ಶ್ರೀ ಗುರುದೇವ ರಾನಡೆ ನೂತನ ಸಾಂಸ್ಕೃತಿಕ ಭವನ ಲೋಕಾರ್ಪಣೆ

ಜಮಖಂಡಿ 03: ಗುರುದೇವ ರಾನಡೆ ಅವರು ಹಿಂದಿ, ಮಾರಾಠಿ ಭಾಷೆಯಲ್ಲಿ ಆಧ್ಯಾತ್ಮ ತೋರಿಸಿಕೊಟ್ಟವರು ಮಹಾನ ವ್ಯಕ್ತಿಯಾಗಿದ್ದರು. ಅವರ ಸಾಂಸ್ಕೃತಿಕ ಭವನ ಕೆಲವು ವರ್ಷಗಳ ಹಿಂದೆಯೇ ನಿರ್ಮಾಣವಾಗಬೇಕಿತ್ತು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. 

ನಗರದ ಬಾಲಕರ ಸರಕಾರಿ ಪಿ.ಬಿ.ಫ್ರೌಡ ಶಾಲೆ ಆವರಣದಲ್ಲಿ ನಡೆದ ಶ್ರೀ ಗುರುದೇವ ರಾನಡೆ ಅವರ ನೂತನ ಸಾಂಸ್ಕೃತಿಕ ಭವನ ಲೋಕಾರೆ​‍್ಣ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣವಾಗಬೇಕಿತು. ಆದರೆ ಕೆಲವು ಕಾರಣಾಂತರಗಳಿಂದ ತಡವಾಗಿದ್ದರು. ಸಹ ಇಂದು ಬೃಹತ್ ಆಕಾರದ ಗುರುದೇವ ರಾನಡೆ ಅವರ ಸಾಂಸ್ಕೃತಿಕ ಭವನ 1,70 ಲಕ್ಷ ರೂ. ಸರಕಾರ ಅನುದಾನದಲ್ಲಿ ಇಂತಹ ಭವನ ನಿರ್ಮಾಣ ಮಾಡಲಾಗಿದೆ ಎಂದರು. 

ಜಾತ್ಯಾತೀತ, ಧಾರ್ಮಿಕ ಸಾಂಸ್ಕೃತಿಕ ಭನವದ ಅವಶ್ಯಕತೆ ಇತ್ತು. ಇದರ ನಿರ್ವಾಹಣೆಯನ್ನು ಎಸ್‌.ಡಿ.ಎಮ್‌.ಸಿ ಅವರು ಹಾಗೂ ಶಿಕ್ಷಣ ಇಲಾಖೆಯವರು ಮಾಡಬೇಕು. ಇ ಭವನದಲ್ಲಿ ನಡೆಯುವ ಕಾರ್ಯಕ್ರಮಗಳು ಮೈಕ್‌ದಿಂದ ಏಕೋ ಆಗುತ್ತಿದೆ. ಬರುವ ದಿನಗಳಲ್ಲಿ ಏಕೋ ಆಗದ ಹಾಗೆ ಮಾಡಬೇಕಾಗಿದೆ. ಸರಿಸುಮಾರು 10 ವರ್ಷಗಳ ಕಾಲ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರ ನಿರಂತರ ಪ್ರಯತ್ನದಿಂದ ಬಹುದಿನಗಳ ಕನಸು. ನನಸು ಮಾಡಲಾಗಿದೆ. ಶಿಕ್ಷಣ ಇಲಾಖೆಯು ಈ ಭವನವನ್ನು ಸರಿಯಾದ ರೀತಿ ನಿರ್ವಹಣೆ ಮಾಡುವ ಜೊತೆಗೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. 

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಬಹು ವರ್ಷದ ಬೇಡಿಕೆ ಗುರುದೇವ ರಾನಡೆ ಸಾಂಸ್ಕೃತಿಕ ಭವನದ ಬೇಡಿಕೆಯಾಗಿತ್ತು. ಸರಕಾರದ ಅನುದಾನದಿಂದ ಹಾಗೂ ಕೆಲವು ಕಾರಣಾಂತರದಿಂದ ತಡವಾಗಿ ಕಟ್ಟಡ ಪ್ರಾರಂಭವಾಯಿತು. ಈ ಹಿಂದೆ ಸಿದ್ದೇಶ್ವರ ಶ್ರೀಗಳು ಇಲ್ಲಿಗೆ ಬಂದ ಸಮಯದಲ್ಲಿ ಅವರು ಗುರುದೇವ ರಾನಡೆ ಅವರ ಬಗ್ಗೆ ಮಾತನಾಡುವಾಗ ಹೃದಯ ಸಮಾಧಾನವಾಗಿತು. ಗುರುದೇವ ರಾನಡೆ ಅವರು ಆಧ್ಯಾತ್ಮಿಕ ಚಿಂತಕರಾಗಿದರು. ಅವರ ಬಗ್ಗೆ ಕೈ ಮೇಲೆ ಮಾಡಿ ಮಾತನಾಡಿದು ಇವಾಗ ನನೆಪಾಗುತ್ತದೆ. ಗುರುದೇವ ರಾನಡೆ ಅವರು ಇದೇ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲಿಸದವರಾಗಿದರು. ಸಿ,ಟಿ,ರವಿ ಅವರು  51 ಲಕ್ಷ ರೂ.ಅನುದಾನವನ್ನು ಸರಕಾರದಿಂದ ಮಂಜೂರಾತಿ ಮಾಡಿದರು. ಸಂಸದರಾದ ಪಿ,ಸಿ,ಗದ್ದಿಗೌಡರು ಅವರ ಅನುದಾನದಲ್ಲಿ 10 ಲಕ್ಷ ರೂ, ನೀಡಿದರು. ಶಾಸಕ ಜಗದೀಶ ಗುಡಗುಂಟಿ ಅವರು ಸಹ ಹಣವನ್ನು ನೀಡಿ.ಕೆಲವದಿಂಷ್ಟು ಜನರು ಸಹಾಯ ಸಹಕಾರ ನೀಡಿದಕ್ಕೆ ಇಂದು ಬೃಹತ್ ಆಕಾರದ ಗುರುದೇವ ರಾನಡೆ ಅವರ ಸಾಂಸ್ಕೃತಿಕ ಭವನ ನಿರ್ಮಾಣವಾಗಿದೆ. ಶಿಕ್ಷಣ ಇಲಾಖೆ ಆಸ್ತಿಯಲ್ಲಿ ಇಂತಹ ಭವನ ನಿರ್ಮಾಣ ಮಾಡುತ್ತಿದಂತೆ ಸಾಕಷ್ಟು ಜನರು ಏನ್ನೇನು ಮಾತನಾಡುತ್ತಿದರು. ಅದನ್ನು ತಲೆ ಕೆಡಿಸಿಕೊಳ್ಳದೆ ಇಂತಹ ಭವನ ನಿರ್ಮಾಣ ಮಾಡಲಾಗಿದೆ ಎಂದರು. 

ಬೆಳಗಾವಿ ತತ್ವಶಾಸ್ತ್ರಜ್ಞರಾದ ಡಾ, ವೀರೇಶ್ವರ ಸ್ವಾಮಿಜೀ ಮಾತನಾಡಿ, ಗುರುದೇವ ರಾನಡೆ ಅವರ ಆದರ್ಶ ಮಾರ್ಗಗಳು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಅವರು ತಮ್ಮ ಜೀವನದಲ್ಲಿ ಶಿಕ್ಷಣವನ್ನು ಜಮಖಂಡಿಯಲ್ಲಿ ಮುಗಿಸಿ ಪದವಿಯನ್ನು ಮಹಾರಾಷ್ಟ್ರದಲ್ಲಿ ಮುಗಿಸಿದರು. ತತ್ವಶಾಸ್ತ್ರದಲ್ಲಿ ಪಂಡಿತರಾಗಿದರು. ಪುಸ್ತಕಗಳು 30ಕ್ಕೂ ಅಧಿಕ ಬರೆದಿದ್ದಾರೆ. ಇವಾಗ ಸಾಕಷ್ಟು ಅವರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಎಲ್ಲ ಗ್ರಂಥಗಳನ್ನು ಕನ್ನಡ,ಹಿಂದಿ,ಮರಾಠಿ ಇಂಗ್ಲೀಷ್‌ನಲ್ಲಿ ಗ್ರಂಥಗಳನ್ನು ಬರೆದು. ಇಡೀ ಜಗತ್ತಿಗೆ ಪರಿಚಯವಾದರು. ರಾಧಾಕೃಷ್ಣ ಅವರು ಸಹ ಇವರ ಸಮಕಾಲಿನವರು ಆಗಿದರು. ನಮ್ಮ ಭಾಗದಲ್ಲಿ ಆಧ್ಯಾತ್ಮಿಕ ವಾಸನೆ ಬೀರುತ್ತಿದೆ ಎಂದರೆ ಅವರಿಂದ ಮಾತ್ರ. ಶಾಂತಿ, ಸಮಾಧಾನವಾಗಿ ಸಮಾಜವನ್ನು ಸುಧಾರಣೆ ಮಾಡಿದವರು ಗುರುದೇವ ರಾನಡೆ ಅವರು ಮಾಡಿದರು. ಎಲ್ಲ ವಿದ್ಯಾಭ್ಯಾಸ ಮಾಡಿದರು ಸಹ ಆಧ್ಯಾತ್ಮದ ರುಚಿ ಇರುವುದಿಲ್ಲ. ಆದರೆ ತತ್ವಶಾಸ್ತ್ರ ಆಧ್ಯಾತ್ಮಿಕ ಚಿಂತನೆಯಿಂದ ಮನಪರಿವರ್ತನೆ ಮಾಡಿದವರು ಯಾರಾದರು ಇದ್ದರೆ ಅವರು ರಾನಡೆ ಅವರು. ಅವರ ಆದರ್ಶ ಮಾರ್ಗದಲ್ಲಿ ಇಂದಿನ ಮಕ್ಕಳು ನಡೆದುಕೊಳ್ಳುವ ಜೊತೆಗೆ ಪುಸ್ತಕಗಳನ್ನು ಓದಬೇಕೆಂದು ಉಪನ್ಯಾಸ ನೀಡಿದರು. 

ವಿಶ್ರಾಂತ ಪ್ರಾಂಶುಪಾಲ ಜಿ,ಆರ್, ಕುಲಕರ್ಣಿ ಮಾತನಾಡಿ, ಗುರುದೇವ ರಾನಡೆ ಅವರು ಮೂಲತಃ ಜಮಖಂಡಿ ಅವರು ಅಲ್ಲ. 2ನೂರು ವರ್ಷದ ಹಿಂದೆ ಬಂದವರು. ಇತಿಹಾಸದಲ್ಲಿ ಮಾತ್ರ ರಾನಡೆ ಅವರ ಹೆಸರು ಮಾತ್ರ ಜಮಖಂಡಿ ಆಗಿದೆ. ಆಧ್ಯಾತ್ಮದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಇಂದಿನ ಮಕ್ಕಳು ಅವರ ಜೀವನ ಚರಿತ್ರೆ ಬಗ್ಗೆ ತಿಳಿದುಕೊಳ್ಳಬೇಕು.ಅವರು ಆಗಾಧವಾದ ದೈವಶಕ್ತಿಯನ್ನು ಹೊಂದಿದರು. ತತ್ವಜ್ಞಾನದ ಬಗ್ಗೆ ತಿಳಿಸಿಕೊಟ್ಟವರು. ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಆಧ್ಯಾತ್ಮ ಬಗ್ಗೆ ತಿಳಿಸಿಕೊಟ್ಟವರು.ಸಂಸ್ಕಾರವನ್ನು ಉಂಟು ಮಾಡುವ ಇಂತಹ ಸಾಂಸ್ಕೃತಿಕ ಭವನ ಆಗಬೇಕು. ಸತ್ಯದ ಶೋಧನೆ ಮಾಡಿ ಆಧ್ಯಾತ್ಮಿಕ ಚಿಂತಕರಾಗಿದರು ಎಂದರು. 

ಓಲೇಮಠದ ಡಾ.ಚನ್ನಬಸವ ಮಹಾಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.  

ಮಲ್ಲಿಕಾರ್ಜುನ ಪವಾರ ಗುರುದೇವ ರಾನಡೆ ಅವರ ಬಗ್ಗೆ ಬರೆದ ಪುಸ್ತಕ ಬಿಡುಗಡೆಗೊಳಿಸಲಾಯಿತು. ಚಿತ್ರಕಲಾ ಶಿಕ್ಷಕ ಹಲಗಲಿ ಅವರು ಗುರುದೇವ ರಾನಡೆ ಅವರ ಚಿತ್ರ ಬಿಡಿಸಿದಕ್ಕೆ ಅವರಿಗೆ ಸನ್ಮಾನಿಸಲಾಯಿತು. 

ಇದೇ ಸಂದರ್ಭದಲ್ಲಿ ಹಿಪ್ಪರಗಿ ಸದ್ಗುರು ಪ್ರಭುಜೀ ಮಾಹಾರಾಜರು,ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ, ತಹಶೀಲ್ದಾರ ಸದಾಶಿವ ಮಕ್ಕೋಜಿ, ಪಿ,ಬಿ,ಹೈಸ್ಕೂಲ್ ಉಪ ಪ್ರಾಚಾರ್ಯರ ಎನ್,ಎಮ್,ಚೌರ, ಕೆ,ಆರ್,ಆಯ್,ಡಿ,ಎಲ್, ಗುತ್ತಿಗೆದಾರ ವಿಜಯ ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ,ಕೆ,ಬಸನ್ನವರ ಸ್ವಾಗತಿಸಿದರು. ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಪುರುಷೋತ್ತಮ ಗಲಗಲಿ ವದಿಸಿದರು.