ಫೆಬ್ರವರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ; ಕಾಮರಾಜ ಬಿರಾದಾರ
ಮುದ್ದೇಬಿಹಾಳ 06: ಈ ತಿಂಗಳ ಜನೇವರಿ ಕೊನೆಗೆ ಅಥವಾ ಪೆಬ್ರುವರಿ ಮೊದಲ ವಾರದಲ್ಲಿ ಮುದ್ದೇಬಿಹಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಹಮ್ಮಿಕೊಳ್ಳಲುಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಬರುವ ದಿನಗಳಲ್ಲಿ ಕಾರ್ಯಕ್ರಮ ರೂಪುರೇಷ ಬಗ್ಗೆ ಮತಕ್ಷೇತ್ರದ ಸಾಹಿತ್ಯ ಆಸಕ್ತರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಚಟುವಟಿಕೆ ಪೂರ್ವ ಬಾವಿ ಪ್ರಥಮ ಸಭೆ ಕರೆದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಸಾಹಿತಿಗಳ ಹಾಗೂ ಕನ್ನಡಾಭಿಮಾನಿಗಳ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಒಗ್ಗೂಡಿ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಬೇಕಿದೆ. ಇದಕ್ಕೆ ಮನ್ನಣೆ ಕೂಡ ಸಾಹಿತ್ಯ ಪರಿಷತ್ತು ನೀಡಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿಯೇ ಮಾದರಿ ತಾಲೂಕು ಸಾಹಿತ್ಯ ಪರಿಷತ್ತು ಸಮ್ಮೇಳನವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಅವರು ಕರೆ ನೀಡಿದರು.ನೌಕರರು, ನಾನಾ ಸಂಘಟನೆಗಳ ಪದಾಧಿಕಾರಿಗಳು, ಸಾಹಿತಿಗಳು, ಕನ್ನಡಾಭಿಮಾನಿಗಳು ಈ ಸಮ್ಮೇಳನದ ಯಶಸ್ವಿಗೆ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳಬೇಕು. ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಎಲ್ಲಾ ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಬೇಕು. ಯಾವುದೇ ತಾರತಮ್ಮ ಮಾಡಬಾರದು. 1 ಅಥವಾ 2 ದಿನಗಳು ಈ ಸಮ್ಮೇಳನ ನಡೆಸಬೇಕು ಎಂಬುದನ್ನು ಸಮಾಲೋಚನೆ ನಡೆಸಿ ಪರಾಮರ್ಶೆ ಮಾಡಬೇಕು. ಸಮ್ಮೇಳನಗಳು ಕಾಟಾಚಾರಕ್ಕಾಗಬಾರದು ಎಂದು ಮಾಜಿ ಎಪಿಎಂಸಿ ಸದಸ್ಯ ವಾಯ್.ಎಚ್ ವಿಜಯಕರ್ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಸುರೇಶ ಹರನಾಳ, ಪ್ರೊ ವಿ.ಎಸ್ ಲಮಾಣಿ, ಪ್ರಭುಗೌಡ ರಾರಡ್ಡಿ, ಲಾಳೇಸಾಬ ನಾಯ್ಕೋಡಿ, ಬಸವರಾಜ ನಾಗೂರ, ಶಿವಪೂತ್ರ ಅಜಮನಿ, ಡಾ. ಆರ್.ಎಚ್ ಸಜ್ಜನ, ಸಂಗಪ್ಪ ಚಲವಾದಿ, ಜಹಾಂಗೀರ ಮುಲ್ಲಾ, ಸಿದ್ದನಗೌಡ ಬಿಜ್ಜೂರ, ಸಂಗಮೇಶ ಶಿವಣಗಿ, ಬಿ.ಎಂ ರುದ್ರವಾಡಿ, ಶಿವನಗೌಡ ಪಾಟೀಲ್, ಚಂದ್ರಶೇಖರ ಇಟಗಿ, ಎಸ್ ಆರ್ ಗೌಡರ, ಸಂಗಮೇಶ ನೇಬಗೇರಿ, ಹುಸೇನ ಮುಲ್ಲಾ(ಕಾಳಗಿ) ಸೇರಿದಂತೆ ಸಾಹಿತ್ಯ ಆಸಕ್ತರು ಇದ್ದರು.