ಇಂದು ಶಿಷ್ಯವೇತನ ವಿತರಣಾ ಸಮಾರಂಭ

Scholarship distribution ceremony today

ಇಂದು ಶಿಷ್ಯವೇತನ ವಿತರಣಾ ಸಮಾರಂಭ

ಯಮಕನಮರಡಿ 12 : ಸ್ಥಳೀಯ ಹಾಗೂ ಹತ್ತರಗಿಯ ಸದ್ಗುರು ಶ್ರೀ ಹರಿಕಾಕಾ ಗೋಸಾವಿ ಋಗ್ವೇದಿ ಭಾಗವತ ಮಠ ಹತ್ತರಗಿಯ ಹರಿಮಂದಿರದಲ್ಲಿ ರವಿವಾರ ದಿನಾಂಕ 13 ರಂದು ಮುಂಜಾನೆ 11 ಗಂಟೆಗೆ ಏಕನಾಥ ದಾದಾ ಗೋಸಾವಿ ರವರ 22ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಪ್ರತಿಬಾನ್ವಿತ ಮರಾಠಿ ಹಾಗೂ ಕನ್ನಡದ 100 ಬಡವಿದ್ಯಾರ್ಥಿಗಳಿಗೆ ಪ್ರತಿ ವರ್ಷದ ಪದ್ದತ್ತಿಯಂತೆ ಶಿಷ್ಯವೇತನ ಸಮಾರಂಭ ಜರುಗಲಿದ್ದು ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಹರಿಮಂದಿರದ ಪಿಠಾಧಿಶರಾದ ಡಾ. ಆನಂದ ಊರ​‍್ ನರಸಿಂಹ ಏಕನಾಥ ಗೋಸಾವಿ ಇವರು ವಹಿಸಲಿದ್ದು ಆದ್ಯಕ್ಷತೆಯನ್ನು ರಾಮಂಚಂದ್ರ ಕುಲಕರ್ಣಿ ಕುರಂದವಾಡಕರ ವಹಿಸಲಿದ್ದಾರೆ, ಹುಕ್ಕೇರಿ ಅತಿಥಿಗಳಾಗಿ ಹುಕ್ಕೇರಿ ತಾಲೂಕಾ ಕ್ಷೇತ್ರ ಶೀಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಭಾವತಿ ಪಾಟೀಲ ಆಗಮಿಸಲಿದ್ದು- ಅದರಂತೆ ಕೊಲ್ಲಾಪುರದ ಡಾ. ರಾಧಿಕಾ ನಂದಕುಮಾರ ಜೋಗಿ ಮತ್ತು ಯಮಕನಮರಡಿ ಸಿ ಪಿ ಐ ಜಾವೀದ ಮುಸಾಪಿರಿ ಹಾಗೂ. ಉಪನ್ಯಾಸಕರಾಗಿ ಕೊಲ್ಲಾಪುರದ ಸುಷ್ಮಾ ಅರುಣ ಪಾಟೀಲ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮ ಜರುಗಲಿದ್ದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರಮಾಣಪತ್ರ ಭಗವತ್ ಗೀತಾ ಗ್ರಂಥ ಇತರಿಲಾಗುವುದು ಎಂದು ಮುಖ್ಯ ಸಂಚಾಲಕರಾದ ಪ.ಪೂ, ವೇಣುಗೋಪಾಲ ಆನಂದ ಗೋಸಾವಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.