ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷರಾಗಿ ವಿ ಬಿ ಜಗದೀಶ್ ಆಯ್ಕೆ
ಹೂವಿನ ಹಡಗಲಿ 06: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ವಿ.ಬಿ ಜಗದೀಶ್ ಅವಿರೋಧವಾಗಿ ಮರು ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಯು.ಆನಂದರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಪ್ಪ ನವರ್ ಅಧ್ಯಕ್ಷತೆಯಲ್ಲಿ ನೆಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಎರಡನೇ ಬಾರಿ ಮರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಪದಾದಿಕಾರಿಗಳಾದ ಶಿವಾನಂದ ಬಿ ಬಿ, ಸಿದ್ದಮ್ಮ ಎ ಎಸ್ ಎಮ್, ನಿಕಟಪೂರ್ವ ಅಧ್ಯಕ್ಷ ಯು ಆನಂದ್, ಉಪಾಧ್ಯಕ್ಷ ಸಿ ಮೈಲಾರಿ, ಪ್ರಧಾನ ಕಾರ್ಯದರ್ಶಿ ಹೆಚ್ ಏಸು, ಖಜಾಂಜಿ ಪಕೀರ್ ಸಾಬ್,ನಿರ್ದೇಶಕರಾದ ಎನ್ ಡಿ ರೇಖಾ, ಎಸ್ ಸರೋಜಾ, ಮಾಲತೇಶ್, ಗುಡ್ಯಾನಾಯ್ಕ್ ಬಿ ವಿನೋದ್, ಚಂದ್ರ್ಪ ತಳವಾರ, ನೌಕರರ ಸಂಘದ ನಿರ್ದೇಶಕ ಜಿ ಜಗದೀಶ್ ಹಾಗೂ ಶಿಕ್ಷಕರ ಬಳಗ ಉಪಸ್ಥಿತರಿದ್ದು ಅಭಿನಂದಿಸಿದರು. ನೂತನ ಅಧ್ಯಕ್ಷರಿಗೆ ಶಾಸಕ ಕೃಷ್ಣ ನಾಯಕ, ಬಿ ಇ ಓ ಮಹೇಶ್ ಪೂಜಾರಿ ಹಾಗೂ ಸಿಬ್ಬಂದಿ ವರ್ಗ ಹಾಗೂ ತಾಲೂಕು ಶಿಕ್ಷಕರ ಬಳಗ ಹಾಗೂ ಕೊಟ್ಟೂರೇಶ್ವರ ಸ್ನೇಹ ಬಳಗ ಅಭಿನಂದಿಸಿದ್ದಾರ.