ಮತದಾರರ ವಿಶೇಷ ಸಂಕ್ಷಿಪ್ತ ಪರಿಕ್ಷರಣೆ ಅರ್ಹತಾ ಅಂತಿಮ ಕರಡು ಪಟ್ಟಿ ಪ್ರಕಟ
ವಿಜಯಪುರ 06: ಜಿಲ್ಲೆಯಲ್ಲಿ ದಿನಾಂಕ 29-10-2024ರ ಪಟ್ಟಿಯಂತೆ ಒಟ್ಟು 1955853 ಮತದಾರರು ಇದ್ದು, ದಿನಾಂಕ 6-1-2025ರ ವಿಶೇಷ ಸಂಕ್ಷಿಪ್ತ ಪರಿಕ್ಷರಣೆ ಅರ್ಹತಾ ಅಂತಿಮ ಕರಡು ಮತದಾರರಂತೆ 9655 ಹೊಸದಾಗಿ ಮತದಾರರನ್ನು ಸೇರೆ್ಡಗೊಳಿಸಲಾಗಿದ್ದು, ಒಟ್ಟು ಜಿಲ್ಲೆಯಲ್ಲಿ 1965508 ಅರ್ಹ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ಅಂತಿಮಗೊಳಿಸಿ ಪ್ರಚಾರ ಪಡಿಸಲಾಗಿದೆ ಎಂದು ವಿಜಯಪುರ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಹಾಗೂ ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿಗಳಾದ ಸುಷಮಾ ಗೋಡಬೋಳೆ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶೇಷ ಸಂಕ್ಷಿಪ್ತ ಮತದಾರರಪಟ್ಟಿ ಪರಿಷ್ಕರಣೆ- 2025 ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಮೂನೆ-6ರಲ್ಲಿ 16918, ನಮೂನೆ-7263, ನಮೂನೆ-8ರಲ್ಲಿ 8656 ಹಾಗೂ 1957 ಸೇವಾ ನಿರತ ( ಭಾರತೀಯ ಸೇನೆ ಹಾಗೂ ಇತರೆ) ಸೇವೆ ಸಲ್ಲಿಸುತ್ತಿರುವ ಮತದಾರರ ಪಟ್ಟಿಯನ್ನು 29-10-2024ರಿಂದ 28-11-2024ರ ವರೆಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಸ್ವೀಕೃತವಾದ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು ಅನುಮೋದಿಸಲಾಗಿದೆ. ಹಾಗೂ ಸಣ್ಣ ಪುಟ್ಟ ತಿದ್ದುಪಡೆಳನ್ನು ಸರಿ ಪಡಿಸಿ ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಲಾಗಿದೆ. ವಿಧಾನ ಸಭಾ ಮತಕ್ಷೇತ್ರವಾರು ಒಟ್ಟು 2092 ಮತ ಗಟ್ಟೆಗಳಿವೆ. ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಸೇರೆ್ಡಗೊಳಿಸಲು ಓಟರ್ ಹೆಲ್ಪ ಲೈನ್ ಆಪ್ ಕುರಿತು ಜಾಗೃತಿ ಮೂಡಿಸಿ ಸ್ವೀಪ ಕಾರ್ಯಕ್ರಮಗಳನ್ನು ಆಯೋಜಿಸಿ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸಿದ್ದಾರೆ ಹಾಗೂ ಜಿಲ್ಲಾಡಳಿತವು ಕಾರ್ಯ ತೃಪ್ತಿದಾಯಕವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಟಿ.ಬುಬಾಲನ್ ಮಾತನಾಡಿ ಮತದಾರರ ಎಪಿಕ್ ಕಾರ್ಡ್‌ಗಳನ್ನು ಮುದ್ರಿಸಲಾಗಿದ್ದು ಜನವರಿ 25ರಿಂದ ಓಟರ್ ಕಾರ್ಡ್‌ಗಳನ್ನು ಮತದಾರರಿಗೆ ತಲುಪಿಸಲು ಕ್ರಮ ವಹಿಸಲಾಗುದು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರೆ್ಡ ಬಯಸುವವರು ಆನ್ ಲೈನ್ ಮೂಲಕ ಅರ್ಜಿ ಪಾರ್ಮಗಳನ್ನು ತುಂಬಿ ಮತದಾರರ ಪಟ್ಟಿಯಲ್ಲಿ ಸೇರೆ್ಡ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯದಲ್ಲಿ ಜಿಲ್ಲೆಯ ಎಲ್ಲ ಪಕ್ಷದ ಮುಖಂಡರು ತುಂಬಾ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು. ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ಇಂಡಿ ಉಪವಿಭಾಗಾಧಿಕಾರಿ ಅಭೀದ ಗದ್ಯಾಳ, ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಭಾರತೀಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿ ಚನ್ನಬಸಪ್ಪ ನಂದರಗಿ, ಭಾರತೀಯ ಜನತಾ ಪಕ್ಷದ ರಾಜು ಹಿಪ್ಪರಗಿ, ಜನತಾದಳ(ಜಾತ್ಯಾತೀತ) ಪಕ್ಷದ ಕೆ.ಆರ್. ತೊರವಿ, ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಹಾಗೂ ಇತರರು ಉಪಸ್ಥಿತರಿದ್ದರು.