ಪರಂಪರೆ ಶ್ರೀಮಂತ, ವರ್ತಮಾನ ಕಠೋರ:ಡಾ.ಕೆ.ಸತೀಶ
ಹೂವಿನಹಡಗಲಿ 01 : ಉತ್ತರ ಕರ್ನಾಟಕವು ಪ್ರದೇಶವು ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ, ಸುಭಿಕ್ಷತೆಯಿಂದ ಕೂಡಿದ ಪ್ರದೇಶವಾಗಿತ್ತು. ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಉತ್ತರ ಕರ್ನಾಟಕ ವ್ಯವಸ್ಥಿತ ಸಂಘಟನೆಯ ಕೇಂದ್ರವಾಗಿತ್ತು. ವರ್ತಮಾನದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಕಠೋರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹರಪನಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಡಾ.ಕೆ.ಸತೀಶ್ ಅಭಿಪ್ರಾಯಪಟ್ಟರು. ಪಟ್ಟಣದ ಜಿಬಿಆರ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಪಾಟೀಲ್ ಅನ್ನದಾನಗೌಡರ, ಪಾಟೀಲ್ ಚನ್ನನಗೌಡರ ಸ್ಮಾರಕ ದತ್ತಿ, ಟಿ.ಎಸ್. ಮೃತ್ಯುಂಜಯಪ್ಪ ಸ್ಮಾರಕದತ್ತಿ, ಮುದ್ದಿ ನಿಂಗಪ್ಪ ಸ್ಮಾರಕ ದತ್ತಿ, ನಂದಿಹಳ್ಳಿ ಹಾಲಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಭಾಗವಹಿಸಿ ’ಉತ್ತರ ಕರ್ನಾಟಕದ ಅಭಿವೃದ್ಧಿಯ ಸ್ಥಿತಿಗತಿಗಳು’ವಿಷಯ ಕುರಿತು ಮಾತನಾಡಿದರು. ಪ್ರಾರಂಭದಲ್ಲಿ ಸಾಹಿತಿ ಡಾ.ನಾ.ಕೊಟ್ರೇಶ್ ಉತ್ತಂಗಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಡಗಲಿಯ ಸಾಹಿತ್ಯ ಪರಂಪರೆಯನ್ನು, ದತ್ತಿ ಉಪನ್ಯಾಸದ ಮಹತ್ವವನ್ನು ತಿಳಿಸಿದರು. ಪ್ರೊ.ಎಸ್.ಎಸ್.ಪಾಟೀಲ್ ಮಾತನಾಡಿ ಶಿಕ್ಷಣದಿಂದ ಮಾತ್ರ ಈ ಪ್ರದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಟಿ.ವೀರೇಂದ್ರ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಬಿಆರ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಮರೇಗೌಡ ಪಾಟೀಲ್, ದತ್ತಿದಾನಿಗಳಾದ ವಿ.ಸಿ.ಪಾಟೀಲ್ ಉಪಸ್ಥಿತರಿದ್ದರು. ಕುಮಾರಿ ಪುಷ್ಪ ಪ್ರಾರ್ಥಿಸಿದರು. ಉಪನ್ಯಾಸಕರಾದ ಗೀತ ಮಿತ್ರಾಚಾರ್ಯ ಸ್ವಾಗತಿಸಿದರು. ಡಿ.ಕೃಷ್ಣ ವಂದಿಸಿದರು. ಉಪನ್ಯಾಸಕ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.