ತಾಲೂಕಾ ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ: ಸನ್ಮಾನ
ಸಿಂದಗಿ 01: ತಾಲೂಕಾ ಕೃಷಿಕ ಸಮಾಜದ 2025-26 ರಿಂದ 2029-30 ರ ಅವಧಿಯ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಮಂಗಳವಾರ ಚುನಾವಣೆ ಜರುಗಿತು. ಶಿವಪ್ಪಗೌಡ ಬಿರಾದಾರ ಅವರು ಪುನಃ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಸಯ್ಯ ಹಿರೇಮಠ, ಪ್ರಧಾನಕಾರ್ಯದರ್ಶಿಯಾಗಿ ದೇವೆಂದ್ರ ಬಡಿಗೇರ, ಖಜಾಂಚಿಯಾಗಿ ಶ್ಯಾಯಪ್ಪ ಪೂಜಾರಿ, ಜಿಲ್ಲಾ ಪ್ರತಿನಿಧಿಯಾಗಿ ರಮೇಶ ಪೂಜಾರ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ, ಸಹಾಯಕ ಚುನಾವಣಾಧಿಕಾರಿಯಾಗಿ ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಅವರು ಕಾರ್ಯನಿರ್ವಹಿಸಿದರು.
ಚುನಾವಣೆ ಸಂದರ್ಬದಲ್ಲಿ 2025-26 ರಿಂದ 2029-30 ರ ಅವಧಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹಿಕ್ಕನಗುತ್ತಿಯ ನಾಗಪ್ಪ ಬಿರಾದಾರ, ಬಂದಾಳದ ರೇವಣಸಿದ್ದಪ್ಪ ಬಡಾನೂರ, ಸಿಂದಗಿಯ ಸಿದ್ದಪ್ಪ ಹಿರೇಕುರಬರ, ಷಡಕ್ಷರಯ್ಯ ನಂದಿಕೋಲ, ಅರವಿಂದ ಬಿರಾದಾರ, ಶಶಿಕಲಾ ಬಿರಾದಾರ, ಆರ್.ಪಿ. ಬಿರಾದಾರ, ವಕೀಲ ಬಿ.ಜಿ. ನೆಲ್ಲಗಿ, ಅಶೋಕ ಅಲ್ಲಾಪೂರ ಅವರು ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಹಿಸಿದ್ದರು.
ಕೃಷಿ ಇಲಾಖೆಯಿಂದ ನೂತನ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಉಪಾಧ್ಯಕ್ಷ ಬಸಯ್ಯ ಹಿರೇಮಠ, ಪ್ರಧಾನಕಾರ್ಯದರ್ಶಿ ದೇವೆಂದ್ರ ಬಡಿಗೇರ, ಖಜಾಂಚಿ ಶ್ಯಾಯಪ್ಪ ಪೂಜಾರಿ, ಜಿಲ್ಲಾ ಪ್ರತಿನಿಧಿ ರಮೇಶ ಪೂಜಾರ ಹಾಗೂ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ನೂತನ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿ, ಕೃಷಿ ಸಮಾಜದ ಎಲ್ಲ ಪದಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಕಾರಣರಾದ ಎಲ್ಲ ಪದಾಧಿಕಾರಿಗಳು, ಸದಸ್ಯರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ತಾಲೂಕಿನ ಕೃಷಿಕರು, ರೈತರ ಪರವಾಗಿ ನಾನು ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಿದ್ದೇನೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ತಲಿಪಿಸುವ ನಿಟ್ಟಿನಲ್ಲಿ ನಿಷ್ಠೆಯಿಂದ ಕೆಲಸವನ್ನು ಮಾಡಿದ್ದೇನೆ. ಈ ಫಲವಾಗಿ ಜಿಲ್ಲೆಯಲ್ಲಿಯೇ ಸಿಂದಗಿ ತಾಲೂಕಿನಲ್ಲಿ ಕೃಷಿಕ ಸಮಾಜದ ಕಾರ್ಯಾಲಯದ ಕಟ್ಟಡ ನಿರ್ಮಾಣಮಾಡಲಾಗಿದೆ. ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ.ಸಿಂಗೆಗೋಳ ಅವರ ಪಾತ್ರವು ಪ್ರಮುಖವಾಗಿದೆ. ಸಾಕಷ್ಟು ಶ್ರಮ ವಹಿಸಿ. ಜನಪ್ರತಿನಿಧಿಗಳಲ್ಲಿ ಅನುದಾನ ತರುವ ಮೂಲಕ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಲ್ಲದೇ 50 ಜನ ರೈತರಿಗೆ ಕೃಷಿ ಅಧ್ಯಯನ ಪ್ರವಾಸ ಮಾಡಲಿಸಲಾಗಿದೆ. ಎಲ್ಲ ಪದಾಧಿಕಾರಿಗಳ ಹಾಗೂ ಸದಸ್ಯರ ಸಹಕಾರದಿಂದ ತಾಲೂಕಿನಲ್ಲಿ ಕೃಷಿ ಸಮಾಜದ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಮಾಡೋಣ ಎಂದು ಹೇಳಿದರು.
ನೂತನ ಜಿಲ್ಲಾ ಪ್ರತಿನಿಧಿ ರಮೇಶ ಪೂಜಾರ, ಕಾರ್ಯಕಾರಿ ಸಮಿತಿ ನೂತನ ಸದಸ್ಯ ಬಿ.ಜಿ. ನೆಲ್ಲಗಿ ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ಕೃಷಿಕ ಸಮಾಜದ ಬೆಳವಣಿಗೆಯಲ್ಲಿ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಅವರ ಪಾತ್ರ ಹಿರಿಯದಾಗಿದೆ. ಅವರ ಮಾರ್ಗದರ್ಶನದಲ್ಲಿ ತಾಲೂಕಿನ ರೈತರಿಗೆ ಅನಕೂಲಕರವಾಗುವ ಕೃಷಿ ಮೇಳ, ಕಾರ್ಯಾಗಾರ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸೋಣ ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ ಮಾತನಾಡಿ, ಕೃಷಿ ಚಟುವಟಿಕೆ ಉತ್ತೇಜನ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳ ಸಲಹೆ ಪಡೆಯಲಾಗುವುದು ಎಂದು ಹೇಳಿದರು.
ರೈತರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.