶುದ್ಧ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

ಉಪವಾಸ ಕೈಗೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರಗಳಲ್ಲಿ ಉಪವಾಸದಿಂದ ಉತ್ತಮ ಆರೋಗ್ಯ ಸಾಧ್ಯ ಎಂಬುದು ಸಾಬೀತಾಗಿದೆ. ಈ ತಿಂಗಳಲ್ಲಿ ದಾನ ಮಾಡುವುದು ಪವಿತ್ರ ಕಾರ್ಯವಾಗಿದೆ.  ಸರಕಾರದ ಭಾಗವಾಗಿ ಈ ಕೂಟದಲ್ಲಿ ಭಾಗವಹಿಸಿದ್ದೇನೆ.  ಎಲ್ಲರ ಪ್ರಾರ್ಥನೆ ಸೇವೆ ಅಲ್ಲಾಹನಿಗೆ ತಲುಪಲಿ ಎಂದು ಸಚಿವರು ಶುಭ ಕೋರಿದರು.  

ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಅಬ್ಬುಲ್ ಹಮೀದ್ ಮುಶ್ರಿಫ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರಿಫ್, ಶಕೀಲ ಬಾಗಮಾರೆ, ಮುಖಂಡರಾದ ಜಮೀರ್ ಭಕ್ಷಿ, ಚಾಂದಸಾಬ್ ಗಡಗಲಾವ, ಮುಬಿನ್ ಶೇಖ, ಇಕಲಾಸ್ ಸುನ್ನೆವಾಲೆ, ಶಬ್ಬಿರ ಜಾಗೀರದಾರ, ಮುನ್ನಾ ಬಾಂಗಿ ಪೀರಾ ಪೀರಜಾದೆ, ಡಾ. ಗಂಗಾಧರ ಸಂಬಣ್ಣಿ, ಅಪ್ಪು ಪುಜಾರಿ, ವೈಜನಾಥ ಕಪೂರಮಠ, ದಿನೇಶ ಹಳ್ಳಿ, ವಿಜಯಕುಮಾರ ಘಾಟಗೆ, ಶರಣಪ್ಪಾ ಯಕ್ಕುಂಡಿ, ಮುಂತಾದವರು ಉಪಸ್ಥಿತರಿದ್ದರು.