ಸಾಹಿತ್ಯ ಸೇವೆಯೊಂದಿಗೆ ಸಾಮಾಜಿಕ ಕಾರ್ಯ ಮಾಡುವ ಹೂಲಗೇರಿ ಡಾ.ವೀರಯ್ಯ ಸ್ವಾಮೀಜಿ

Dr. Veeraiah Swamiji of Hoolageri, who does social work along with literary service

ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಸಂಸ್ಕಾರ ಮತ್ತು ಶಿಕ್ಷಣ ಪ್ರಮುಖವಾಗಿವೆ. ಸಂಸ್ಕಾರವಿಲ್ಲದ ಶಿಕ್ಷಣ ನಿರರ್ಥಕ. ಮಠ-ಮಾನ್ಯಗಳು ಧಾರ್ಮಿಕ ಸೇವೆಯೊಂದಿಗೆ ಸಂಸ್ಕಾರವನ್ನು ಕಲಿಸುತ್ತವೆ. ಹೀಗಾಗಿ ಮಠಮಾನ್ಯಗಳು ಸಂಸ್ಕಾರ ನೀಡುವ ಶ್ರದ್ಧಾ ಕೇಂದ್ರಗಳು ಎಂದು ಪರಿಗಣಿಸಲಾಗುತ್ತದೆ.ಇಂಥಹ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬೆಳೆಯುತ್ತಿರುವ ಮಠ ಬಾದಾಮಿ ತಾಲೂಕಿನ ಹೂಲಗೇರಿಯ ಶ್ರೀ ಸಿದ್ದರಾಮ ಶಿವಯೋಗಿಶ್ವರ ಮಠ ಪ್ರಸಿದ್ದಿ ಗಳಿಸಿದೆ.       

2005 ರ ಮೇ 11 ರಂದು ಸುಂದರ ಪರಿಸರದಲ್ಲಿ ಅಡಿಗಲ್ಲು ನೆರವೇರಿಸಿ ಮಠ ನಿರ್ಮಿಸಲಾಗಿದೆ. ಈ ಮಠದಲ್ಲಿ ಸದ್ಯ ಡಾ.ಶ್ರೀ ವೀರಯ್ಯ ಮಹಾಸ್ವಾಮಿಗಳು ಮಠಾಧಿಶರಾಗಿ ಕಾರ್ಯ ನಿರ್ವಹಿಸುತ್ತಾ ಮಠವನ್ನು ಮುನ್ನೆಡೆಸುತ್ತಿದ್ದಾರೆ. ಮಠದಲ್ಲಿ ಗರ್ಭಗುಡಿ, ದೇವಿ ಮಂದಿರ, ಶಿವನ ಮಂದಿರ, ಸ್ವಾಮೀಜಿ ವಿಶ್ರಮಿಸಲು ಸದ್ಗುರು ಸದನ ನಿರ್ಮಿಸಲಾಗಿದೆ. ಬಗಳಾಂಬಾದೇವಿ ಮಂದಿರ, ಅನ್ನದಾಸೋಹ ಮನೆ ನಿರ್ಮಾಗೊಂಡಿದೆ. ದ್ಚಾದಶ  ಜೋರ್ತಿರ್ಲಿಂಗ  ಆಷ್ಠಾದಶ ಶಕ್ತಿಪೀಠ ಶ್ರೀ ಚಕ್ರ ಸ್ಥಾಪಿಸಲಾಗಿದೆ. ಈ ಮಠವು ಬಾದಾಮಿಯಿಂದ 22 ಕೀ.ಮಿ, ಬಾಗಲಕೋಟೆಯಿಂದ 28 ಕೀ.ಮಿ ದೂರವಿದೆ. ಹೂಲಗೇರಿ ಗ್ರಾಮದಿಂದ 2 ಕೀ.ಮಿ ದೂರದ ಸುಂದರವಾದ 3 ಎಕರೆ ಪರಿಸರದಲ್ಲಿ   ನಿರ್ಮಾಣಗೊಂಡಿದೆ.ಇಂಚಲ ಮಠದ 3 ನೇ    ಪೀಠಾಧಿಕಾರಿಗಳಾದ ಶ್ರೀ ಸಿದ್ದರಾಮ ಶಿವಯೋಗಿಗಳ ಅವರ ಹೆಸರಿನಲ್ಲಿ ಮಠ ಸ್ಥಾಪಿಸಲಾಗಿದ್ದು, ಸಿದ್ದರಾಮ ಶಿವಯೋಗಿಗಳು ಡಾ.ವೀರಯ್ಯ ಸ್ವಾಮೀಜಿಗಳ ಗುರುಗಳಾಗಿದ್ದಾರೆ. ಈ ಮಠದ ಪರಂಪರೆಯು ಆರೂಡ ಪರಂಪರೆಯಾಗಿದ್ದು, ಆರಾಧ್ಯ ದೈವ ಬಗಳಾಂಬಾದೇವಿ ಯನ್ನು ಆರಾಧಿಸಲಾಗುತ್ತದೆ.           

ಪ್ರತಿವರ್ಷ ಸುಮಾರು ಹತ್ತಾರು ಕಾರ್ಯಕ್ರಮಗಳು ಮಠದಲ್ಲಿ  ನಡೆಯುತ್ತವೆ. ಪ್ರಮುಖವಾಗಿ ಶ್ರಾವಣಮಾಸದ 2 ನೇ ಸೋಮವಾರ ದಂದು ಸಿದ್ದರಾಮ ಶಿವಯೋಗಿಗಳ ಲಕ್ಷ ಬಿಲ್ವಾರ್ಚಣೆ, ನವರಾತ್ರಿಯಲ್ಲಿ 9 ದಿನ ಅನುಷ್ಠಾನ, ಚಂಡಿ ಹೋಮ ಕಾರ್ಯಕ್ರಮ ನೆರವೇರುವದು. ಗೌರಿ ಹುಣ್ಣಿವೆ ಆದ 8 ನೇ ದಿನಕ್ಕೆ ಆಮಂತ್ರಿತ ಸ್ವಾಮಿಗಳಿಂದ ಪ್ರವಚನ ಹಾಗೂ ಕೊನೆಯ ದಿನ ರಥೋತ್ಸವ ಪ್ರತಿವರ್ಷ ನಡೆಯುತ್ತದೆ. ಪ್ರತಿವರ್ಷ      ತಾಲೂಕಿನಲ್ಲಿ ಜಾನಪದ ಕಲಾಮೇಳವನ್ನು  , ಸಾಹಿತ್ಯ ಸಮ್ಮೇಳನವನ್ನು ಮಠದ ವತಿಯಿಂದ ನಡೆಸಲಾಗುತ್ತದೆ. ಪ್ರತಿವರ್ಷ ಸಾಮೂಹಿಕ ವಿವಾಹಗಳು ನಡೆಯುತ್ತವೆ.*ಡಾ. ಶ್ರೀ ವೀರಯ್ಯ ಸ್ವಾಮೀಜಿಗಳ ಸಾಹಿತ್ಯ ಸೇವೆ*- ಮಠದ ಮಠಾಧೀಶರಾದ ಶ್ರೀ ಡಾ. ವೀರಯ್ಯ ಸ್ವಾಮೀಜಿಗಳು ಸಾಹಿತ್ಯ ಪ್ರೀಯರಾಗಿದ್ದು, ಸಾಹಿತ್ಯ ಪೋಷಕರಾಗಿ ಹಲವು ಕೃತಿಗಳ ರಚನೆಕಾರರಾಗಿದ್ದಾರೆ.                

ರೇವಣಸಿದ್ದಲೀಲಾಸಂಯುಕ್ತ ಹಾಲು ಮತತ್ತೇಜನ ಪುರಾಣ ರಸ್ತಾಪೂರ ಭೀಮಕವಿ ರಚಿಸಿದ್ದು ಅದನ್ನು ಸ್ವಾಮೀಜಿಗಳು ವಾರ್ದಿಕ ಷಟ್ಪಧಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಿದ್ದರಾಮಶಿವಯೋಗಿಗಳ ನಾಟಕ, ಸಿದ್ದರಾಮಶಿವಯೋಗಿಗಳ ಪುರಾಣ, ರೇವಯ್ಯ ಅಜ್ಜನ ಪುರಾಣ, ಶ್ರೀ ಶಿವಯೋಗಿಗಳ ಪುರಾಣ, ಶ್ರೀ ಗಾಳೇಶ್ವರರ ಪುರಾಣ, ಶ್ರೀ ಸಿದ್ದರಾಮಶಿವಯೋಗಿಶ್ವರ ಶತಕ ಚೌಪಧಿ ಪದ್ಯ ರೂಪದಲ್ಲಿ, ಪೂರ್ಣತ್ವದೆಡೆಗೆ (ಚೌಪದಿ), ಚಚಡಿ  ದೇಶಗತಿ ಇತಿಹಾಸ (ವೀರಭದ್ರ ದೇಸಾಯಿಯರ ಜೀವನ ಚರಿತ್ರೆ), ಆರೂಡ (ಅಚ್ಚಿನಲ್ಲಿ), ಶ್ರೀ ಶ್ರೀ ಶ್ರೀ ಶಿವಾನಂ ಭಾರತಿ ಮಹಾಸ್ವಾಮೀಜಿಗಳ ಚರಿತಾಮೃತ, ಭಗವತ್ ಪ್ರಭೆ(ಆದ್ಯಾತ್ಮ) ಇನ್ನೂ  ಮುಂತಾದ ಕೃತಿಗಳನ್ನು ರಚಿಸಿದ್ದಾರೆ.1971ರಲ್ಲಿ  ಗುರುಗಳ ಆಶೀರ್ವಾದ ಬಲದಿಂದ ಸಾಹಿತ್ಯದಲ್ಲಿ ಒಲವು ಮೂಡಿತೆಂದು ಸ್ವಾಮೀಜಿ ಹೇಳುತ್ತಾರೆ.     

ಶ್ರೀಗಳಿಗೆ ಹಲವಾರು ಪ್ರಶಸ್ತಿಗಳು ಒಲವು ಬಂದಿವೆ.ಅವರಿಗೆ  ಆರೂಡ ಪ್ರಶಸ್ತಿ, ಸಾಹಿತ್ಯ ಭೂಷಣ ಪ್ರಶಸ್ತಿ, ಸಾಹಿತ್ಯ ರತ್ನ, ರಾಜರತ್ನ ಪ್ರಶಸ್ತಿ, ಪರಿಸರಯೋಗಿ ಪವಾಡ, ಅಲ್ಲದೇ ಜಿನಿವಾ ವಿವಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ.ಶ್ರೀಗಳು ಇನ್ನಷ್ಟು ಸಾಹಿತ್ಯ ಕ್ಷೇತ್ರದೊಂದಿಗೆ ಹಲವು ಸಾಮಾಜಿಕ ಸೇವೆಗಳನ್ನು  ಮಾಡುವಂತಾಗಲೆಂದು ಹಾರೈಸೋಣ.ಲೇಖನ:ಸಿ.ವಾಯ್‌.ಮೆಣಸಿನಕಾಯಿಲೇಖಕರು, ಪೋಸ್ಟ್‌- ನೇಸರಗಿತಾ.ಬೈಲಹೊಂಗಲಜಿ.ಬೆಳಗಾವಿಮೊ.8050168504