ಜಾಂಬ ಹಳ್ಳದಲ್ಲಿ ಮುಳುಗಿ ಯುವಕನ ಸಾವು
ಕಾರವಾರ : ಸ್ನೇಹಿತರ ಜೊತೆಗೆ ಈಜಲು ತೆರಳಿದ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಶಿರವಾಡದ ಜಾಂಬಾ ಬಳಿ ಶನಿವಾರ ನಡೆದಿದೆ.
ದರ್ಶನ ದೊಡ್ಮನಿ ಮೃತಪಟ್ಟ ಯುವಕನಾಗಿದ್ದು, ಈತ ಮೂಲತ ಹಾವೇರಿ ನಿವಾಸಿ.ಸದ್ಯ , ಚಿತ್ತಾ ಕುಲ ಗ್ರಾಮ ನಿವಾಸಿಯಾಗಿದ್ದಾನೆ. ಈತ ಸ್ನೇಹಿತರ ಜೊತೆಗೆ ಶಿರವಾರಡದಲ್ಲಿ ಇರುವ ಅರಣ್ಯ ಪ್ರದೇಶದ ಜಾಂಬಾ ಹಳ್ಳ ದಲ್ಲಿ ಈಜಲು ತೆರಳಿದ್ರು. ಆದರೆ ದರ್ಶನ ಎನ್ನುವ ಯುವಕನಿಗೆ ಈಜು ಬರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸೈ ರೇವಣ್ಣಸಿದ್ದಪ್ಪ ತೆರಳಿ ಸ್ಥಳ ಪರಿಶೀಲನೆ ನಡೆಸಿ. ಮೃತಪಟ್ಟ ಯುವಕನ ಮೃತದೇಹ ನೀರಿನಿಂದ ಹೊರ ತೆಗೆದು ಜಿಲ್ಲಾ ಆಸ್ಪತ್ರೆಯ ಶವಗಾರರಕ್ಕೆ ದಾಖಲಿಸಿದರು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.