ಶಿವಮೊಗ್ಗ 25: ಶಿವಮೊಗ್ಗದಲ್ಲಿರುವ ಈ ಹೊಟೇಲ್ ನಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಹೊಟ್ಟೆ ತುಂಬುವಷ್ಟು ಊಟ ಮಾಡಿ, ಆದರೆ ಅದಕ್ಕೆ ಇಷ್ಟೇ ಹಣ ನೀಡಬೇಕು ಅಂತೇನಿಲ್ಲ, ನಿಮಗೆ ಎಷ್ಟು ಕೊಡಬೇಕು ಎನಿಸುತ್ತದೋ ಅಷ್ಟು ಹಣ ನೀಡಬಹುದು.
ಶಿವಮೊಗ್ಗ ಮೈನ್ ಬಸ್ ನಿಲ್ದಾಣದಲ್ಲಿರುವ ಶ್ರೀ ಅನ್ನಲಕ್ಷ್ಮಿ ಎಂಬ ರೆಸ್ಟೋರೆಂಟ್ ನಲ್ಲಿ ಈ ಆಫರ್ ನೀಡಲಾಗಿದೆ. ಈ ಆಫರ್ ಕೇವಲ ಒಂದು ದಿನ ಮಾತ್ರವಲ್ಲ, ಯಾವಾಗಲೂ ಮುಂದುವರಿಯಲಿದೆ.
ಮಧ್ಯಾಹ್ನ 12.30ರಿಂದ 2.30ರ ವರೆಗೆ ಊಟದ ಸಮಯವಿರುತ್ತದೆ, ಅನ್ನ ತರಕಾರಿ ಸಾರು, ಮಜ್ಜಿಗೆ ನೀಡಲಾಗುತ್ತದೆ. ಊಟ ಮಾಡಿದವರು ತಮ್ಮ ಮನಸ್ಸಿಗೆ ಬಂದಷ್ಟು ಹಣ ನೀಡಬಹುದು, ಶುಕ್ರವಾರ ಸುಮಾರು 600 ಮಂದಿ ಊಟಕ್ಕಾಗಿ ಬಂದಿದ್ದರು. ಹಾಗಾಗಿ ಮಧ್ಯಾಹ್ನ 3 ಗಂಟೆವರೆಗೂ ಸಮಯ ವಿಸ್ತರಿಸಲಾಗಿತ್ತು,
ನಂಜನಗೂಡು ಮೂಲದ ಗೋವರ್ಧನ್ ಎಂಬುವರು, ಕಳೆದ ಆರು ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ, ತೀರ್ಥಹಳ್ಳಿಯಲ್ಲಿರುವ ಅವರು ಬಂದ ಜನರನ್ನು ನೋಡಿ ಖುಷಿಗೊಂಡಿದ್ದಾರೆ, ಇದು ಉಚಿತ ಊಟವಲ್ಲ, ಆದರೆ ಹೊಟ್ಟೆ ತುಂಬಾ ಅಪರಿಮಿತವಾಗಿ ಊಟ ಮಾಡಬಹುದು, ಅವರಿಗೆ ಹಣನೀಡಬಹುದು, ದೇವಾಲಯಗಳಲ್ಲಿ ನೀಡುವಂತೆ ಇಲ್ಲಿಯೂ ಕೂಡ ಊಟ ನೀಡಲಾಗುವುದು ಎಂದು ಹೇಳಿದ್ದಾರೆ.
ಕೆಲವು ಮಂದಿ ಪರಿಶೀಲಿಸಲು ಬಂದು ಊಟ ಮಾಡಿದರು, ಆದರೆ ಹಣ ನೀಡಲಿಲ್ಲ, ಕೆಲವರು ಹಣ ನೀಡಿದರು, ಕೆಲವರು ನೀಡದೇ ಹಾಗೆ ಹೋದರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೂಡ ಭೇಟಿ ನೀಡಿದ್ದರು. ನಗರ ಮುನಿಸಿಪಾಲಿಟಿ ಅಧ್ಯಕ್ಷ ಸಂದೇಶ್ ಜವಳಿ ಹೋಟೆಲ್ ಉದ್ಘಾಟನೆ
ಮಾಡಿದರು.
ಹಲವು ವರ್ಷ ನಾನು ಸಮಾಜ ಸೇವೆ ಮಾಡುತ್ತಿದ್ದೆ, ಪ್ರತಿ ಸೋಮವಾರ ರಾಮೇಶ್ವರ ದೇವಾಲಯದಲ್ಲಿ ಊಟ ನೀಡುತ್ತಿದ್ದೆ. ನಂತರ ದೇವಾಲಯ ನವೀಕರಣವಾಯಿತು. ಅಲ್ಲಿ ಊಟ ನೀಡುವುದು ನಿಂತಿತು, ನಂತರ ನಾನು ಮತ್ತು ನನ್ನ ಸ್ನೇಹಿತ ಟಿ.ಡಿ ರಾಘವೇಂದ್ರ ನಾನು ಚಚರ್ಿಸಿ ಜನರಿಗೆ ಶುಚಿಯಾದ ಆಹಾರ ನೀಡಬೇಕು ಎಂಬ ಬಗ್ಗೆ ಚಿಂತಿಸುವಾಗ ಈ ಐಡಿಯಾ ಬಂತು ಎಂದು ಹೇಳಿದ್ದಾರೆ.
ಹೊಟೇಲ್ ನಲ್ಲಿ 100 ಮಂದಿ ಒಟ್ಟಿಗೆ ಕೂತು ಊಟ ಮಾಡಬಹುದು, ಹೊಟೇಲ್ ಬ್ಯುಸಿನೆಸ್ ಆಗಿದ್ದು,ಕಡಿಮೆ ಹಣಕ್ಕೆ ಊಟ ನೀಡುತ್ತಿದ್ದೇವೆ, ಟ್ರಿಪ್ ಗೆ ಬರುವ ಶಾಲಾ ಮಕ್ಕಳು ಪ್ರತಿ ಊಟಕ್ಕೆ 60 ರು ನೀಡಬೇಕು, ಅದು ತುಂಬಾ ಹೆಚ್ಚು. ಹೀಗಾಗಿ ಜನ ಹೊಟ್ಟೆ ತುಂಬಾ ಊಟ ಮಾಡಿ, ಅವರ ಮನಸ್ಸಿಗೆ ಬಂದಷ್ಟು ಹಣ ನೀಡಬಹುದಾಗಿದೆ. ಆಫರ್ ಇಲ್ಲದಾಗ ಮಾಮೂಲಿ ದರಕ್ಕೆ ಬೇರೆ ಬೇರೆ ರೀತಿಯ ಆಹಾರ ಸಿಗುತ್ತದೆ.