ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರಾಗಿ ಯೋಗೇಶ ಪಾಟೀಲ ಆಯ್ಕೆ: ಸನ್ಮಾನ

Yogesh Patil elected president of South Indian Sugar Mills Association: Hon

ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರಾಗಿ ಯೋಗೇಶ ಪಾಟೀಲ ಆಯ್ಕೆ: ಸನ್ಮಾನ 

ಸಂಬರಗಿ  06: ಕೆಂಪವಾಡ  ಸಕ್ಕರೆ ಕಾರ್ಖಾನೆಯ ಕಾರ್ಯ ನಿರ್ವಾಹಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಇವತ್ತು ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ( ಕರ್ನಾಟಕ) ಅಧ್ಯಕ್ಷರಾಗಿ  ಯೋಗೇಶ ಶ್ರೀಮಂತ ಪಾಟೀಲರವರು ಆಯ್ಕೆ ಯಾಗಿರುವುದು ನಮ್ಮಗಲ್ಲದೆ ಕರ್ನಾಟಕಕ್ಕೆ ಹೆಮ್ಮೆ ತರುವಂತಾ ವಿಷಯವಾಗಿದೆ ಎಂದು ತಮ್ಮ ಪುತ್ರನ ಯಶಶ್ವಿಯ ಕುರಿತು ಹೆಮ್ಮೆಯಿಂದ ಮಾಜಿ ಸಚಿವ ಹಾಗೂ ಕೆಂಪವಾಡ  ಸಕ್ಕರೆ ಕಾರ್ಖಾನೆಯ   ಚೆರಮನ ಶ್ರೀಮಂತ ಪಾಟೀಲ ಹೇಳಿದರು. 

         ಅವರು ಕೆಂಪವಾಡ ಅಥಣಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಏರಿ​‍್ಡಸಿದ ಕಾರ್ಯ ನಿರ್ವಾಹಕ ನಿರ್ದೇಶಕ  ಯೋಗೇಶ ಶ್ರೀಮಂತ ಪಾಟೀಲ ರವರು  ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ( ಕರ್ನಾಟಕ) ಅಧ್ಯಕ್ಷರಾಗಿ ಆಯ್ಕೆಯಾದ ಕುರಿತು ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, 167 ಕಾರ್ಖಾನೆಗಳಲ್ಲಿ ತಮ್ಮ ಅದ್ಬುತವಾದ ಜ್ಞಾನದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ನಮ್ಮ ಪಾಟೀಲ ಕುಟುಂಬಕ್ಕೆ ಹೆಮ್ಮೆ ತಂದಿದೆ, ಸಕ್ಕರೆ ಕಾರ್ಖಾನೆಗಳ ಉದ್ಯಮಿಗಳಾಗಿ ನಮ್ಮ ಕುಟುಂಬ ಸೇವೆ ಸಲ್ಲಿಸುತ್ತಾ ಬಂದಿದೆ, ಇದರಿ ಜನ ಸೇವೆ ಸಲ್ಲಿಸುವ ಮೂಲಕ ರಾಜಕೀಯ ರಂಗಕ್ಕು ನಾವು ಬಂದು ಈಗಾಗಲೆ ಒಂದು ಬಾರಿ ಶಾಸಕನಾಗಿಯು ಆಯ್ಕೆಯಾಗಿ ಜನ ಸೇವೆ ಮಾಡುವಂತಾ ಅವಕಾಶ ನನಗು ದೊರೆತಿದ್ದು ಇದು ನಮ್ಮ ಕಾಗವಾಡ ಕ್ಷೇತ್ರದ ಜನತೆಯ ಆಶಿರ್ವಾದ ಎಂದೆ ನಾವು ತಿಳಿಯುತ್ತೇನೆ. ಜನತೆಯ ಹಾರೈಕೆ ನಮಗೆ ಶ್ರೀ ರಕ್ಷೆ ಎಂದು ಹೇಳಬಹುದು ಎಂದು ಭಾವುಕರಾಗಿ ಹೆಮ್ಮೆಯಿಂದ ಮತ್ತೋಮ್ಮೆ ಅಭಿಪ್ರಾಯ ವ್ಯಕ್ತ ಪಡಿಸಿದರು. ರೈತರ ಸೇವೆ ಮಾಡುವ ನಮ್ಮ ಗುರಿ ಇದ್ದು ಕ್ಷೇತ್ರ ಅಭಿವೃದ್ಧಿ ಮಾಡಲು ನಾವು ಪಣ ತೊಟ್ಟಿದ್ದು ನಮ್ಮದು ಮಾತು ಕಡಿಮೆ ಕೆಲಸ ಹೆಚ್ಚು ಮಾಡುತ್ತೇವೆ ಜನಸೇವೆ ಜನಾರ್ಧನ ಸೇವೆ ಎಂದು ತಿಳಿದು ಸೇವೆ ಮಾಡುತ್ತ ಬಂದಿದ್ದೇವೆ ಜನ ನಮ್ಮ ಕ್ಷೇತ್ರದಲ್ಲಿ ಬೆನ್ನುಲುವಾಗಿ ನಿಂತಿದ್ದಾರೆ ಎಂದರು. 

        ಈ ವೇಳೆ ಶ್ರೀನಿವಾಸ ಪಾಟೀಲ, ನಿಂಗಪ್ಪಾ ಖೋಕಲಿ, ಅಸ್ಲಮ ನಾಲಬಂದ, ಅಪ್ಪಾಸಾಹೇಬ್ ಅವತಾಡಿ, ಗಜಾನನ ಮಂಗಸೂಳಿ, ಅಬ್ದುಲ್ ಬಾರಿ ಮುಲ್ಲಾ, ಶಿವಾನಂದ್ ಬುರ್ಲಿ, ಮುರ್ಗ್ಯಪ್ಪಾ ಮಗದುಮ್, ಆರ್‌.ಎಮ ಪಾಟೀಲ್, ಗಜಾನನ ಎಂಡೋಳಿ, ಅಭಯ್  ಅಕಿವಾಟೆ, ಉತ್ತಮ ಪಾಟೀಲ್, ಚೇತನ್ ಗಾಯಕವಾಡ ಅಪ್ಪಸಾಹೇಬ್ ಮಳಮಳಸಿ ಗಣ್ಯರು ಎಲ್ಲಾ ಕಾರ್ಯಕರ್ತರು ಉಪಸ್ಥಿತ ಇದ್ದರು.