ಏಪ್ರಿಲ್ 15 ರಂದು ರಾಜ್ಯಾದ್ಯಂತ ಲಾರಿ ಮಾಲೀಕರು,ಚಾಲಕರ ಅನಿರ್ದಿಷ್ಟ ಅವಧಿ ಮುಷ್ಕರ: ಅಧ್ಯಕ್ಷ ಮಿಂಚು ಶ್ರೀನಿವಾಸ
ಬಳ್ಳಾರಿ 12: ನಗರದಲ್ಲಿ ವಿವಿಧ ಬೇಡಿಕೆಗಳ ಪರಿಹರಕ್ಕಾಗಿ ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್‌ಅಸೋಸಿಯೇಷನ್ ನಿಂದ ಏಪ್ರಿಲ್ 15ರಂದು ಬೆಳಗ್ಗೆ 6 ಗಂಟೆಯಿಂದ ಲಾರಿ ಸಂಚಾರದ ಅನಿರ್ದಿಷ್ಟ ಮುಷ್ಕರ ಮಾಡಲಾಗುತ್ತದೆ ಎಂದು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಶನಿವಾರ ಬೆಳಿಗ್ಗೆ ಏರಿ್ಡಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಂಚು ಶ್ರೀನಿವಾಸ್ ಅವರು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ ಅಸೋಸಿಯೇಷನ್ನ ಅಧ್ಯಕ್ಷ ಡಾ.ಜಿ.ಆರ್.ಷಣ್ಮುಖಪ್ಪ ನೇತೃತ್ವದಲ್ಲಿ ಬೆಂಗಳೂರಿನ ಹೋಟೆಲ್ ಪ್ರಕಾಶ್ ಕೆಫೆಯಲ್ಲಿ ಏ.5ರಂದು ಬೆಳಿಗ್ಗೆ 10 ಗಂಟೆಗೆ ತುರ್ತು ಸಭೆಯನ್ನು ಕರೆದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಬೇಡಿಕೆಗಳ ಬಗ್ಗೆ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ, ಏಪ್ರಿಲ್ 15ರಂದು ಬೆಳಿಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ನಿರ್ಧರಿಸಿದ್ದು, ಈ ಕಾರ್ಯಕ್ಕೆ ಬಳ್ಳಾರಿ ಜಿಲ್ಲಾ ಸಂಘವು ಸಹ ಬೆಂಬಲಿಸುತ್ತದೆ ಎಂದರು.ಹಾಗೂ ಹೆಚ್ಚಿಸಿರುವ ಡೀಸೆಲ್ ದರವನ್ನು ಹಿಂಪಡೆಯಬೇಕು.
ದೇಶದ ಯಾವುದೇ ರಾಜ್ಯದಲ್ಲೂ ರಾಜ್ಯ ಹೆದ್ದಾರಿ ಟೋಲ್ಗಳು ಇರುವುದಿಲ್ಲ. ರಾಜ್ಯದಲ್ಲಿ ಮಾತ್ರ ಈ ಮಲತಾಯಿ ಧೋರಣೆ ತೋರಿದ್ದಾರೆ.ಯಾವುದೇ ವಾಹನದ ಚಾಲಕರಿಗೆ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆ ಅಪಘಾತ ತಡೆಯುವುದಕ್ಕೆ ಕ್ರಮ ವಹಿಸದೇ, ಟೋಲ್ಗಳಿಗೆ ಬಣ್ಣ ಬಳಿದು ಶುಲ್ಕ ವಸೂಲಿ ಮಾಡುತ್ತಿರುವುದು ಸಮಂಜಸವಾಗಿರುವುದಿಲ್ಲ. ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಸಂಗ್ರಹಿಸುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಕರ್ನಾಟಕದ ಗಡಿ ಭಾಗದ ಚೆಕ್ಪೋಸ್ಟ್ಗಳನ್ನು ರದ್ದುಗೊಳಿಸಬೇಕು, 15 ವರ್ಷಗಳ ಬಳಿಕ ದೈಹಿಕ ಸಾಮರ್ಥ್ಯದ ಶುಲ್ಕವನ್ನು ಏಕಾಏಕಿ 15 ಸಾವಿರ ರೂ.ಗಳಿಗೆ ಏರಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿರುತ್ತದೆ.ಶುಲ್ಕವು ರಾಜ್ಯ ಹಣಕಾಸಿಗೆ ಸಂಬಂಧಪಟ್ಟಿರುವುದರಿಂದ ಈ ಮಾರ್ಗಸೂಚಿಂ-ತಯನ್ನು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತರಬಾರದೆಂದು ಒತ್ತಾಯಿಸಿದರು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಒಳಗಡೆ ಸರಕು ಸಾಗಣೆ ವಾಹನಗಳನ್ನು ನಿಷೇಧ ಮಾಡಿ. ಕೇವಲ 5 ಗಂಟೆ ಸಮಯವನ್ನು ನೀಡಿರುತ್ತೀರಿ. ಆದರೆ, ಈ ಒಂದು ನಿರ್ಧಾರ ಇಡೀ ಟ್ರಾನ್ಸ್ಪೋರ್ಟ್ ಉದ್ಯಮದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ನಗರದಲ್ಲಿ ನೋ ಎಂಟ್ರಿ ಹೆಸರಿನಲ್ಲಿ ಲಾರಿ ಚಾಲಕರಿಗೆ ಪೊಲೀಸರಿಂದ ಮತ್ತು ಆರ್ಟಿಓಗಳಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎಂದರು. ಇದೇ ಏಪ್ರಿಲ್ 15ರಂದು ಲಾರಿ ಮಾಲೀಕರ ಮುಷ್ಕರ ನಡೆಯಲಿದೆ ಎಂದು ಅವರು ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರು ಹಾಗೂ ಕೆ.ನೂರ್ ಮಹಮ್ಮದ್, ಪೆದ್ದನ, ವಿಶ್ವನಾಥ, ಹಾಗೂ ಬಸವರಾಜ್, ಕಾರ್ಯದರ್ಶಿ ಎಂ. ಮಹಬೂಬ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಲಾರಿ ಮಾಲೀಕರು ಭಾಗವಹಿಸಿದ್ದರು.