ಗಣೇಶ ದೃಶ್ಯಾವಳಿ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಉಚಿತ ಅಟೋ ಸೇವೆ

ಲೋಕದರ್ಶನ ವರದಿ

ಗದಗ 10: ಗದಗ ಬೆಟಗೇರಿ ಅವಳಿ ನಗರದಲ್ಲಿ ಗಣೇಶೋತ್ಸವದಂಗವಾಗಿ ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳು ಪ್ರತಿಷ್ಟಾಪಿಸಿರುವ ವಿವಿಧ ಭಂಗಿಯ ಗಣೇಶ ಮೂತರ್ಿಗಳು, ದೃಶ್ಯಾವಳಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಕ್ಷಿಸಲು   ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ನೀಡಿರುವ  ಉಚಿತ ಸಾರಿಗೆ ವ್ಯವಸ್ಥೆ ನಾಗರಿಕರ ಶ್ಲಾಘನೆಗೆ ಒಳಗಾಗಿದೆ.

ಗದಗ ಬೆಟಗೇರಿ ಅವಳಿ ನಗರದಲ್ಲಿ ಸುಮಾರು 121 ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಗಳನ್ನು ಪ್ರತಿಷ್ಟಾಪಿಸಲಾಗಿದೆ. ಈ ಗಣೇಶ ಮಂಡಳಿಗಳು ಗಣೇಶನ ಮಹಿಮೆ ಸಾರುವ,ಭಾರತೀಯ ಅಧ್ಯಾತ್ಮದ ಹಿನ್ನೆಲೆ, ಸನಾತನ ಹಿಂದೂ ಪರಂಪರೆ, ಹಿರಿಮೆ, ಗರಿಮೆಗಳನ್ನು ಸಾರುವ ದೃಶ್ಯಾವಳಿಗಳನ್ನು ರೂಪಿಸಲಾಗಿದೆ. ಈ ದೃಶ್ಯಾವಳಿಗಳನ್ನು  ವಿಕ್ಷಿಸಲು ಗದಗ ಬೆಟಗೇರಿ ಅವಳಿ ನಗರದ ಸುಮಾರು ಎರಡು ಸಾವಿರ ವಿದ್ಯಾಥರ್ಿಗಳು ವೀಕ್ಷಿಸಿದರು. 

ಅಟೋರಿಕ್ಷಾಗಳ ಉಚಿತ ಸೇವೆ: ಗದಗ ಬೆಟಗೇರಿ ಅವಳಿ ನಗರದಲ್ಲಿನ ವಿದ್ಯಾಥರ್ಿಗಳಿಗೆ ಗಣೇಶೋತ್ಸವದ ದೃಶ್ಯಾವಳಿಗಳನ್ನು ವೀಕ್ಷಿಸಲು ಅನುಕೂಲ ಕಲ್ಪಿಸಲು ಯಂಗ್ ಇಂಡಿಯಾ ಅಟೋ ಚಾಲಕರ ಘಟಕ, ಶ್ರೀರಾಮ ಸೇನೆಯ ಅಟೋರಿಕ್ಷಾ ಸೇನೆ, ಕಾನತೋಟದ ಅಶೋಕ ಚಕ್ರವತರ್ಿ ಅಟೋ ಚಾಲಕರ ಸಂಘ, ಕನರ್ಾಟಕ ರಕ್ಷಣಾ ವೇದಿಕೆಯ ಅಟೋ ಘಟಕಗಳು  ಮಹಾಮಂಡಳಿಯೊಂದಿಗೆ ಕೈ ಜೋಡಿಸಿವೆ. 

ಪ್ರತಿ ಶಾಲೆಗೆ ಐದು ಅಟೋರಿಕ್ಷಾ:  ಅವಳಿ ನಗರದಲ್ಲಿನ ಪ್ರತಿಯೊಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ  ಕಳೆದ ಎರಡು ದಿನಗಳಿಂದ ಪ್ರತಿನಿತ್ಯ ಸಂಜೆ  6 ಘಂಟೆಗೆ ತಲಾ ಐದು ಅಟೋರಿಕ್ಷಾಗಳನ್ನು ಕಳಿಸಲಾಗಿತ್ತು.  ಈ ಅಟೋಗಳಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆದುಕೊಂಡು ಗಣೇಶೋತ್ಸವ ಮಂಡಳಿಯ ದೃಷ್ಯಾವಳಿಗಳನ್ನು ವಿಕ್ಷಿಸಿ ವಾಪಸ್ಸು ಕರೆ ತಂದಿದ್ದು ವಿದ್ಯಾರ್ಥಿ  ಸಮುದಾಯ ಹಾಗೂ ವಿದ್ಯಾಥರ್ಿಗಳ ಪಾಲಕರ ಸಂತಸಕ್ಕೆ ಕಾರಣವಾಗಿದೆ.

ಸರದಿ ಸಾಲಿನಿಂದ ವಿನಾಯತಿ:  ಸಾರ್ವಜನಿಕ ಗಜಾನನೋತ್ಸವ ಮಹಾಮಂಡಲಿಯಿಂದ ಅಟೋ ರಿಕ್ಷಾಗಳಲ್ಲಿ ಗಣೇಶ ಮೂತರ್ಿ ವೀಕ್ಷಿಸಲು ತೆರಳುವ ಶಾಲೆಯ ವಿದ್ಯಾಥರ್ಿಗಳಿಗೆ ಗಣೇಶೋತ್ಸವ ಮಂಡಳಿಯ ದೃಷ್ಯಾವಳಿಗಳನ್ನು   ವಿದ್ಯಾಥರ್ಿಗಳು ಸರದಿ ಸಾಲಿನಲ್ಲಿ ನಿಲ್ಲುವದರಿಂದ ವಿನಾಯತಿ ನೀಡಲಾಗಿತ್ತು. ವಿದ್ಯಾಥರ್ಿಗಳು  ನೇರವಾಗಿ ಗಣೇಶನ ವೀಕ್ಷಣೆ ಮಾಡಿ ಮುಂದಿನ ಗಣೇಶ ಮೂತರ್ಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.  ಈ ಬಗ್ಗೆ ಗಣೇಶೋತ್ಸವ ಮಹಾಮಂಡಳಿಯ ಪದಾಧಿಕಾರಿಗಳು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳೊಂದಿಗೆ ಮುಂಚೆಯೇ ಚಚರ್ಿಸಿ ವ್ಯವಸ್ಥೆ ಮಾಡಿಕೊಂಡಿದ್ದರೆಂದು ಮೂಲಗಳು ತಿಳಿಸಿವೆ.. 

ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಅವಳಿ ನಗರದಲ್ಲಿನ ವಿದ್ಯಾರ್ಥಿ  ಸಮುದಾಯಕ್ಕೆ ಉಚಿತ ಗಣೇಶ ಮೂತರ್ಿ ವಿಕ್ಷಣೆ ಸಮಾರಂಭವನ್ನು ಸಾರಿಗೆ ಪಿಎಸೈ ಕಮಲಾ ದೊಡ್ಡಮನಿ, ಶಹರ ಅಪರಾಧ ಪಿಎಸೈ ಉಮಾ ವಗ್ಗರ ಉದ್ಘಾಟಿಸಿದರು.

ಮಾತನಾಡಿದ ಉಮಾ ವಗ್ಗರ ಸಾರ್ವಜನಿಕ ಗಜಾನನೋತ್ಸವ  ಮಹಾಮಂಡಳಿ ವಿದ್ಯಾರ್ಥಿಗಳಿಗೆ ಗಣೇಶ ಮೂತರ್ಿ ವಿಕ್ಷಿಸಲು ಅನುಕೂಲ ಮಾಡಿದ ಕ್ರಮ ಅತ್ಯಂತ ಶ್ಲಾಘನೀಯವಾಗಿದೆ. ಇದು ಬಾಲ್ಯದಿಂದಲೇ ವಿದ್ಯಾರ್ಥಿ ಗಳಲ್ಲಿ ಧಾರ್ಮಿಕ  ಭಾವನೆ ಮೂಡಿಸಲು ಅನುಕೂಲವಾಗುತ್ತದೆಯೆಂದು ಪ್ರತಿಪಾದಿಸಿದರು. ಗಣೇಶೋತ್ಸವ ಮಹಾಮಂಡಳಿಯ ಅಧ್ಯಕ್ಷ ರಾಜೂ ಖಾನಪ್ಪನವರ, ಕಿಶನ್ ಮೆರವಾಡೆ, ಅಜ್ಜಣ್ಣ ಮಲ್ಲಾಡದ, ಪ್ರಕಾಶ ಗುಜರಾತಿ, ರಾಜೂ ಮಲ್ಲಾಡದ, ರಮೇಶ ಮೇಟಿ, ಅಪ್ಪು ಧುಂಡಸಿ, ವಿರಾಟ್ ದಂಡಿನ, ರಾಕೇಶ ನವಲಗುಂದ, ಶ್ರೀಕಾಂತ ಪಾಟೀಲ,ರಾಜೂ ಗಾಣಿಗೇರ, ಪ್ರಶಾಂತ ಮುಂಡರಗಿ, ವಾಸುದೇವ ಜಡಿ, ಮೌನೇಶ ದಾಸರ, ಈರಣ್ಣ ಗುಜಮಾಗಡಿ, ಚೇತನ ಇರಕಲ್ ಮುಂತಾದವರಿದ್ದರು.