ಇಲ್ಲಿ ಕಂಡುಬಂದಿರುವ ವೈರಸ್​ಗೂ, ಚೀನಾ ವೇರಿಯಂಟ್​ಗೂ ಸಂಬಂಧವಿಲ್ಲ: ಸಚಿವ ದಿನೇಶ್ ಗುಂಡೂರಾವ್

The virus found here is not related to the Chinese variant: Minister Dinesh Gundurao

ಬೆಂಗಳೂರು 06: ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಇದು ಅಸ್ತಿತ್ವದಲ್ಲಿರುವ ವೈರಸ ಆಗಿದೆ. ಆಂತಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಗುವೊಂದರಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಲ್ಲ. 

ಇಲ್ಲಿ ಕಂಡುಬಂದಿರುವ ವೈರಸ್​ಗೂ, ಚೀನಾ ವೇರಿಯಂಟ್​ಗೂ ಸಂಬಂಧವಿಲ್ಲ. ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್​ ಕಡಿಮೆ ಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಬರುತ್ತೆ. ಮಗುವಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಮಗು ಹಾಗೂ ಪೋಷಕರು ಸ್ಥಳೀಯರಾಗಿದ್ದಾರೆ. ಇದರ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಪ್ರಸ್ತುತ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಸ್ಯಾಂಪಲ್​ನ್ನು ಪುಣೆ ಲ್ಯಾಬ್​ಗೆ ಕಳುಹಿಸುತ್ತೇವೆ. ಇದರ ಬಗ್ಗೆ ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್​ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳದರು.